Advertisement

ರಾಜೀವ್‌ ಗಾಂಧಿ ವಿ.ವಿ. ಪರೀಕ್ಷಾ ವೇಳಾಪಟ್ಟಿ ಎಡವಟ್ಟು: ಸಂಕಷ್ಟದಲ್ಲಿ ವಿದ್ಯಾರ್ಥಿಗಳು!

12:39 AM Sep 22, 2019 | mahesh |

ಮಂಗಳೂರು: ರಾಜೀವ್‌ ಗಾಂಧಿ ವಿಶ್ವವಿದ್ಯಾನಿಲಯದಿಂದ ನಡೆಸಲ್ಪಡುವ ಪ್ಯಾರಾ ಮೆಡಿಕಲ್‌ ಪ್ರಾಕ್ಟಿಕಲ್‌ ಪರೀಕ್ಷೆಯ ವೇಳಾಪಟ್ಟಿಯನ್ನು ದಿಢೀರ್‌ ನೀಡಿರುವುದರಿಂದ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಿದ್ದಾರೆ.

Advertisement

ರಾಜೀವ್‌ ಗಾಂಧಿ ವಿ.ವಿ.ಯ ಮೆಡಿಕಲ್‌ ಕೋರ್ಸ್‌ಗಳಾದ ಬಿಎಸ್ಸಿ ಮೆಡಿಕಲ್‌ ಲ್ಯಾಬೊರೇಟರಿ ಟೆಕ್ನಾಲಜಿ, ಆಪರೇಷನ್‌ ಟೆಕ್ನಿಶಿಯನ್‌, ಡಯಾಲಿಸಿಸ್‌ ಮೊದಲಾದ ವಿಭಾಗಗಳಿಗೆ ಅಂತಿಮ ಥಿಯರಿ ಪರೀಕ್ಷೆಯನ್ನು ಸೆ. 18ರಂದು ನಿಗದಿಪಡಿಸಲಾಗಿತ್ತು. ಆದರೆ ರಾಜ್ಯದಲ್ಲಿ ನೆರೆ ಉಂಟಾದ ಹಿನ್ನೆಲೆಯಲ್ಲಿ ಸೆ. 30ಕ್ಕೆ ಮುಂದೂಡಲಾಗಿತ್ತು. ಅದಕ್ಕಾಗಿ ಬಂದ ಪರೀಕ್ಷಾ ವೇಳಾಪಟ್ಟಿಯಲ್ಲಿ ಥಿಯರಿ ಪರೀಕ್ಷೆಯಾದ ಬಳಿಕ ಪ್ರಾಕ್ಟಿಕಲ್‌ ಪರೀಕ್ಷೆ ಹಾಗೂ ವೈವಾ ಇರಲಿದೆ ಎಂದು ಬರೆಯಲಾಗಿತ್ತು. ಆದರೆ ಇದೀಗ ಥಿಯರಿ ಪರೀಕ್ಷೆಗೂ ಮೊದಲೇ ಪ್ರಾಕ್ಟಿಕಲ್‌ ಪರೀಕ್ಷೆ ಇರಲಿದೆ ಎಂಬುದಾಗಿ ಪರೀಕ್ಷೆ ಆರಂಭಕ್ಕೂ 2 ದಿನ ಮುಂಚಿತವಾಗಿ ವೇಳಾಪಟ್ಟಿ ಕಳುಹಿಸಲಾಗಿದೆ.

ಇದರಿಂದ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದಾರೆ. ಥಿಯರಿ ಪರೀಕ್ಷೆ ಬಳಿಕ ಪ್ರಾಕ್ಟಿಕಲ್‌ ಉಲ್ಲೇಖ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಇದ್ದ ಪರೀಕ್ಷೆ ಯನ್ನು ಮುಂದೂಡಲಾಗಿತ್ತು. ಆ ಸಂದರ್ಭದಲ್ಲಿ ಬಂದ ವೇಳಾಪಟ್ಟಿಯಲ್ಲಿ ಥಿಯರಿ ಪರೀಕ್ಷೆಯ ಎರಡು ದಿನಗಳ ಬಳಿಕ ಪ್ರಾಕ್ಟಿಕಲ್‌ ಪರೀಕ್ಷೆಯನ್ನು ಮಾಡಲಾಗುವುದು ಎಂಬುದಾಗಿ ತಿಳಿಸಲಾಗಿತ್ತು.

ವಿ.ವಿ. ವೆಬ್‌ಸೈಟ್‌ಗಳಲ್ಲೂ ಮುಂಚಿತವಾಗಿ ಮಾಹಿತಿ ನೀಡದ ಕಾರಣ ವಿದ್ಯಾರ್ಥಿಗಳು ಥಿಯರಿ ಪರೀಕ್ಷೆಗೆ ಮಾತ್ರ ಒತ್ತು ನೀಡಿದ್ದರು. ಈಗ ಪ್ರಾಕ್ಟಿಕಲ್‌ ಪರೀಕ್ಷೆ ಮುಂಚಿತವಾಗಿ ಬಂದಿರುವುದರಿಂದ ಗೊಂದಲಕ್ಕೊಳಗಾಗಿದ್ದಾರೆ.ಈ ಹಿಂದೆ ಕೆಲವು ಬಾರಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮುಂದೂಡಿದಷ್ಟು ಫಲಿತಾಂಶ ತಡವಾಗುತ್ತದೆ.

ಇದರಿಂದ ವಿದ್ಯಾರ್ಥಿಗಳಿಗೆ ಇಂಟರ್ನ್
ಶಿಪ್‌ ಹಾಗೂ ಉದ್ಯೋಗವಕಾಶದಲ್ಲಿ ಸಮಸ್ಯೆ ಎದುರಾಗುತ್ತದೆ. ಅದಕ್ಕಾಗಿ ಪ್ರಾಕ್ಟಿಕಲ್‌ ಪರೀಕ್ಷೆಯನ್ನು ಮುಂಚೆ ಮಾಡಲಾಯಿತು. ಈ ಹಿಂದೆ ಪರೀಕ್ಷಾ ತಯಾರಿಗಾಗಿ ರಜೆಗಳನ್ನು ನೀಡಲಾಗಿತ್ತು ಹಾಗಾಗಿ ವಿದ್ಯಾರ್ಥಿಗಳಿಗೆ ಅಷ್ಟು ಒತ್ತಡ ಬೀಳುವ ಸಾಧ್ಯತೆ ಕಡಿಮೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಸರಿಯಾಗಿದೆ.
 - ಖಾಸಗಿ ಮೆಡಿಕಲ್‌ ಕಾಲೇಜಿನ ಪ್ರಾಂಶುಪಾಲೆ

Advertisement
Advertisement

Udayavani is now on Telegram. Click here to join our channel and stay updated with the latest news.

Next