Advertisement
ವಿದೇಶಗಳಲ್ಲಿ ಕುಟುಂಬ ವೈದ್ಯ (ಫ್ಯಾಮಿಲಿ ಡಾಕ್ಟರ್) ಪರಿಕಲ್ಪನೆ ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ. ಭಾರತದ ಸಹಿತ ಬಹುತೇಕ ರಾಷ್ಟ್ರಗಳಲ್ಲಿ ಇಂದಿಗೂ ಕುಟುಂಬ ವೈದ್ಯರು ಇರುವರಾದರೂ ಅಷ್ಟೊಂದು ವ್ಯವಸ್ಥಿತವಾಗಿ ಸಾಮಾನ್ಯ ಜನರಿಗೆ ಈ ಸೇವೆ ಲಭಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಅರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವು ವೈದ್ಯಕೀಯ ವಿಜ್ಞಾನ ವಿಭಾಗದಿಂದ ಫ್ಯಾಮಿಲಿ ಮೆಡಿಸಿನ್ ಸ್ನಾತಕೋತ್ತರ ಕೋರ್ಸ್ ಆರಂಭಿಸಿ, ಕುಟುಂಬ ವೈದ್ಯರ ಸೇವೆಯನ್ನು ಅತಿ ಸುಲಭವಾಗಿ ಸಾಮಾನ್ಯ ಜನರು ಪಡೆಯುವಂತೆ ಮಾಡಲು ಯೋಜನೆ ರೂಪಿಸಿದೆ.
ಕುಟುಂಬ ವೈದ್ಯರಿಗೆ ಸಾಕಷ್ಟು ಬೇಡಿಕೆಯಿದೆ. ಆದರೆ ಬಹುತೇಕರಿಗೆ ಇದರ ಬಗ್ಗೆ ಸ್ಪಷ್ಟ ಕಲ್ಪನೆಯಿಲ್ಲ. ಸಣಪುಟ್ಟ ಅನಾರೋಗ್ಯಗಳು ಕಾಡಿದಾಗ ಜನರು ನೇರವಾಗಿ ತಜ್ಞ ವೈದ್ಯರನ್ನೇ ಸಂಪರ್ಕಿಸುತ್ತಾರೆ. ಇದನ್ನು ತಪ್ಪಿಸಿ, ಆರೋಗ್ಯಕ್ಕೆ ಸಂಬಂಧಿಸಿದ ಸಣ್ಣಪುಟ್ಟ ವಿಚಾರಗಳಿಗೆ ಫ್ಯಾಮಿಲಿ ಮೆಡಿಸಿನ್ ಕೋರ್ಸ್ ಪೂರೈಸಿದ ವೈದ್ಯರ ಸಲಹೆ ಪಡೆಯುವ ಉದ್ದೇಶದಿಂದ ಈ ಕೋರ್ಸ್‌ನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ.
Related Articles
Advertisement
ಕೋರ್ಸ್ ವಿನ್ಯಾಸವಿವಿ ವ್ಯಾಪ್ತಿಯ ಕಾಲೇಜುಗಳು 2020-21ನೇ ಸಾಲಿಗೆ ಫ್ಯಾಮಿಲಿ ಮೆಡಿಸಿನ್ ಕೋರ್ಸ್‌ಗೆ ಅರ್ಜಿ ಆಹ್ವಾನಿಸಬೇಕು. ಪ್ರತಿ ಕಾಲೇಜಿಗೆ ವರ್ಷಕ್ಕೆ ನಾಲ್ಕು ಅಭ್ಯರ್ಥಿಗಳನ್ನು ದಾಖಲಿಸಿಕೊಳ್ಳುವ ಅವಕಾಶ ಸಿಗಲಿದೆ. ಎಂಬಿಬಿಎಸ್ ಪೂರೈಸಿದ ಅಭ್ಯರ್ಥಿಗಳು ಸ್ನಾತಕೋತ್ತರ ವಿಭಾಗದಲ್ಲಿ ಫ್ಯಾಮಿಲಿ ಮೆಡಿಸಿನ್ ಕೋರ್ಸ್‌ನ್ನು ಸ್ಪೆಷಲೈಸೇಷನ್ ಆಗಿ ಪಡೆದುಕೊಂಡು, ಮೂರು ವರ್ಷಗಳ ಕಾಲ ಅಧ್ಯಯನ ಮಾಡಬೇಕಾಗುತ್ತದೆ. ಸಾಮಾನ್ಯ ಸ್ನಾತಕೋತ್ತರ ಪದವಿಯಂತೆ ಪ್ರಮಾಣಪತ್ರವನ್ನು ವಿವಿಯಿಂದ ನೀಡಲಾಗುತ್ತದೆ. ಪ್ರಮಾಣಪತ್ರ ಪಡೆದವರು ಫ್ಯಾಮಿಲಿ ವೈದ್ಯರಾಗಿ ಸೇವೆ ಸಲ್ಲಿಸಲು ಅರ್ಹರಾಗುತ್ತಾರೆ ಎಂದು ವಿವಿಯ ಉನ್ನತಾಧಿಕಾರಿಯೊಬ್ಬರು ಮಾಹಿತಿ ನೀಡಿದರು.