Advertisement

ರಾಜೀವ್‌ ಗಾಂಧಿ ಪ್ರವಾಸ ಕಥನ!

07:29 AM May 11, 2019 | mahesh |

ಇನ್ನು ಎರಡು ದಿನಗಳಲ್ಲಿ ಆರನೇ ಹಂತದ ಮತದಾನ (ಮೇ 12) ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ನವದೆಹಲಿಯಲ್ಲಿ ಬುಧವಾರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಜೀವ್‌ ಗಾಂಧಿಯವರು ಐಎನ್‌ಎಸ್‌ ವಿರಾಟ್‌ ಯುದ್ಧ ನೌಕೆಯನ್ನು ವೈಯಕ್ತಿಕ ಟ್ಯಾಕ್ಸಿಯಂತೆ ಬಳಕೆ ಮಾಡಿಕೊಂಡಿದ್ದರು ಎಂದು ಆರೋಪಿಸಿದ್ದರು. ಅದಕ್ಕೆ ಕಾಂಗ್ರೆಸ್‌ ವತಿಯಿಂದಲೂ ಪ್ರಬಲ ಟೀಕೆ ವ್ಯಕ್ತವಾಗಿ ಮೋದಿ ಐಎಎಫ್ ಯುದ್ಧ ವಿಮಾನವನ್ನು ಟ್ಯಾಕ್ಸಿಯಂತೆ ಬಳಸಿದ್ದಾರೆ. ಅದಕ್ಕಾಗಿ ಕೇವಲ 744 ರೂ. ನೀಡಿದ್ದಾರೆ ಮೋದಿ ಎಂದು ಪ್ರತಿ ಟೀಕೆ ವ್ಯಕ್ತವಾಗಿದೆ. ಹಾಗಿದ್ದರೆ 1987ರಲ್ಲಿ ರಾಜೀವ್‌ ಗಾಂಧಿ ಯಾರ ಜತೆಗೆ ಪ್ರವಾಸ ಹೋಗಿದ್ದರೆನ್ನುವ ಮತ್ತು ಏನೇನು ಪೂರೈಸಲಾಗಿತ್ತು ಎಂಬ ವಿವರವನ್ನು ಇಂಡಿಯಾ ಟುಡೇ ಪ್ರಕಟಿಸಿತ್ತು.

Advertisement

ಮಾನವ ರಹಿತ ದ್ವೀಪ
ಬಂಗಾರಂ ಎನ್ನುವ ಲಕ್ಷದ್ವೀಪದಲ್ಲಿರುವ ಒಂದು ದ್ವೀಪವನ್ನು ರಾಜೀವ್‌ ಗಾಂಧಿ ಅವರ ಪ್ರವಾಸಕ್ಕೆ ಆಯ್ಕೆ ಮಾಡಲಾಗಿತ್ತು. ಲಕ್ಷದ್ವೀಪ ಹೊಂದಿರುವ 36 ದ್ವೀಪ ಸಮೂಹಗಳ ಪೈಕಿ ಬಂಗಾರಂಗೆ ಮಾತ್ರ ವಿದೇಶಿಯರ ಪ್ರವೇಶಕ್ಕೆ ಮತ್ತು ಮೋಜು-ಮಸ್ತಿಗೆ ಅವಕಾಶ ನೀಡಲಾಗಿತ್ತು. ಜಗತ್ತಿನ ಇತರ ಭಾಗಗಳಿಂದ ಆ ಭೂಪ್ರದೇಶಕ್ಕೆ ಸಂಪರ್ಕ ಇಲ್ಲ.
0.5 ಚದರ ಕಿ.ಮೀ- ದ್ವೀಪದ ವ್ಯಾಪ್ತಿ
64, 429 ಲಕ್ಷದ್ವೀಪದ ಜನಸಂಖ್ಯೆ (2011ರ ಜನಗಣತಿ)
44,000ರಾಜೀವ್‌ ಗಾಂಧಿ ಪ್ರವಾಸ ಕೈಗೊಂಡಿದ್ದ ವೇಳೆಯ ಜನ‌ಸಂಖ್ಯೆ
465 ಕಿಮೀ- ಕೊಚ್ಚಿಯಿಂದ ಇರುವ ದೂರ

ದಿನಗಳನ್ನು ಹೇಗೆ ಕಳೆದಿದ್ದರು?
ತಿನ್ನಕ್ಕರ ಮತ್ತು ಪರಲಿ ಎಂಬ 2 ಸ್ಥಳಗಳಿಗೆ ಹೋಗಿದ್ದರು ಮತ್ತು ಓಡಾಡಿದ್ದರು. ರಾಜೀವ್‌, ರಾಹುಲ್‌, ಪ್ರಿಯಾಂಕಾ ಮನಃಪೂರ್ತಿ ನೀರಿನಲ್ಲಿ ಆಟವಾಡಿದ್ದರು.
ಸಂಗೀತ, ಪಾರ್ಟಿ ಜತೆ ಜತೆಗೇ ಇತ್ತು.
ಸೋನಿಯಾ, ಅವರ ತಾಯಿ, ಜಯಾ ಬಚ್ಚನ್‌ ಲೋಕಾಭಿರಾಮವಾಗಿ ಮಾತನಾಡುತ್ತಾ, ಬೀಚ್‌ನಲ್ಲಿ ಕುಳಿತುಕೊಂಡು ಇರುತ್ತಿದ್ದರು.
ರಾಜೀವ್‌ ಗಾಂಧಿಯವರು ತಮಗೆ ತಿಳಿದ ದಾರಿಯಲ್ಲಿ ನಡೆದಾಡುತ್ತಿದ್ದರು.

ಪ್ರವಾಸಕ್ಕೆ ಹೋಗಿದ್ದವರು
ರಾಜೀವ್‌ ಗಾಂಧಿ
ಸೋನಿಯಾ ಗಾಂಧಿ
ರಾಹುಲ್‌ ಗಾಂಧಿ
ಪ್ರಿಯಾಂಕಾ ಗಾಂಧಿ
ಸೋನಿಯಾ ಸಹೋದರ, ಅವರ ಪತ್ನಿ ಮತ್ತು ಪುತ್ರಿ
ಸೋನಿಯಾ ತಾಯಿ
ಸೋನಿಯಾರ ಸೋದರ ಸಂಬಂಧಿ
ಅಮಿತಾಭ್‌ ಬಚ್ಚನ್‌ರ ಪತ್ನಿ ಜಯಾ ಬಚ್ಚನ್‌ ಮತ್ತು ಮಕ್ಕಳು
ಅಮಿತಾಭ್‌ ಸಹೋದರ ಅಜಿತಾಭ್‌ಬಚ್ಚನ್‌ ಪುತ್ರಿ
ಬೀರೇಂದ್ರ ಸಿಂಗ್‌ರ ಪತ್ನಿ ಮತ್ತು ಪುತ್ರಿ
ಕೇಂದ್ರದ ಮಾಜಿ ಸಚಿವ ಅರುಣ್‌ ಸಿಂಗ್‌ ಸಹೋದರ
06- ಇಷ್ಟು ಮಂದಿ ಇಟಲಿ ಪ್ರಜೆಗಳು
02- ಅಪರಿಚಿತ ವಿದೇಶಿಯರು

ಯಾರು, ಯಾವಾಗ ಬಂಗಾರಂಗೆ ಆಗಮಿಸಿದ್ದರು?
ಡಿಸೆಂಬರ್‌ 30ರ ಮಧ್ಯಾಹ್ನದ ನಂತರ ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ ಆಗಮಿಸಿದ್ದರು. ಒಂದು ದಿನದ ನಂತರ ಡಿ.31ರಂದು ವಿಶೇಷ ಅತಿಥಿಯಾಗಿದ್ದ ಅಮಿತಾಭ್‌ ಬಚ್ಚನ್‌ ಅಲ್ಲಿಗೆ ತೆರಳಿದ್ದರು.
ಅವರ ಪತ್ನಿ ಜಯಾ ಬಚ್ಚನ್‌ ಮತ್ತು ಮಕ್ಕಳು ಪ್ರಿಯಾಂಕಾ ಗಾಂಧಿ ಜತೆಗೆ ನಾಲ್ಕು ದಿನಗಳ ಮೊದಲೇ ರಜಾ ಕಳೆಯಲು ಬಂದಿದ್ದರು.
ಅಮಿತಾಭ್‌ ಬಚ್ಚನ್‌ ಇದ್ದ ಹೆಲಿಕಾಪ್ಟರ್‌ ಕರವತ್ತಿ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಿಸಲು ಇಳಿದಿದ್ದಾಗ “ದ ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆಯ ಛಾಯಾಚಿತ್ರಗ್ರಾಹಕನಿಗೆ ಹಿಂದಿ ಚಿತ್ರನಟನ ಗುರುತು ಸಿಕ್ಕಿತು. ಬಚ್ಚನ್‌ ಪ್ರತಿರೋಧದ ಹೊರತಾಗಿಯೂ ಅವರು ನಾಲ್ಕು ಫೋಟೋ ತೆಗೆದಿದ್ದರು.

Advertisement

ನಿರ್ವಹಣೆಯ ಹೊಣೆ
ಲಕ್ಷದ್ವೀಪದ ಸೊಸೈಟಿ ಫಾರ್‌ದ ಪ್ರೊಮೇಷನ್‌ ಆಫ್ ರಿಕ್ರಿಯೇಷನ್‌, ಟೂರಿಸಂ ಆ್ಯಂಡ್‌ ವಾಟರ್‌ ಸ್ಫೋರ್ಟ್ಸ್ ಪ್ರಧಾನಿ ರಾಜೀವ್‌ ಗಾಂಧಿ ಮತ್ತು ಅವರ ಕುಟುಂಬ ವರ್ಗ, ಇತರರಿಗೆ ಆತಿಥ್ಯ ನೀಡುವ ಹೊಣೆ ವಹಿಸಿಕೊಂಡಿತ್ತು. ಲಕ್ಷದ್ವೀಪದ ಒಟ್ಟು ಆಡಳಿತ ವ್ಯವಸ್ಥೆಯೇ ಅವರ ಬೇಕುಬೇಡಗಳನ್ನು ನೋಡಿಕೊಳ್ಳಲು ಟೊಂಕ ಕಟ್ಟಿ ನಿಂತಿತ್ತು.
100 ಕೋಳಿಗಳನ್ನು ಸಾಕುವ ಸಾಮರ್ಥ್ಯ ಇರುವ ತಾತ್ಕಾಲಿಕ ಸಾಕಣೆ ಕೇಂದ್ರದ (ಪೌಲ್ಟ್ರಿ) ವ್ಯವಸ್ಥೆ ಕಲ್ಪಿಸಲಾಗಿತ್ತು. ಗಾಂಧಿ ಕುಟುಂಬದ ಆಪ್ತ ಬಾಣಸಿಗರ ಉಸ್ತುವಾರಿಯಲ್ಲಿ ಇಬ್ಬರು ಉಪ- ಬಾಣಸಿಗರನ್ನು ನಿಯೋಜನೆ ಮಾಡಲಾಗಿತ್ತು.
ನವದೆಹಲಿಯಿಂದಲೇ ವಿಶೇಷ ಲಕ್ಷ್ಯ ವಹಿಸಿ ಉತ್ತಮ ದರ್ಜೆಯ ಮದ್ಯದ ಬಾಟಲಿಗಳನ್ನು ಅಲ್ಲಿಗೆ ತರಲಾಗಿತ್ತು. ಇನ್ನು ಕುಡಿಯಲು ಅಗತ್ಯವಾಗಿರುವ ನೀರನ್ನು ಕರವತ್ತಿಯಿಂದ ಪೂರೈಸಲಾಗಿತ್ತು.

ಏನೇನು ಪೂರೈಸಲಾಗಿತ್ತು?
ಡಿ.23ರಂದು ಬಂಗಾರಂಗೆ ಹಡಗಿನ ಮೂಲಕ ಮೊದಲ ಕಂತಿನ ವಸ್ತುಗಳನ್ನು ಸರಬರಾಜು ಮಾಡಲಾಗಿತ್ತು
ಮೂರು ದಿನಗಳ ನಂತರ ಮತ್ತೂಂದು ಸುತ್ತಿನ ಅಗತ್ಯ ವಸ್ತುಗಳನ್ನು ಪೂರೈಸಲಾಗಿತ್ತು.
1988ರ ಜ.1ರಂದು ಮತ್ತೂಂದು ಹಂತದ ಪೂರೈಕೆ ನಡೆದಿತ್ತು.
1.ಲಕ್ಷದ್ವೀಪದಿಂದ: ಆಗ ತಾನೇ ಹಿಡಿದ ಮೀನುಗಳು
ಪಪ್ಪಾಯಿ, ಚಿಕ್ಕು, ಬಾಳೆಹಣ್ಣು, ಪೇರಳೆ.
2. ಕೊಚ್ಚಿಯಿಂದ: ಕ್ಯಾಡ್‌ಬರಿ ಚಾಕಲೇಟ್‌ಗಳು, 40 ಕ್ರೇಟ್‌ನಲ್ಲಿ ತಂಪು ಪಾನೀಯ, 300 ಬಾಟಲ್‌ – ಖನಿಜಯುಕ್ತ ನೀರು,
ಅಮುಲ್‌ ಬೆಣ್ಣೆ, ಪರಿಷ್ಕರಿಸಿದ ಗೇರುಬೀಜ, ಮೋಸಂಬಿ, 105 ಕೆಜಿಯಷ್ಟು ಬಾಸ್‌ಮತಿ ಅಕ್ಕಿ, 20 ಕೆಜಿ ಹಿಟ್ಟು

ಐಎನ್‌ಎಸ್‌ ವಿರಾಟ್‌ ಪ್ರಸ್ತಾಪ ಏಕಾಯಿತು?
ವಿವಿಧ ಮಾಧ್ಯಮಗಳಲ್ಲಿ ಈಗಾಗಲೇ ವರದಿಯಾದಂತೆ ಪ್ರಧಾನಿ ಮತ್ತು ಅವರ ಕುಟುಂಬದವರನ್ನು ಲಕ್ಷದ್ವೀಪಕ್ಕೆ ಕರೆದೊಯ್ಯಲು ಐಎನ್‌ಎಸ್‌ ವಿರಾಟ್‌ ಅನ್ನು ಬಳಕೆ ಮಾಡಲಾಗಿತ್ತು.
ಬಳಿಕ ಅದನ್ನು ಹತ್ತು ದಿನಗಳ ಕಾಲ ಅರಬೀ ಸಮುದ್ರಕ್ಕೆ ತೆರಳಲು ಸೂಚಿಸಲಾಗಿತ್ತು. ಇದರ ಜತೆಗೆ ಒಂದು ಸಬ್‌ಮರೀನ್‌ ಅನ್ನು ನಿಯೋಜಿಸಲಾಗಿತ್ತು.
ಐಎನ್‌ಎಸ್‌ ವಿರಾಟ್‌ ಯುದ್ಧನೌಕೆ. ಆರಂಭದಲ್ಲಿ ಅದನ್ನು 1959ರಲ್ಲಿ ಬ್ರಿಟಿಷ್‌ ರಾಯಲ್‌ ನೇವಿ ಬಳಕೆ ಮಾಡಿತ್ತು. 1986ರಲ್ಲಿ ಅದನ್ನು ಭಾರತದ ನೌಕಾಪಡೆ ಖರೀದಿಸಿತು. ಅದು ಸಮುದ್ರದ ಕಾವಲು, ಯುದ್ಧ ಸಂದರ್ಭಗಳಲ್ಲಿ ವಿಮಾನಗಳ ಹಾರಾಟಗಳಿಗೆ ಬಳಕೆ ಮಾಡಲಾಗುತ್ತದೆ. 2013ರಲ್ಲಿ ಅದನ್ನು ಸೇವೆಯಿಂದ ಹಿಂಪಡೆಯಲಾಯಿತು.

ಅಧಿಕಾರಿಗಳು ಏನುಹೇಳಿದ್ದರು?
ಸೊಸೈಟಿ ಫಾರ್‌ ದ ಪ್ರೊಮೇಷನ್‌ ಆಫ್ ರಿಕ್ರಿಯೇಷನ್‌, ಟೂರಿಸಂ ಆ್ಯಂಡ್‌ ವಾಟರ್‌ ಸ್ಫೋರ್ಟ್ಸ್ ಅಧಿಕಾರಿಗಳಿಗೆ ಎಲ್ಲಾ ರೀತಿಯ ಬಿಲ್‌ಗ‌ಳನ್ನು ನೀಡಲು ಸೂಚಿಸಲಾಗಿತ್ತು ಎಂದು ಲಕ್ಷದ್ವೀಪದ ಅಂದಿನ ಜಿಲ್ಲಾಧಿಕಾರಿ ಕೆ.ಕೆ.ಶರ್ಮಾ ಹೇಳಿದ್ದರು.
ಅತಿಗಣ್ಯ ಅತಿಥಿಗಳಿಗಾಗಿ ಯಾವುದೇ ವಿಶೇಷ ವ್ಯವಸ್ಥೆ ಮಾಡಿರಲಿಲ್ಲ. ಪ್ರಧಾನಿಯವರನ್ನು ದ್ವೀಪಕ್ಕೆ ಕರೆದುಕೊಂಡು ಹೋಗಿ ತಲಪಿಸುವುದು ಮಾತ್ರ ನನ್ನ ಹೊಣೆಯಾಗಿತ್ತು ಎಂದಿದ್ದರು ಲಕ್ಷದ್ವೀಪದ ವಿಶೇಷಾಧಿಕಾರಿಯಾಗಿದ್ದ ವಜಾಹತ್‌ ಹಬೀಬುಲ್ಲಾ.

(ಚಿತ್ರ, ಮಾಹಿತಿ ಕೃಪೆ: ಇಂಡಿಯಾ ಟುಡೇ)

Advertisement

Udayavani is now on Telegram. Click here to join our channel and stay updated with the latest news.

Next