Advertisement

ಕೆಪಿಸಿಸಿ ಕಚೇರಿಯಲ್ಲಿ ರಾಜೀವ್‌ಗಾಂಧಿ ಪುಣ್ಯಸ್ಮರಣೆ

12:09 PM May 22, 2018 | |

ಬೆಂಗಳೂರು: ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರ ಆದರ್ಶ ಚಿಂತನೆಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

Advertisement

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರ ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಡೀ ದೇಶವೇ ಇಂದು ರಾಜೀವ್‌ ಗಾಂಧಿಯವರ ಸ್ಮರಣ ಮಾಡುತ್ತಿದೆ. 21ನೇ ಶತಮಾನಕ್ಕೆ ಭಾರತವನ್ನು ಅಣಿಗೊಳಿಸುವಲ್ಲಿ ಅವರ ಪಾತ್ರ ಮಹತ್ವದಾಗಿತ್ತು ಎಂದು ಹೇಳಿದರು.

ದೇಶದಲ್ಲಿ  ಸಂಪರ್ಕ ಕ್ರಾಂತಿ ಮಾಡಿ, ಎಲ್ಲರ ಕೈಗೂ ಮೊಬೈಲ್‌ ಬರುವಂತೆ ಮಾಡಿದರು. ಯುವಕರಿಗೆ, ಮಹಿಳೆಯರಿಗೆ ಆಡಳಿತದಲ್ಲಿ ಪಾಲು ಕೊಟ್ಟವರು ರಾಜೀವ್‌ ಗಾಂಧಿ. ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಅವರ ಆತ್ಮಕ್ಕೆ ಗೌರವ ಸಲ್ಲುತ್ತದೆ ಎಂದು ಕಾರ್ಯಕರ್ತರಿಗೆ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ರಾಜೀವ್‌ಗಾಂಧಿ ಅವರ ಚಿಂತನೆಯ ಒಂದು ಅಂಶವನ್ನು ಅಳವಡಿಸಿಕೊಂಡಿದ್ದರೂ ಭಾರತವನ್ನು ಯಾರಿಂದಲೂ ಹಿಡಿಯಲು ಆಗುತ್ತಿರಲಿಲ್ಲ. ಆದರೆ, ಮೋದಿಯವರು ಬೇರೆ ದಾರಿಯಲ್ಲಿ ಹೋಗುತ್ತಿದ್ದಾರೆ. ಬಿಜೆಪಿಗೆ ಸಹಾಯ ಮಾಡಿದ ವರ್ತಕರು, ಸಣ್ಣ ವ್ಯಾಪಾರಸ್ಥರು ಇಂದು ಭಯ ಭೀತಿಯಲ್ಲಿ¨ªಾರೆ ಎಂದು ಟೀಕಿಸಿದರು.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಬಾರದೇ ಇರಲು ಹಲವು ಕಾರಣಗಳಿವೆ. ಜನರ ತೀರ್ಪನ್ನು ಒಪ್ಪಿಕೊಂಡಿದ್ದೇವೆ. ಸ್ವಾರ್ಥಕ್ಕಾಗಿ ಜೆಡಿಎಸ್‌ ಜತೆ ಅಧಿಕಾರ ಹಿಡಿದಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಆಗುವ ಅನಾಹುತವನ್ನು ತಪ್ಪಿಸುವ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು.

Advertisement

ಮುಂದೆ ನಮಗೆ ಪಕ್ಷ ಕಟ್ಟುವುದು ಕಠಿಣ ಇರಬಹುದು. ಕಷ್ಟ ಬರುತ್ತಿರುವುದು ನನಗೆ ಕಾಣಿಸುತ್ತಿದೆ. ಜೆಡಿಎಸ್‌ ಜತೆ ಸರ್ಕಾರ ಮಾಡಿದ್ದಾರೆ ಅಂತ ಕಾರ್ಯಕರ್ತರು ಬೇಸರಪಡುವ ಅಗತ್ಯವಿಲ್ಲ ಎಂದು ಮನವಿ ಮಾಡಿದರು. ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ ಮಾತನಾಡಿ, ದೇಶದಲ್ಲಿ 18 ವರ್ಷದ ಯುವಕರಿಗೆ ಮತದಾನದ ಹಕ್ಕು ನೀಡಿದ್ದು ರಾಜೀವ್‌ ಗಾಂಧಿಯವರ ದೊಡ್ಡ ಸಾಧನೆ.

18 ವರ್ಷದ ಯುವಕರಿಗೆ ಮತದಾನದ ಹಕ್ಕು ನೀಡುವುದನ್ನ ಅಂದು ಬಿಜೆಪಿ, ಆರ್‌ಎಸ್‌ಎಸ್‌ ವಿರೋಧಿಸಿತ್ತು. ರಾಜೀವ್‌ಗಾಂಧಿ ಹೆಸರು, ಅವರ ಕೆಲಸ ಕಾಂಗ್ರೆಸ್‌ ಪಕ್ಷಕ್ಕೆ ಒಂದು ಶಕ್ತಿ ಎಂದು ವಿವರಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌.ಪಾಟೀಲ್‌, ಮಾಜಿ ಸಚಿವ ರಾಮಲಿಂಗಾರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next