Advertisement
2016ರಲ್ಲಿ ಕ್ರೀಡಾಂಗಣವನ್ನು ಉದ್ಘಾಟಿಸಲಾಗಿತ್ತು. ತಿಂಗಳ ಬಳಿಕ ಅಧಿಕೃತ ಉದ್ಘಾಟನೆ ನಡೆಯಿತು. ಒಟ್ಟಾರೆ ಸ್ಟೇಡಿಯಂ ನಿರ್ಮಾಣಕ್ಕೆ ಒಟ್ಟು 237 ಕೋಟಿ ರೂ. ಖರ್ಚಾಗಿದೆ. 23 ಎಕರೆ ಜಾಗದಲ್ಲಿ ಸ್ಟೇಡಿಯಂ ನಿರ್ಮಿಸಲಾಗಿದೆ. 25 ಸಾವಿರ ಮಂದಿ ಕುಳಿತು ಪಂದ್ಯ ವೀಕ್ಷಿಸಬಹುದಾಗಿದೆ. ಎಲ್ಲ ಮೂಲಸೌಕರ್ಯ ಅಚ್ಚುಕಟ್ಟಾಗಿದೆ. ಆದರೆ ಸೂಕ್ತ ನಿರ್ವಾಹಕರಿಲ್ಲದೆ ಕ್ರೀಡಾಂಗಣ ಸೊರಗಿದೆ. ಇದುವರೆಗೆ ಇಲ್ಲಿ ಅಂತಾರಾಷ್ಟ್ರೀಯಪಂದ್ಯವನ್ನು ಆಯೋಜಿಸಲು ಸಾಧ್ಯವಾಗದಿರುವುದಕ್ಕೆ ಇದು ಪ್ರಮುಖ ಕಾರಣ ಎನ್ನಲಾಗಿದೆ.