ದಾವಣಗೆರೆ: ಭಾರತರತ್ನ, ಮಾಜಿ ಪ್ರಧಾನಿ ದಿ| ರಾಜೀವ್ ಗಾಂಧಿ ಮಾಹಿತಿ ತಂತ್ರಜ್ಞಾನ, ದೂರ ಸಂಪರ್ಕ ಕ್ಷೇತ್ರದಲ್ಲಿ ಅದ್ವಿತೀಯ ಕ್ರಾಂತಿ ಮಾಡಿರುವ ಮಹಾನ್ ನಾಯಕ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ಬಣ್ಣಿಸಿದರು.
ಗುರುವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಇಂಟಕ್ ವಿಭಾಗ ಏರ್ಪಡಿಸಿದ್ದ ರಾಜೀವ್ ಗಾಂಧಿಯವರ 29ನೇ ಪುಣ್ಯತಿಥಿಯಲ್ಲಿ ಮಾತನಾಡಿದ ಅವರು, ಈಗ ಎಲ್ಲೆಡೆ ಮೊಬೈಲ್ ಕಂಡು ಬರುತ್ತಿರುವುದಕ್ಕೆ ರಾಜೀವ್‌ಗಾಂಧಿಯವರ ಮುತ್ಸದ್ಧಿ ತನವೇ ಮೂಲ ಕಾರಣ. 18ನೇ ವರ್ಷಕ್ಕೆ ಮತದಾನ ಹಕ್ಕು ನೀಡುವ ಮೂಲಕ ಯುವ ಜನಾಂಗಕ್ಕೆ ದೇಶದ ಭವಿಷ್ಯ ರೂಪಿಸುವ ಅವಕಾಶ ಮಾಡಿಕೊಟ್ಟವರು ಎಂದರು.
ದೇಶದ ಏಕತೆ ಮತ್ತು ಸಮಗ್ರತೆಗಾಗಿ ತ್ಯಾಗ ಬಲಿದಾನ ಮಾಡಿದ ರಾಜೀವ್ ಗಾಂಧಿಯವರ ಪುಣ್ಯತಿಥಿಯನ್ನು ಭಯೋತ್ಪಾದನಾ ವಿರೋಧಿ ದಿನವಾಗಿ ಆಚರಿಸಲಾಗುತ್ತಿದೆ. ದೇಶದ ಇತಿಹಾಸದಲ್ಲೇ ಅತೀ ಕಿರಿಯ ವಯಸ್ಸಿಗೆ ಅಂದರೆ ಕೇವಲ 40 ವರ್ಷಕ್ಕೆ ಪ್ರಧಾನಿ ಮಂತ್ರಿಗಳಾಗಿ ಅ ಧಿಕಾರ ಸ್ವೀಕರಿಸಿ 21ನೇ ಶತಮಾನಕ್ಕೆ ಅನುಗುಣವಾಗಿ ನವಭಾರತದ ನಿರ್ಮಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದವರು ಎಂದು ಸ್ಮರಿಸಿದರು.
ಇಂಟಕ್ ಅಧ್ಯಕ್ಷ ಕೆ.ಎಂ. ಮಂಜುನಾಥ್,
ಎಸ್.ಕೆ. ಪ್ರವೀಣ್‌ಕುಮಾರ್, ಟಿ.ವಿ. ಗಿರಿಧರ್, ಬಾಡದ ರವಿ, ಕೆ. ರೇವಣಸಿದ್ದಪ್ಪ, ಬಿ.ಎಚ್. ಉದಯ್‌ಕುಮಾರ್, ಡಿ. ಶಿವಕುಮಾರ್, ವಿ. ಶ್ರೀನಿವಾಸ್, ಹಸನ್ ಅಲಿ, ಜಿ.ಎಚ್. ನಾಗರಾಜ್, ಬಿ. ಮಂಜುನಾಥ್ ಇತರರು ಇದ್ದರು.