Advertisement

ಸೂಪರ್‌ ಸ್ಟಾರ್‌ ರಜನಿ ʼಜೈಲರ್‌ʼ ಶೂಟಿಂಗ್‌ ಶುರು: ಫಸ್ಟ್‌ ಲುಕ್‌ ನಲ್ಲಿ ಮಿಂಚಿದ ʼತಲೈವಾʼ

05:50 PM Aug 22, 2022 | Team Udayavani |

ಚೆನ್ನೈ: ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ಮುಂದಿನ ಚಿತ್ರ ʼಜೈಲರ್‌ʼ ಬಗ್ಗೆ ಹೊಸ ಅಪ್‌ ಡೇಟ್‌ ಹೊರ ಬಿದ್ದಿದೆ. ಸೋಮವಾರ (ಆ.22 ರಂದು) ಸನ್‌ ಪಿಕ್ಚರ್ಸ್‌ ಈ ಬಗ್ಗೆ ಟ್ವಿಟರ್‌ ನಲ್ಲಿ ಮಾಹಿತಿ ಹಂಚಿಕೊಂಡಿದೆ.

Advertisement

2021 ರಲ್ಲಿ ರಜನಿಕಾಂತ್‌ ಅಭಿನಯದ ʼ ಅಣ್ಣಾತೆʼ ಚಿತ್ರ ಬಿಡುಗಡೆಯಾಗಿತ್ತು. ಆದರೆ ಚಿತ್ರ ಅಷ್ಟು ಸದ್ದು ಮಾಡಿಲ್ಲ. ಚಿತ್ರದ ಬಗ್ಗೆ ಎಲ್ಲಡೆಯಿಂದ ಮಿಶ್ರ ಪ್ರತಿಕ್ರಿಯೆ ಕೇಳಿ ಬಂತು. ಆ ಬಳಿಕ ಅವರ ಮುಂದಿನ ಚಿತ್ರ ಯುವ ನಿರ್ದೇಶಕ ನೆಲ್ಸನ್‌ ದಿಲೀಪ್‌ ಕುಮಾರ್‌ ಅವರೊಂದಿಗೆ ಎಂದು ಅನೌನ್ಸ್‌ ಆಗಿತ್ತು. ಚಿತ್ರಕ್ಕೆ ʼಜೈಲರ್‌ʼ ಎಂದು ಟೈಟಲ್‌ ಇಡಲಾಗಿದೆ.

ನೆಲ್ಸನ್‌ ದಿಲೀಪ್‌ ಕುಮಾರ್‌ ʼಡಾಕ್ಟರ್‌ʼ ಸಿನಿಮಾದ ಬಳಿಕ ವಿಜಯ್‌ ಅವರೊಂದಿಗೆ ಮಾಡಿದ ʼಬೀಸ್ಟ್‌ʼ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹೇಳಿಕೊಳ್ಳುವಷ್ಟು ಕಲೆಕ್ಷನ್‌ ಮಾಡಿಲ್ಲ. ಮುಂದಿನ ಚಿತ್ರ ರಜನಿಕಾಂತ್‌ ಅವರೊಂದಿಗೆ ಮಾಡಲಿರುವುದರಿಂದ ದೊಡ್ಟ ಮಟ್ಟದ ನಿರೀಕ್ಷೆ ಸಹಜವಾಗಿಯೇ ಇದೆ.

ಚಿತ್ರ ಅನೌನ್ಸ್‌ ಆಗಿ ಯಾವಾಗದಿಂದ ಚಿತ್ರೀಕರಣ ಆರಂಭವಾಗುತ್ತದೆ ಎಂದು ಫ್ಯಾನ್ಸ್‌ ಕಾಯುತ್ತಿದ್ದರು. ಇದೀಗ ಅಭಿಮಾನಿಗಳಿಗೆ ಸನ್‌ ಪಿಕ್ಚರ್ಸ್‌ ಮಾಡಿರುವ ಟ್ವೀಟ್‌ ಖುಷಿ ತಂದಿದೆ. ಇಂದಿನಿಂದಲೇ ಅಂದರೆ ಸೋಮವಾರದಿಂದ ಚಿತ್ರದ ಚಿತ್ರೀಕರಣ ಆರಂಭವಾಗಿದೆ ಎಂದು ಸನ್‌ ಪಿಕ್ಷರ್ಸ್‌, ಫಸ್ಟ್‌ ಲುಕ್ ಮೂಲಕ ವಿಷಯವನ್ನು ಹಂಚಿಕೊಂಡಿದೆ. ಚೆನ್ನೈಯಲ್ಲಿ ಚಿತ್ರೀಕರಣ ಆರಂಭವಾಗಿದೆ.

‌ಇತ್ತೀಚೆಗೆ ತನ್ನ ಸಂಗೀತದಿಂದ ಸುದ್ದಿ ಮಾಡುತ್ತಿರುವ ಅನಿರುದ್ಧ್‌ ರವಿಚಂದರ್‌ ಈ ಚಿತ್ರಕ್ಕೂ ಮ್ಯೂಸಿಕ್ ಕಂಪೋಸ್‌ ಮಾಡಲಿದ್ದಾರೆ. ಇನ್ನು ಪಾತ್ರಗಳತ್ತ ಚಿತ್ತ ಹರಿಸಿದರೆ, ಐಶ್ವರ್ಯ ರೈ ಬಚ್ಚನ್‌ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಮ್ಯಾ ಕೃಷ್ಣ, ಯೋಗಿಬಾಬು, ಪ್ರಿಯಾಂಕಾ ಅರುಣ್ ಮೋಹನ್ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.

Advertisement

ಇನ್ನೊಂದು ವಿಶೇಷವೆಂದರೆ ಈ ಚಿತ್ರದಲ್ಲಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಸ್ಪೆಷೆಲ್‌ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಇದು ತಲೈವಾ ರಜನಿ ಅವರ 169 ನೇ ಚಿತ್ರವಾಗಿದ್ದು, 2023 ರ ಬೇಸಿಗೆಯಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next