Advertisement

Rajinikanth: ರೀ ರಿಲೀಸ್‌ ಆಗಲಿದೆ ರಜಿನಿಕಾಂತ್‌ ಅವರ ಸೂಪರ್‌ ಹಿಟ್‌ ʼಮುತ್ತುʼ ಸಿನಿಮಾ

02:35 PM Nov 05, 2023 | Team Udayavani |

ಚೆನ್ನೈ: ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರ ಸಿನಿಮಾಗಳನ್ನು ನೋಡಿ ಮೆಚ್ಚದವರು ಕಡಿಮೆ. ʼಶಿವಾಜಿʼಯಿಂದ ಹಿಡಿದು ʼಜೈಲರ್‌ʼ ಸಿನಿಮಾದವರೆಗೂ ʼತಲೈವಾʼ ಅವರನ್ನು ಬಿಗ್‌ ಸ್ಕ್ರೀನ್‌ ನಲ್ಲಿ ನೋಡಿ ಫ್ಯಾನ್ಸ್‌ ಗಳು ಖುಷಿಪಟ್ಟಿದ್ದಾರೆ.

Advertisement

ಕಳೆದ ಐದು ದಶಕಗಳಿಂದ ರಜಿನಿಕಾಂತ್‌ ನೂರಾರು ಸಿನಿಮಾಗಳನ್ನು ಮಾಡಿದ್ದಾರೆ. ಈ ಸಿನಿಮಾಗಳಲ್ಲಿ ನೆನಪಾಗಿ ಉಳಿಯುವ ಅನೇಕ ಪಾತ್ರಗಳಿವೆ. ವಯಸ್ಸು 72 ದಾಟಿದರೂ ʼತಲೈವಾʼ ಸಿನಿಮಾಗಳಲ್ಲಿ ಇಪ್ಪತ್ತರ ಹರೆಯದ ನಾಯಕನಂತೆ ನಟಿಸುತ್ತಿದ್ದಾರೆ.

ಈ ನಡುವೆ ರಜಿನಿಕಾಂತ್‌ ಅವರ ಸಿನಿಕೆರಿಯರ್‌ ನಲ್ಲಿ ದೊಡ್ಡ ಹಿಟ್ ಕೊಟ್ಟ 1995 ರಲ್ಲಿ ತೆರೆಕಂಡ ʼಮುತ್ತುʼ ಸಿನಿಮಾ ಮರು ಬಿಡುಗಡೆ ಆಗಲಿದೆ. ಕೆ ಎಸ್ ರವಿಕುಮಾರ್ ನಿರ್ದೇಶನದ ʼಮುತ್ತುʼ ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿತ್ತು. ನೂರಾರು ದಿನ ಥಿಯೇಟರ್‌ ನಲ್ಲಿ ಓಡಿತ್ತು. ಇದೀಗ ʼಮುತ್ತುʼ ಮತ್ತೆ ರೀ ರಿಲೀಸ್‌ ಆಗಲಿದೆ ಎಂದು ಚಿತ್ರತಂಡ ಘೋಷಿಸಿದೆ.

ಡಿಸೆಂಬರ್‌ ನಲ್ಲಿ ʼಮುತ್ತುʼ ಮರು ಬಿಡುಗಡೆ ಆಗಲಿದೆ. ʼಮುತ್ತು ಇಸ್‌ ಬ್ಯಾಕ್‌ʼ ಎಂದು ಚಿತ್ರತಂಡ ಅನೌನ್ಸ್‌ ಮಾಡಿದೆ.

ಮೀನಾ, ಶರತ್ ಬಾಬು, ರಾಧಾ ರವಿ, ಜಯಭಾರತಿ, ವಡಿವೇಲು ಮುಂತಾದವರು ಸಿನಿಮಾದಲ್ಲಿ ನಟಿಸಿದ್ದರು.

Advertisement

ಸಿನಿಮಾದಲ್ಲಿ ಶರತ್ ಬಾಬು ಜಮೀನ್ದಾರ ಆಗಿ ಪಾತ್ರ ನಿಭಾಯಿಸಿದ್ದರು. ರಜಿನಿಕಾಂತ್‌ ಅವರ ಕೆಲಸಗಾರನಾಗಿ ಕಾಣಿಸಿಕೊಂಡಿದ್ದರು. ಜಮೀನ್ದಾರ ಹಾಗೂ ಕೆಲಸಗಾರ ʼಮುತ್ತುʼ ಒಂದೇ ಹುಡುಗಿಯ ಪ್ರೀತಿಯಲ್ಲಿ ಬೀಳುವ ಕಥೆಯನ್ನು ಸಿನಿಮಾ ಒಳಗೊಂಡಿದೆ.

ಸದ್ಯ ರಜಿನಿಕಾಂತ್‌ ಟಿ.ಜೆ.ಜ್ಞಾನವೇಲ್ ಅವರ ʼತಲೈವರ್ 171ʼ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್, ಮಂಜು ವಾರಿಯರ್, ಫಾಹದ್ ಫಾಸಿಲ್, ದುಶಾರಾ ವಿಜಯನ್, ರಿತಿಕಾ ಸಿಂಗ್ ಮತ್ತು ರಾಣಾ ದಗ್ಗುಬಾಟಿ ಕಾಣಿಸಿಕೊಳ್ಳಲಿದ್ದಾರೆ. ಇದಾದ ಬಳಿಕ ಅವರು ಲೋಕೇಶ್‌ ಕನಕರಾಜ್‌ ಅವರ ಸಿನಿಮಾದಲ್ಲಿ ನಟಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next