Advertisement

2021ರ ಚುನಾವಣೇಲಿ ತಮಿಳುನಾಡು ಜನರು ಪವಾಡ ಸೃಷ್ಟಿಸಲಿದ್ದಾರೆ; ರಜನಿಕಾಂತ್

09:37 AM Nov 22, 2019 | Sriram |

ಚೆನ್ನೈ: ತಮಿಳುನಾಡಿನ ರಾಜಕೀಯದ ಕುರಿತು ಮಾತನಾಡಿರುವ ಸೂಪರ್ ಸ್ಟಾರ್ ರಜನಿಕಾಂತ್ 2021ರ ಚುನಾವಣೆಯಲ್ಲಿ ತಮಿಳುನಾಡಿನ ಜನರು ಪವಾಡವನ್ನು ಸೃಷ್ಟಿಸಲಿದ್ದಾರೆ ಎಂದಿದ್ದಾರೆ.

Advertisement

ನಿನ್ನೆಯಷ್ಟೇ ನಟ ಕಮಲ್ ಹಾಸನ್ ಅವರ ಜತೆ ತಮಿಳುನಾಡಿನ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು ಎಂಬ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸೂಪರ್ ಸ್ಟಾರ್ ಈ ಮಾತುಗಳನ್ನು ಆಡಿದ್ದಾರೆ. ಮಕ್ಕಲ್ ನೀಧಿ ಮಾಯಮ್ ಸಂಸ್ಥಾಪಕ ಕಮಲ್ ಹಾಸನ್ ಜತೆ ಕೈಜೋಡಿಸುವ ಕುರಿತು ಆಶಯ ವ್ಯಕ್ತಪಡಿಸಿದ್ದಾರೆ.

2021ರಲ್ಲಿ ತಮಿಳುನಾಡಿನ ಜನರು ಶೇಕಡಾ 100ರಷ್ಟು ರಾಜಕೀಯವಾಗಿ ಬಹುದೊಡ್ಡ ಪ್ರಯೋಗವನ್ನು ಸಾಧಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ರಜನಿಕಾಂತ್ ಅವರ ಈ ಹೇಳಿಕೆಗಳು ತಮಿಳುನಾಡು ಮಾತ್ರವಲ್ಲದೇ ರಾಷ್ಟ್ರ ರಾಜಕೀಯದಲ್ಲೂ ತೀವ್ರ ಸಂಚಲನಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next