Advertisement

Rajinikanth: ಬಾಲಿವುಡ್ ನ ಖ್ಯಾತ ನಿರ್ಮಾಪಕನ ಜೊತೆ ರಜಿನಿಕಾಂತ್‌ ಸಿನಿಮಾ

03:37 PM Feb 27, 2024 | Team Udayavani |

ಮುಂಬಯಿ: ಕಾಲಿವುಡ್‌ ಸೂಪರ್‌ ಸ್ಟಾರ್‌ ತಲೈವಾ ರಜಿನಿಕಾಂತ್‌ ಇತ್ತೀಚೆಗೆ ʼಲಾಲ್‌ ಸಲಾಂʼ ಸಿನಿಮಾದಲ್ಲಿ ವಿಶೇಷ ಪಾತ್ರವೊಂದನ್ನು ಮಾಡಿ ಮಿಂಚಿದ್ದರು. ಇದೀಗ ಮೊದಲ ಬಾರಿಗೆ ರಜಿನಿಕಾಂತ್‌ ಬಾಲಿವುಡ್‌ ನ ಖ್ಯಾತ ನಿರ್ಮಾಪಕನ ಜೊತೆ ಕೈಜೋಡಿಸಲಿದ್ದಾರೆ.

Advertisement

ಯಶಸ್ವಿ ನಿರ್ಮಾಪಕ, ನಿರ್ದೇಶಕರಾಗಿ ಬಾಲಿವುಡ್‌ ನಲ್ಲಿ ಮಿಂಚಿರುವ ಸಾಜಿದ್ ನಾಡಿಯಾಡ್ವಾಲಾ ʼಕಿಕ್ʼ, ʼಹೌಸ್‌ಫುಲ್, ʼಜುಡ್ವಾ 2ʼ ಹೀಗೆ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಗ್ರ್ಯಾಂಡ್ಸನ್ ಎಂಟರ್ಟೈನ್ಮೆಂಟ್ ಬ್ಯಾನರ್‌ ಮೂಲಕ ನಿರ್ಮಾಪಕರಾಗಿ ಯಶಸ್ಸಿ ಸಾಧಿಸಿರುವ ಅವರು, ಇದೇ ಮೊದಲ ಬಾರಿಗೆ ಸೌತ್‌ ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ.

ಇತ್ತೀಚೆಗೆ ಅವರು ರಜಿನಿಕಾಂತ್‌ ಅವರನ್ನು ಭೇಟಿಯಾಗಿದ್ದು, ಲೆಜೆಂಡರಿ ರಜನಿಕಾಂತ್ ಸರ್ ಅವರೊಂದಿಗೆ ಕೈಜೋಡಿಸುತ್ತಿರುವುದು ನಿಜವಾದ ಗೌರವ. ಈ ಅವಿಸ್ಮರಣೀಯ ಪ್ರಯಾಣವನ್ನು ಒಟ್ಟಿಗೆ ಪ್ರಾರಂಭಿಸುತ್ತಿರುವುದು ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ” ಎಂದು  ಸಾಜಿದ್‌ ಬರೆದುಕೊಂಡಿದ್ದಾರೆ.

ಸಾಜಿದ್‌ – ರಜಿನಿಕಾಂತ್‌ ಜೊತೆಯಾಗಿ ಯಾವ ಸಿನಿಮಾವನ್ನು ಮಾಡಲಿದ್ದಾರೆ, ಅದರ ಕಥೆಯೇನ ಎನ್ನುವುದರ ಬಗ್ಗೆ ಇದುವರಗೆ ಯಾವ ಮಾಹಿತಿಯೂ ಹೊರಬಿದ್ದಿಲ್ಲ.

ಸದ್ಯ ರಜಿನಿಕಾಂತ್‌  ‘ವೆಟ್ಟೈಯನ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವನ್ನು ಟಿಜೆ ಜ್ಞಾನವೇಲ್‌ ಅವರು ನಿರ್ದೇಶನ ಮಾಡಲಿದ್ದಾರೆ.

Advertisement

ಸಾಜಿದ್‌ ʼಚಂದು ಚಾಂಪಿಯನ್ʼ ಮತ್ತು ʼಹೌಸ್‌ಫುಲ್ 5ʼ ಸಿನಿಮಾಗಳ ರಿಲೀಸ್‌ ನ ತಯಾರಿಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next