Advertisement

ಜೈಲರ್‌ ನೋಡಲು ರಜೆ ನೀಡಿದ ಕಂಪೆನಿ! 

03:18 PM Aug 09, 2023 | Team Udayavani |

ರಜಿನಿಕಾಂತ್‌ ಅಭಿನಯದ ಬಹುನಿರೀಕ್ಷಿತ ತಮಿಳು ಸಿನಿಮಾ “ಜೈಲರ್‌’ ಇದೇ ಆ. 10ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ “ಜೈಲರ್‌’ ಸಿನಿಮಾದ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಆರಂಭವಾಗಿದ್ದು, ಸದ್ಯಕ್ಕೆ ಆರಂಭದ ಕೆಲವು ದಿನಗಳ ಶೋಗಳ ಬಹುತೇಕ ಟಿಕೆಟ್‌ ಸೋಲ್ಡ್‌ ಔಟ್‌ ಆಗಿದೆ.

Advertisement

ಇನ್ನು ರಜಿನಿಕಾಂತ್‌ ಅಭಿನಯದ ಈ ಹೈವೋಲ್ಟೆàಜ್‌ ಸಿನಿಮಾವನ್ನು ಕಣ್ತುಂಬಿ ಕೊಳ್ಳುವ ಸಲುವಾಗಿ ಅನೇಕ ಕಂಪೆನಿಗಳು ತಮ್ಮ ನೌಕರರಿಗೆ ರಜೆಯನ್ನು ಘೋಷಿಸಿವೆ.

ತಮಿಳುನಾಡು ಮತ್ತು ಆಂಧ್ರ ಮೂಲದ ಅನೇಕ ಕಂಪೆನಿಗಳು “ಜೈಲರ್‌’ ಸಿನಿಮಾದ ಬಿಡುಗಡೆಯ ಪ್ರಯುಕ್ತ ಆ. 10ರಂದು ತಮ್ಮ ನೌಕರರಿಗೆ ರಜೆ ಘೋಷಿಸಿದ್ದು,  ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next