Advertisement

ರಜನಿಯ 2.0 ಟೀಸರ್‌ ಲೀಕ್‌! ವೈರಲ್‌ ಆಗುತ್ತಿರುವ ವಿಡಿಯೋ

12:07 PM Mar 04, 2018 | Team Udayavani |

ಮುಂಬಯಿ: ಸೂಪರ್‌ಸ್ಟಾರ್‌ಗಳಾದ ರಜನಿಕಾಂತ್‌, ಆಕ್ಷಯ್‌ಕುಮಾರ್‌ ಅಭಿನಯಿಸಿರುವ ಬಹು ನಿರೀಕ್ಷಿತ 2.0 ಚಿತ್ರದ ಟೀಸರ್‌ ಆನ್‌ಲೈನ್‌ನಲ್ಲಿ ಲೀಕ್‌ ಆಗಿದ್ದು, ವೈರಲ್‌ ಆಗುತ್ತಿದೆ. 

Advertisement

ಭಾರತೀಯ ಚಿತ್ರರಂಗದ ಟ್ರ್ಯಾಕರ್‌ ಆಗಿರುವ ರಮೇಶ್‌ ಬಾಲಾ ಅವರು ಟ್ವೀಟ್‌ ಮಾಡಿ ಈ ವಿಚಾರ ಖಚಿತ ಪಡಿಸಿದ್ದು ,ಚಿತ್ರತಂಡದಿಂದ ಅಧಿಕೃತವಾಗಿ ಬಿಡುಗಡೆಯಾಗುವ ಮುನ್ನವೇ ಸೋರಿಕೆಯಾಗಿದ್ದು ಕೃತ್ಯ ಎಸಗಿದವರ ವಿರುದ್ಧ ಚಿತ್ರ ತಂಡ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದಿದ್ದಾರೆ. 

ಭಾನುವಾರ ಬೆಳಗ್ಗೆ ಟ್ವೀಟರ್‌ನಲ್ಲಿ  ಟೀಸರ್‌ ಕಾಣಿಸಿಕೊಂಡಿದ್ದು ವೈರಲ್‌ ಆಗುತ್ತಲಿದೆ.

2.0 ಚಿತ್ರ  2010 ರ ಬ್ಲ್ಯಾಕ್‌ ಬಸ್ಟರ್‌ ಎಂಥಿರನ್‌ (ರೊಬೋಟ್‌) ಚಿತ್ರದ ಮುಂದುವರಿದ ಭಾಗವಾಗಿದ್ದು, ಶಂಕರ್‌ ಅವರು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ರಜನಿ, ಆಕ್ಷಯ್‌ ಜೊತೆಗೆ ಅಮಿ ಜ್ಯಾಕ್ಸನ್‌ ಅವರು ಮುಖ್ಯ ಭೂಮಿಕೆಯಲ್ಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next