Advertisement
ರಾಜೇಶ್ ಗುಂಡಿಗದ್ದೆ (47) ಎಂಬವರು ಸೆ. 4 ರಂದು ಬೆಳಿಗ್ಗೆ ಮನೆಯಿಂದ ತಮ್ಮ ಇಕೋ ಸ್ಪೋರ್ಟ್ಸ್ ಕಾರು ( ಕೆಎ 21 ಪಿ 6758)ನಲ್ಲಿ ಸುಳ್ಯ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ಬಾರದೆ, ಫೋನ್ ಸಂಪರ್ಕಕ್ಕೂ ಸಿಗದೆ ಕಾಣೆಯಾಗಿರುವುದಾಗಿ ಅವರ ಪತ್ನಿ ವಿನಯಶ್ರೀಯವರು ಬೆಳ್ಳಾರೆ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
Related Articles
Advertisement
ಇದರೊಂದಿಗೆ ಸಂಘದ ಹೆಸರಲ್ಲಿ ಪಡೆದ ಸಾಲ ಮತ್ತು ಭೂಮಿ ಖರೀದಿ ಮತ್ತು ಅಭಿವೃದ್ಧಿಗೆ ಸೇರಿದಂತೆ ತಮ್ಮ ವೈಯಕ್ತಿಕ ನೆಲೆಯಲ್ಲಿ ಮಾಡಿದ ಸಾಲವೂ ವಿಪರೀತ ಇದೆ ಎನ್ನಲಾಗಿದೆ. ಹಣ ಪಾವತಿ ಬಾಕಿ ಏರುತ್ತಾ ಹೋದ ಹಾಗೆ ಗ್ರಾಹಕರು ಮತ್ತು ಇತರ ಸಾಲಗಾರರು ರಾಜೇಶರಲ್ಲಿ ಹಣ ನೀಡುವಂತೆ ಒತ್ತಡ ಹಾಕುತ್ತಿದ್ದರೆನ್ನಲಾಗಿದೆ. ರಬ್ಬರ್ ಉತ್ಪಾದಕರ ಸಂಘ ನಷ್ಟದಿಂದ ನಡೆಯುತ್ತಿದ್ದು ಬೆಂಗಳೂರು ಮೂಲದ ಕಂಪೆನಿಗೆ ಮಾರಾಟ ಮಾಡಿ ಸಂಘದ ಗ್ರಾಹಕರಿಗೆ ಹಣ ಪಾವತಿಸುವುದಾಗಿ ಇತ್ತೀಚೆಗೆ ಮಹಾಸಭೆಯಲ್ಲಿ ನಿರ್ಧಾರವಾಗಿತ್ತೆನ್ನಲಾಗಿದೆ.
ಅದರಂತೆ ಖರೀದಿದಾರರೊಬ್ಬರು ಸಂಘದ ಮೀಟಿಂಗ್‌ಗೆ ಬಂದು ಸಂಘವನ್ನು 12 ಕೋಟಿ ರೂ.ಗಳಿಗೆ ಖರೀದಿಸುವ ಭರವಸೆಯನ್ನು ನೀಡಿ ಸ್ವಲ್ಪ ಹಣವನ್ನು ನೀಡಿದ್ದರೆನ್ನಲಾಗಿದ್ದು, ಬಳಿಕ ಸಂಘದ ನಷ್ಟವನ್ನು ಸರಿದೂಗಿಸಲು ಕಷ್ಟವೆಂದು ಅಭಿಪ್ರಾಯಪಟ್ಟು ವ್ಯವಹಾರದಿಂದ ಹಿಂದೆ ಸರಿದರೆನ್ನಲಾಗಿದೆ. ಸ್ಥಳೀಯ ಬ್ಯಾಂಕ್‌ನವರು ಸಂಘದ ಹೆಸರಿನಲ್ಲಿ ಸಾಲ ಮರುಪಾವತಿಸುವಂತೆ ಸಂಘದ ಕಟ್ಟಡದಲ್ಲಿ ನೋಟೀಸ್ ಅಂಟಿಸಿದ್ದಾರೆ ಎನ್ನಲಾಗಿದೆ. ಆ ಬ್ಯಾಂಕಲ್ಲಿ 1ಕೋಟಿ 3೦ ಲಕ್ಷದಷ್ಟು ರೂ. ಸಾಲವಿದೆಯೆನ್ನಲಾಗಿದೆ.