Advertisement

ವಿಶ್ವಬ್ಯಾಂಕ್‌ ನಿರ್ದೇಶಕರಾಗಿ ರಾಜೇಶ್‌

01:32 AM Sep 15, 2020 | Hari Prasad |

ನವದೆಹಲಿ: ಭಾರತದ ಹಿರಿಯ ಅಧಿಕಾರಿ ರಾಜೇಶ್‌ ಖುಲ್ಲರ್‌, ವಾಷಿಂಗ್ಟನ್‌ನಲ್ಲಿರುವ ವಿಶ್ವ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

Advertisement

ಹೀಗೆಂದು ಕೇಂದ್ರ ಸಿಬಂದಿ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ. 1988ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ಖುಲ್ಲರ್‌, ಪ್ರಸ್ತುತ ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಅವರ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ.

ವಿಶ್ವಬ್ಯಾಂಕ್‌ನಲ್ಲಿ 2023, ಆ.31ರ ವರೆಗೆ ಅವರ ಅಧಿಕಾರಾವಧಿಯಿರುತ್ತದೆ. ಸಿಬಂದಿ ಸಚಿವಾಲಯದ ಇನ್ನೊಂದು ಆದೇಶದಲ್ಲಿ, ಮನಿಲಾದಲ್ಲಿರುವ ಏಷ್ಯಾ ಅಭಿವೃದ್ಧಿ ಬ್ಯಾಂಕ್ ನ ‌(ಎಡಿಬಿ) ಕಾರ್ಯ ನಿರ್ವಾಹಕ ನಿರ್ದೇಶಕರನ್ನಾಗಿ ಸಮೀರ್‌ ಕುಮಾರ್‌ ಖರೆಯನ್ನು ನೇಮಿಸಲಾಗಿದೆ ಎಂದು ತಿಳಿಸಲಾಗಿದೆ. ಇವರ ಅಧಿಕಾರಾವಧಿಯೂ 3 ವರ್ಷವಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next