Advertisement

ಅರ್ಧಕ್ಕೆ ನಿಂತ ರಾಜೀವ್‌ ಗಾಂಧಿ ಸೇವಾ ಕೇಂದ್ರ

04:27 PM May 31, 2022 | Team Udayavani |

ಗುಂಡ್ಲುಪೇಟೆ: ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಾಜೀವ್‌ ಗಾಂಧಿ ಸೇವಾ ಕೇಂದ್ರದ ಕಟ್ಟಡ ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿದ್ದು, ಸುತ್ತಲು ಅನೈರ್ಮಲ್ಯ ತಾಂಡವವಾಡುತ್ತಿದೆ.

Advertisement

2010ರಲ್ಲಿ ರಾಜೀವ್‌ ಗಾಂಧಿ ಸೇವಾ ಕೇಂದ್ರನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ಬಿಡುಗಡೆ ಯಾದ ನಂತರ ಕಟ್ಟಡ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ನಂತರ ಅನುದಾನದ ಕೊರತೆಯಿಂದ ಕಳೆದ10 ವರ್ಷದಿಂದಲೂ ಕಟ್ಟಡವು ಬಿಸಿಲು, ಮಳೆ,ಗಾಳಿಗೆ ಸಿಲುಕಿ ಗೋಡೆಗಳು ಶಿಥಿಲಾವಸ್ಥೆ ತಲುಪಿದೆ.

ಸುತ್ತಲು ಅನೈರ್ಮಲ್ಯ: ಕಟ್ಟಡವು ಕಳೆದ 10 ವರ್ಷದಿಂದಲೂ ಹಾಗೆ ನಿಂತಿರುವ ಕಾರಣ ಸುತ್ತಲು ಮುಳ್ಳಿನ ಪೊದೆ, ಗಿಡ-ಗಂಟಿಗಳು ಆಳುದ್ದ ಬೆಳೆದು ನಿಂತು ಅನೈರ್ಮಲ್ಯ ತಾಂಡವವಾಡುತ್ತಿದೆ. ಜೊತೆಗೆಹಂದಿಗಳ ಕಾಟವಿರುವ ಕಾರಣ ಗಬ್ಬೆದ್ದು ನಾರುತ್ತಿದೆ. ಈ ಹಿನ್ನೆಲೆ ಕಟ್ಟಡದತ್ತ ಸಾರ್ವಜನಿರು ಸುಳಿಯುತ್ತಿಲ್ಲ.

ಗ್ರಾಪಂ ಆಡಳಿತ ವರ್ಗ-ಅಧಿಕಾರಿ ವರ್ಗದ ನಿರ್ಲಕ್ಷ್ಯ: ರಾಜೀವ್‌ ಗಾಂಧಿ ಸೇವಾ ಕೇಂದ್ರದ ಕಟ್ಟಡ ಅರ್ಧಕ್ಕೆ ನಿಂತ್ತಿದ್ದರೂ ಸಹ ಕಳೆದ 10ವರ್ಷದಿಂದ ಅಧಿಕಾರದ ಚುಕ್ಕಾಣಿ ಹಿಡಿದ ಗ್ರಾಪಂಆಡಳಿತ ಹಾಗೂ ಅಧಿಕಾರಿ ವರ್ಗದವರುಹೆಚ್ಚುವರಿ ಅನುದಾನ ತಂದು ಕಟ್ಟಡಪೂರ್ಣಗೊಳಿಸುವ ಗೋಜಿಗೆ ಹೋಗದೆ ನಿರ್ಲಕ್ಷ್ಯಧೋರಣೆ ತಾಳಿದ್ದಾರೆ ಎಂದು ಸ್ಥಳೀಯರಾದ ವೃಷಬೇಂದ್ರ ಆಕ್ರೋಶ ಹೊರಹಾಕಿದರು.

ಶಿಥಿಲಗೊಂಡ ಕಟ್ಟಡದಲ್ಲಿ ಗ್ರಂಥಾಲಯ :

Advertisement

ಬೊಮ್ಮಲಾಪುರದಲ್ಲಿ ಹೆಚ್ಚಿನ ವಿದ್ಯಾವಂತ ಯುವಕರಿದ್ದಾರೆ. ಚಿಕ್ಕ ಕಟ್ಟಡವೊಂದರಲ್ಲಿ ಗ್ರಂಥಾಲಯ ತೆರೆದಿದ್ದು, ಅದರ ಮೇಲ್ಛಾವಣಿ ಒಡೆದು ಬೀಳುತ್ತಿದ್ದು ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಮಳೆ ಬಂದಸಂದರ್ಭದಲ್ಲಿ ನೀರು ಸೋರುತ್ತಿದೆ. ಹೀಗಿದ್ದರೂ ಕೂಡ ಇಲ್ಲಿ ಗ್ರಾಪಂ ಅಧಿಕಾರಿಗಳು ನೂತನ ಕಟ್ಟಡನಿರ್ಮಾಣಕ್ಕೆ ಮುಂದಾಗಿಲ್ಲ. ಇದರಿಂದ ಓದುಗರಿಗೆ ತೊಂದರೆ ಉಂಟಾಗಿದೆ ಎಂದು ಅತಿಥಿ ಶಿಕ್ಷಕ ಕಾರ್ತಿಕ್‌ ದೂರಿದರು.

2010ರಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ನಂತರ ಅನುದಾನ ಕೊರತೆನಿಂತು ಹೋಗಿದೆ. ಇದೀಗ ಜಿಲ್ಲಾ ಪಂಚಾಯಿತಿಗೆ 25 ಲಕ್ಷ ರೂ. ಹೆಚ್ಚುವರಿಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಾಗಿದ್ದು, ಮಂಜೂರಾದ ಕೂಡಲೇ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸಲಾಗುವುದು. -ರಷಿಯಾ, ಪಿಡಿಒ, ಬೊಮ್ಮಲಾಪುರ

ಕಳೆದ ಹತ್ತು ವರ್ಷದಿಂದಲೂರಾಜೀವ್‌ ಗಾಂಧಿ ಸೇವಾ ಕೇಂದ್ರದಕಟ್ಟಡ ಅರ್ಧಕ್ಕೆ ನಿಂತಿದ್ದರು ಸಹ ಗ್ರಾಪಂಅಧಿಕಾರಿಗಳು ಹಾಗೂ ಚುನಾಯಿತಿಪ್ರತಿನಿಧಿಗಳು ಹೆಚ್ಚುವರಿ ಅನುದಾನತಂದು ಕಟ್ಟಣ ಪೂರ್ಣಗೊಳಿಸುವಗೋಜಿಗೆ ಹೋಗಿಲ್ಲ. ಈ ಕಾರಣದಿಂದಕಟ್ಟಡ ಶಿಥಿಲಗೊಂಡಿದೆ. ಆದ್ದರಿಂದಶಾಸಕ-ಸಂಸದರು ಇತ್ತ ಗಮನ ಹರಿಸಿಕಟ್ಟಡಕ್ಕೆ ಹೆಚ್ಚುವರಿ ಅನುದಾನ ಮಂಜೂರು ಮಾಡಬೇಕು. – ಸಿ.ಸುರೇಶ ಬೊಮ್ಮಲಾಪುರ, ಸಾಮಾಜಿಕ ಕಾರ್ಯಕರ್ತ

 -ಬಸವರಾಜು ಎಸ್‌.ಹಂಗಳ

Advertisement

Udayavani is now on Telegram. Click here to join our channel and stay updated with the latest news.

Next