ದಾವಣಗೆರೆ: ಮಾಜಿ ಪ್ರಧಾನಿ, ಭಾರತರತ್ನ ರಾಜೀವಗಾಂಧಿ ಅವರು ಆಧುನಿಕ ಭಾರತದ ಕನಸುಗಾರ ಮತ್ತು ಡಿಜಿಟಲ್ ಕ್ರಾಂತಿಯ ಹರಿಕಾರ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಬಣ್ಣಿಸಿದ್ದಾರೆ.
ಶುಕ್ರವಾರ ಜಿಲ್ಲಾ ಕಾಂಗ್ರೆಸ್‌ನ ಕಾರ್ಮಿಕ ಮತ್ತು ಇಂಟಕ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ರಾಜೀವ್ ಗಾಂಧಿ ಯವರ 30ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜೀವ ಗಾಂಧಿಯವರು ದೇಶದ ಸಮಗ್ರತೆಗಾಗಿ ತ್ಯಾಗ, ಬಲಿದಾನ ಮಾಡಿದ ಅಪ್ರತಿಮ ನಾಯಕ ಎಂದರು.
ಈಗ ಕಾಣುತ್ತಿರುವ ಡಿಜಿಟಲ್ ಇಂಡಿಯಾ ಕನಸಿಗೆ ಮುನ್ನುಡಿ ಬರದವರು. ನವಭಾರತದ ನಿರ್ಮಾಣಕ್ಕೆನಾಂದಿ ಹಾಡಿದವರು. ಅವರ ದೇಶ ಸೇವೆ ಅನನ್ಯ. ಅವರ ಪುಣ್ಯಸ್ಮರಣೆಯ ದಿನವನ್ನ ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರು ದೇಶದ ಪ್ರಗತಿಗೆ ಕಂಟಕವಾಗಿರುವ ಭಯೋತ್ಪಾದನೆಯ ವಿರುದ್ಧ ಹೋರಾಡುವದೃಢಸಂಕಲ್ಪ ಮಾಡಬೇಕು ಎಂದು ಮನವಿ ಮಾಡಿದರು.
ಮಾಹಿತಿ ತಂತ್ರಜ್ಞಾನ ಮತ್ತು ದೂರ ಸಂಪರ್ಕದಲ್ಲಿ ಕ್ರಾಂತಿ ಮಾಡಿದ ರಾಜೀವ್ ಗಾಂಧಿಯವರುಜನಸಾಮಾನ್ಯರ ಕೈಯಲ್ಲಿ ಮೊಬೈಲ್ ಫೋನ್ ಬರಲು ಕಾರಣರಾಗಿದ್ದಾರೆ. 21ನೇ ಶತಮಾನಕ್ಕೆ ಭಾರತವನ್ನು ಸಜ್ಜುಗೊಳಿಸಲು ಶ್ರಮಿಸಿದರು. ವಿಶ್ವದಲ್ಲಿಯೇ ಭಾರತಶಕ್ತಿಶಾಲಿ ರಾಷ್ಟ್ರ ವನ್ನಾಗಿಸುವ ನಿಟ್ಟಿನಲ್ಲಿ ಹಗಲಿರುಳುದುಡಿದರು. ಯುವಕರ ಮೇಲೆ ಅಪಾರ ವಿಶ್ವಾಸ ಹೊಂದಿದ್ದ ಅವರು ದೇಶದ ಆಡಳಿತದಲ್ಲಿ ಯುವ ಜನಾಂಗ ಭಾಗಿ ಆಗಬೇಕು ಎಂದು ಬಯಸಿ 18 ವರ್ಷದ ಯುವಕ, ಯುವತಿಯರಿಗೆ ಮತದಾನದ ಹಕ್ಕು ನೀಡಿದವರು ಎಂದು ಸ್ಮರಿಸಿದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ದೇಶಾದ್ಯಂತ ವಿಶ್ವವಿದ್ಯಾಲಯಗಳ ಪ್ರಾರಂಭಿಸುವ ಜೊತೆಗೆ ಉನ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಆದ್ಯತೆ ನೀಡಿದರು. ಸಂವಿಧಾನದ 73 ಮತ್ತು 74ನೇಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸ್ಥಳೀಯಸಂಸ್ಥೆಗಳಲ್ಲಿ ದುರ್ಬಲ ವರ್ಗದವರು ಸಹ ಪರಮಾಧಿಕಾರ ದೊರೆಯುವಂತೆ ಮಾಡಲು ಶ್ರಮಿಸಿದರು ಎಂದು ತಿಳಿಸಿದರು.
ರಾಜೀವ್‌ಗಾಂ ಧಿಯವರ ಅಡಳಿತದಲ್ಲಿ ಜಗತ್ತಿನ ಎಲ್ಲ ದೇಶಗಳೊಂದಿಗೆ ಸ್ನೇಹ ಬೆಳೆಸಿದ್ದರು. ದೇಶದ ವಿರೋಧ ಪಕ್ಷದ ನಾಯಕರನ್ನು ಗೌರವಿಸುತ್ತಿದ್ದರು.ಅಜಾತ ಶತ್ರು ಎಂದೇ ಕರೆಯಲ್ಪಡುವ ಮಾಜಿಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರುಅನಾರೋಗ್ಯಕ್ಕೀಡಾದಾಗ ವಿದೇಶಕ್ಕೆ ಕಳುಹಿಸಿ ಚಿಕಿತ್ಸೆಕೊಡಿಸಿದ್ದರು. ಅಂಥಹ ಮಾನವೀಯ ಗುಣಗಳ್ಳುಳನಾಯಕರಾಗಿದ್ದರು ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಎಚ್. ಸುಬಾನ್‌ಸಾಬ್, ಇಂಟಕ್ ಅಧ್ಯಕ್ಷ ಕೆ.ಎಂ. ಮಂಜುನಾಥ್, ಅಸಂಘಟಿತ ಕಾರ್ಮಿಕ ವಿಭಾಗದ ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಕೆ. ಲಿಯಾಖತ್ ಅಲಿ,ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರ್.ಬಿ.ಝಡ್ ಬಾಷಾ, ಡಿ. ಶಿವಕುಮಾರ್, ಮಂಜುನಾಥ್, ಅಶ್ರಫ್, ಖಲೀಲ್ ಇದ್ದರು.