ಚಿತ್ರದುರ್ಗ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ 30ನೇ ಪುಣ್ಯತಿಥಿ ಆಚರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ರಾಜೀವ್‌ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಇಂದಿರಾಗಾಂಧಿ ಅವರ ಹತ್ಯೆಯಾಗಿ ದೇಶಸಂಕಷ್ಟದಲ್ಲಿದ್ದಾಗ ಪ್ರಧಾನಿಯಾಗಿ ರಾಜೀವ್‌ಗಾಂಧಿ ದೇಶ ಮತ್ತು ಪಕ್ಷದ ಜವಾಬ್ದಾರಿ ವಹಿಸಿಕೊಂಡರು. ಗಾಂಧಿಕುಟುಂಬಕ್ಕೆ ತ್ಯಾಗ, ಬಲಿದಾನಗಳಇತಿಹಾಸವಿದೆ. ತಮಿಳುನಾಡು ವಿಭಜನೆ ಮಾಡಲು ಎಲ್‌ಟಿಟಿಇ ಸಂಘಟನೆಯವರು ನಡೆಸಿದ ಹುನ್ನಾರದ ಗುರಿಗೆ ರಾಜೀವ್‌ಗಾಂಧಿ ಬಲಿಯಾಗಬೇಕಾಯಿತು ಎಂದು ಸ್ಮರಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೈಲೆಟ್ ಆಗಿ ಇಡೀ ಜಗತ್ತನ್ನು ಸುತ್ತಿದ ರಾಜೀವ್ ಗಾಂಧಿಗೆ ವಿಶ್ವ ಮಟ್ಟದಲ್ಲಿ ಭಾರತ ತಂತ್ರಜ್ಞಾನದಲ್ಲಿಬೆಳೆಯಬೇಕೆಂಬ ದೂರದೃಷ್ಟಿಯಿತ್ತು.ಅದರ ಫಲವಾಗಿ ಇಂದು ಎಲ್ಲರಕೈಯಲ್ಲಿ ಮೊಬೈಲ್, ಕಂಪ್ಯೂಟರ್ ಗಳು ಹರಿದಾಡುತ್ತಿವೆ. ಪಕ್ಷಾಂತರ ವಿರೋಧಿ ಕಾಯಿದೆಯನ್ನು ಪಾರ್ಲಿಮೆಂಟ್‌ನಲ್ಲಿ ಮಂಡಿಸಿದ ರಾಜೀವ್‌ಗಾಂಧಿ ಮತದಾನದಹಕ್ಕನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸಿ ಯುವಕರು ಮತದಾನದ ಹಕ್ಕು ಚಲಾಯಿಸುವಂತೆ ದೇಶಕ್ಕೆ ನೀಡಿದ ಬಹುದೊಡ್ಡ ಕೊಡುಗೆಯನ್ನು ಎಲ್ಲರೂ ಇಂದು ಸ್ಮರಿಸಿಕೊಳ್ಳುತ್ತಿದ್ದಾರೆ.
ಅವರ ಆದರ್ಶ, ತತ್ವ, ಸಿದ್ದಾಂತದ ಮೇಲೆ ಕಾಂಗ್ರೆಸ್ ಪಕ್ಷ ನಿಂತಿದೆ ಎಂದು ಗುಣಗಾನ ಮಾಡಿದರು.ಇಂಟೆಕ್ ರಾಜ್ಯ ಉಪಾಧ್ಯಕ್ಷ ಎ.ಜಾಕೀರ್‌ಹುಸೇನ್ ಮಾತನಾಡಿ, ಇಂದಿರಾ ಹತ್ಯೆಯ ನಂತರ ದೇಶ ಹಾಗೂ ಪಕ್ಷದ ಚುಕ್ಕಾಣಿ ಹಿಡಿದ ರಾಜೀವ್ ಗಾಂಧಿ ಕೂಡಾ ಹತ್ಯೆಯಾಗಿದ್ದು ಅತೀ ದೊಡ್ಡ ದುರಂತ ಎಂದರು.
ಗಾಂಧಿ ಕುಟುಂಬಕ್ಕೆ ದೇಶ ಮುಖ್ಯವಾಗಿತ್ತೆ ವಿನಃ ಅಧಿ ಕಾರವಲ್ಲ. ಜೀವಿತದ ಕೊನೆಯ ಉಸಿರಿರುವತನಕ ದೇಶ ಸೇವೆಗೆ ರಾಜೀವ್ ಗಾಂಧಿ ತಮ್ಮನ್ನು ಮುಡುಪಾಗಿಟ್ಟಿದ್ದರು ಎಂದುಸ್ಮರಿಸಿದರು. ಜಿಲ್ಲಾ ಕಾಂಗ್ರೆಸ್ ಹಿರಿಯ ಉಪಾಧ್ಯಕ್ಷ ಎನ್.ಬಿ.ಟಿ.ಜಮೀರ್,ಕಾರ್ಯದರ್ಶಿ ಎ.ಸಾ ಕ್‌ವುಲ್ಲಾ,ಅಣ್ಣಿ, ಜಿಲ್ಲಾ ಪಂಚಾಯಿತಿ ಸದಸ್ಯಬಿ.ಪಿ.ಪ್ರಕಾಶ್‌ಮೂರ್ತಿ ಗ್ರಾಮಾಂತರಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷಮಹಮ್ಮದ್ ಸಾಬ್ ಜಿ.ಆರ್.ಹಳ್ಳಿ, ಗಂಗಾಧರ್, ಯೂತ್ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ತಿಪ್ಪೇಸ್ವಾಮಿ ಹಾಜರಿದ್ದರು.