Advertisement

ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ಅರ್ಜಿ ಸಲ್ಲಿಕೆಗಿಲ್ಲ ಅವಕಾಶ

10:44 AM Jul 14, 2019 | keerthan |

ಉಡುಪಿ: ಪ್ರಧಾನಮಂತ್ರಿ ಆವಾಸ್‌ ಯೋಜನೆ, ಬಸವ ವಸತಿ ಸೇರಿ ದಂತೆ ವಿವಿಧ ವಸತಿ ಯೋಜನೆಗಳಿಗೆ ಹೊಸದಾಗಿ ಅರ್ಜಿ ಹಾಕುವವರಿಗೆ ಅವಕಾಶ ಇಲ್ಲದಂತಾಗಿದೆ. ವಸತಿ ಯೋಜನೆ ಮಂಜೂರು ಮಾಡುವ ರಾಜೀವ್‌ಗಾಂಧಿ ವಸತಿ ನಿಗಮದ ವೆಬ್‌ಸೈಟ್‌ ಈಗ ಹೊಸ ಅರ್ಜಿದಾರರಿಗೆ ತೆರೆಯುತ್ತಲೇ ಇಲ್ಲ. ಹಾಗಾಗಿ ಹೊಸ ಅರ್ಜಿದಾರರು ಸೈಟ್‌ ಬಾಗಿಲು ತೆರೆಯುವವರಿಗೆ ಕಾಯುವಂತಾಗಿದೆ.

Advertisement

ವಸತಿ ಸೌಲಭ್ಯವನ್ನು ರಾಜೀವ್‌ ಗಾಂಧಿ ವಸತಿ ನಿಗಮದ ಮೂಲಕ ಮಂಜೂರು ಮಾಡಲಾಗುತ್ತದೆ. ಗ್ರಾ.ಪಂ.ಗಳಲ್ಲಿ ನಿಗಮದ ಸೈಟ್‌ಗೆ
ಅರ್ಜಿ ದಾರರ ಮಾಹಿತಿಯನ್ನು ಕಳಿಸಲಾಗುತ್ತದೆ. ಕಳೆದ ಡಿಸೆಂಬರ್‌ ನಲ್ಲೇ ಪೂರ್ಣಗೊಂಡಿದ್ದ ವಸತಿ ರಹಿತರು ಮತ್ತು ನಿವೇಶನ ರಹಿತರ ಸಮೀಕ್ಷೆಯಡಿ ಈಗಾಗಲೇ ಗುರುತಿಸಲಾದವರಿಗೆ ಸೌಲಭ್ಯ ಮಂಜೂರು ಮಾಡಿದ ಬಳಿಕವೇ ಹೊಸಬರಿಗೆ ಅವಕಾಶ ಎನ್ನುವುದು ನಿಗಮದ ನಿಲುವು. ಹಾಗಾಗಿ ವೆಬ್‌ಸೈಟ್‌ ಬಾಗಿಲು ಮುಚ್ಚಲಾಗಿದೆ.

ಆದರೆ ಅರ್ಜಿ ಸಲ್ಲಿಸಲು ಅರ್ಹ ರಾದವರ ಪೈಕಿ ಕುಟುಂಬ ವಿಭಜನೆಯಾಗಿ ಪ್ರತ್ಯೇಕ ಮನೆಯ ಆವಶ್ಯಕತೆ ಇರುವವರು, ಜಾಗ ಪಾಲಾಗಿ ಮನೆ ಕಟ್ಟಲು ಮುಂದಾಗಿರುವವರು ಸೌಲಭ್ಯ ಕೋರಿ ಗ್ರಾ.ಪಂ.ಗಳಿಗೆ ಅಲೆದಾಡುತ್ತಿದ್ದಾರೆ. ಕೆಲವೆಡೆ ಗ್ರಾ.ಪಂ ಸಿಬಂದಿ ಅರ್ಜಿದಾರರನ್ನು ವಾಪಸು ಕಳುಹಿಸಿದರೆ, ಇನ್ನು ಕೆಲವೆಡೆ ಅರ್ಜಿಯನ್ನು ಪಡೆಯಲಾಗುತ್ತಿದ್ದರೂ ವೆಬ್‌ಸೈಟ್‌ಗೆ ಮಾಹಿತಿ  ಯನ್ನು ಕಳಿಸುತ್ತಿಲ್ಲ. ಇದರಿಂದಾಗಿ 6 ತಿಂಗಳುಗಳ ಈಚೆಗೆ ಸಲ್ಲಿಸಿದ್ದ ಅರ್ಜಿಗಳು ಗ್ರಾ.ಪಂ.ಗಳಲ್ಲೇ ಬಾಕಿಯಾಗಿವೆ.

ಮಂಜೂರಾದರೂ ಮನೆ ಕಟ್ಟಿಲ್ಲ
ಜಿಲ್ಲೆಯಲ್ಲಿ ಕೆಲವು ಕುಟುಂಬಗಳಿಗೆ 2011ರಲ್ಲಿ ಮನೆ ಮಂಜೂರಾದರೂ ಮನೆ ನಿರ್ಮಿಸಿಲ್ಲ. ಕೆಲವರು ಸಹಾಯಧನಕ್ಕೆ ಮತ್ತಷ್ಟು ಹಣ ಹೊಂದಿಸಿ ಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಕೆಲವರು ಇತರ ಕಾರಣಗಳಿಗಾಗಿ ಸದ್ಯ ಮನೆ ನಿರ್ಮಿಸಿಲ್ಲ. ಆದರೆ ನಿಗಮದ ಸೈಟ್‌ನಲ್ಲಿ ಇವರ ಹೆಸರು ಬಾಕಿ ಪಟ್ಟಿಯಲ್ಲೇ ಇದೆ. ಈ ಸಮಸ್ಯೆ ನಿವಾರಣೆಗೆ ಮನೆ ಮಂಜೂರಾಗಿಯೂ ನಿರ್ಮಿಸದೆ ಇರುವವರ ಹೆಸರನ್ನು ತೆಗೆದುಹಾಕಲು (ಬ್ಲಾಕ್‌) ನಿಗಮ ಮುಂದಾಗಿದೆ. ಇದು ಇತ್ಯರ್ಥವಾಗುವವರೆಗೂ ಹೊಸಬರು ಕಾಯುವಂತಾಗಿದೆ.

“ಹೊಸ ಅರ್ಜಿಗಳನ್ನು ತೆಗೆದಿಟ್ಟು ಕೊಳ್ಳುತ್ತೇವೆ. ಮುಂದೆ ಸೈಟ್‌ ಓಪನ್‌ ಆದಾಗ ಅಪ್‌ಲೋಡ್‌ ಮಾಡುತ್ತೇವೆ’ ಎನ್ನುತ್ತಾರೆ ಜಿಲ್ಲೆಯ ಗ್ರಾ.ಪಂ.ನ ಓರ್ವ ಪಿಡಿಒ. ಸಮೀಕ್ಷೆಯಂತೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 15,750 ವಸತಿ ರಹಿತ ಮತ್ತು 32,455 ನಿವೇಶನ ರಹಿತ ಕುಟುಂಬಗಳಿವೆ. ದ.ಕ ಜಿಲ್ಲೆಯಲ್ಲಿ ಅನುಕ್ರಮವಾಗಿ 18,926 ಮತ್ತು 47,401 ಕುಟುಂಬಗಳಿವೆ.

Advertisement

ಸಮೀಕ್ಷೆಯಲ್ಲಿ ಒಳಗೊಂಡಿರು ವವರಿಗೆ ಮಾತ್ರ ಈಗ ಅವಕಾಶವಿದೆ. ಒಂದು ವೇಳೆ ಇತರ ನಿರ್ದಿಷ್ಟ ತಾಂತ್ರಿಕ ತೊಂದರೆಗಳಿದ್ದರೆ ಸರಿಪಡಿಸಬಹುದು.
– ಸಿಂಧೂ ರೂಪೇಶ್‌, ಉಡುಪಿ ಜಿ.ಪಂ. ಸಿಇಒ

ಸಮೀಕ್ಷೆಯಲ್ಲಿ ಗುರುತಿಸಿರುವ ಕುಟುಂಬಗಳಿಗೆ ವಸತಿ ಒದಗಿಸುವುದು ನಮ್ಮ ಆದ್ಯತೆ. ಸದ್ಯ ಹೊಸ ಅರ್ಜಿ ಸ್ವೀಕಾರ ಸ್ಥಗಿತಗೊಳಿಸಲಾಗಿದೆ.
– ಬಸಪ್ಪ,, ಸಹಾಯಕ ವ್ಯವಸ್ಥಾಪಕರು, ರಾಜೀವ್‌ ಗಾಂಧಿ ವಸತಿ ನಿಗಮ

ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next