ಜೈಪುರ: ಗಂಡನೊಂದಿಗೆ ಜಗಳವಾಡಿ ಮಕ್ಕಳೊಂದಿಗೆ ತಾಯಿಯೊಬ್ಬಳು ಕೆರೆಗೆ ಹಾರಿದ ಪರಿಣಾಮ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ರಾಜಸ್ಥಾನದ ಜಲೋರ್ ಜಿಲ್ಲೆಯಲ್ಲಿ ನಡೆದಿದೆ.
ಸೋಹ್ನಿ ಬಿಷ್ಣೋಯಿ (23) ತನ್ನ ಗಂಡನೊಂದಿಗೆ ಕಳೆದ ರಾತ್ರಿ ಜಗಳವಾಡಿದ್ದಾಳೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಗೊಂಡಿದೆ.
ಇದೇ ಕಾರಣದಿಂದ ಸೋಹ್ನಿ ಬಿಷ್ಣೋಯಿ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿ ಮನೆ ಪಕ್ಕದ ಕೆರೆಗೆ ಹೋಗಿ ಹಾರಿದ್ದಾಳೆ. ಘಟನೆಯಲ್ಲಿ ಮಕ್ಕಳಾದ ಸಮೀಕ್ಷಾ (3) ಮತ್ತು ಆಕೆಯ ಸಹೋದರ ಅನುಭವ್ ಮೃತಪಟ್ಟಿದ್ದಾರೆ. ಮಕ್ಕಳನ್ನು ಕರೆದುಕೊಂಡು ತಾಯಿ ಬದುಕಿ ಉಳಿದಿದ್ದಾರೆ ಎಂದು ಸಬ್ ಇನ್ಸ್‌ಪೆಕ್ಟರ್ ಭಗವಾನ್ ಸಿಂಗ್ ಹೇಳಿದ್ದಾರೆ.
ಸೋಹ್ನಿ ಬಿಷ್ಣೋಯ್ ಹೇಳಿಕೆ ಹಾಗೂ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಪತಿ ವಿರುದ್ಧ ಹಲ್ಲೆ ಹಾಗೂ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.