Advertisement
‘ಮುಂದಿನೆಲ್ಲ ಪಂದ್ಯಗಳಲ್ಲಿ ರಾಜಸ್ಥಾನ್ ತಂಡಕ್ಕೆ ಸ್ಮಿತ್ ನಾಯಕ ರಾಗಿರುತ್ತಾರೆ. ಕಳೆದ ವರ್ಷ ಅಂಜಿಕ್ಯ ರಹಾನೆ ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸಿ ಪ್ಲೇ ಆಫ್ಗೆ ತಲುಪಿಸಿದ್ದರು. ಈ ಬಾರಿ ಮರಳಿ ಟ್ರ್ಯಾಕ್ ಏರಲು ಸೂಕ್ತ ಕಾರ್ಯತಂತ್ರ ರೂಪಿಸಬೇಕಾದ ಕಾರಣ ಇಂಥದೊಂದು ನಿರ್ಧಾರಕ್ಕೆ ಬರಲಾಗಿದೆ’ ಎಂಬುದು ರಾಜಸ್ಥಾನ್ ಫ್ರಾಂಚೈಸಿಯ ಹೇಳಿಕೆ.
ಮೇ ಒಂದರ ವರೆಗೆ ಸ್ಮಿತ್ ಐಪಿಎಲ್ನಲ್ಲಿ ಪಾಲ್ಗೊಳ್ಳಲಿದ್ದು, ಆಗ ತಂಡದ ಎಲ್ಲ ಲೀಗ್ ಪಂದ್ಯಗಳು ಮುಗಿಯಲಿವೆ. ಅಕಸ್ಮಾತ್ ತಂಡ ಮುಂದಿನ ಸುತ್ತು ತಲುಪಿದರೆ ಮತ್ತೆ ರಾಜಸ್ಥಾನ್ ನಾಯಕತ್ವ ರಹಾನೆ ಪಾಲಾಗುವ ಸಾಧ್ಯತೆ ಇದೆ. ನಾಯಕತ್ವಕ್ಕೆ ಅಡ್ಡಿಯಾಗಿತ್ತು ನಿಷೇಧ
ಒಂದು ವರ್ಷದ ನಿಷೇಧ ಮುಗಿಸಿ ಐಪಿಎಲ್ ಮೂಲಕ ಮರಳಿ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ಸ್ಮಿತ್ ಶನಿವಾರದ ಮುಂಬೈ ವಿರುದ್ಧದ ಪಂದ್ಯದಲ್ಲಿ ಮರಳಿ ನಾಯಕತ್ವದ ಇನ್ನಿಂಗ್ಸ್ ಆರಂಭಿಸಿದರು. 2017ರಲ್ಲಿ ಅವರು ಪುಣೆ ತಂಡವನ್ನು ಮುನ್ನಡೆಸಿ ಫೈನಲ್ ತಲುಪಿಸಿದ್ದರು. 2018ರಲ್ಲಿ ರಾಜಸ್ಥಾನ್ ರಾಯಲ್ಸ್ ನಿಷೇಧ ಮುಕ್ತಗೊಂಡು ಐಪಿಎಲ್ಲ್ಗೆ ಮರಳಿದಾಗಲೂ ಸ್ಮಿತ್ ಅವರನ್ನೇ ನಾಯಕನನ್ನಾಗಿ ನೇಮಿಸಿತ್ತು. ಆದರೆ ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷ ನಿಷೇಧಕ್ಕೊಳಗಾದ್ದರಿಂದ ಕೂಡಲೇ ಸ್ಮಿತ್ ಅವರನ್ನು ಕೆಳಗಿಳಿಸಿ ರಹಾನೆಗೆ ನಾಯಕತ್ವ ವಹಿಸಲಾಯಿತು. 2015ರಲ್ಲೂ ಸ್ಮಿತ್ ರಾಜಸ್ಥಾನ್ ತಂಡವನ್ನು ಮುನ್ನಡೆಸಿದ್ದರು.
Related Articles
Advertisement