Advertisement

Rare Love Story… ವಿದ್ಯಾರ್ಥಿಯನ್ನ ವಿವಾಹವಾಗಲು ಲಿಂಗ ಬದಲಾಯಿಸಿಕೊಂಡ ಶಿಕ್ಷಕಿ!

02:43 PM Nov 08, 2022 | Team Udayavani |

ಭರತ್ ಪುರ್(ರಾಜಸ್ಥಾನ): ಪ್ರೇಮ ಕುರುಡು ಎಂಬ ಗಾದೆ ಮಾತಿಗೆ ಪೂರಕ ಎಂಬಂತೆ ರಾಜಸ್ಥಾನದ ಶಾಲಾ ಶಿಕ್ಷಕಿಯೊಬ್ಬಳು ತಾನೇ ಕಲಿಸಿದ ವಿದ್ಯಾರ್ಥಿನಿ ಜತೆ ವಿವಾಹವಾಗಲು ಲಿಂಗವನ್ನೇ ಬದಲಿಸಿಕೊಂಡ ಅಪರೂಪದ ಘಟನೆ ವರದಿಯಾಗಿದೆ.

Advertisement

ಇದನ್ನೂ ಓದಿ:ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ,ಸಾಮೂಹಿಕ ಚರ್ಚೆಯಾಗಲಿ: ಹಿಂದೂ ಹೇಳಿಕೆಗೆ ಜಾರಕಿಹೊಳಿ ಸಮರ್ಥನೆ

ರಾಜಸ್ಥಾನದ ಭರತ್ ಪುರ್ ಶಾಲೆಯ ದೈಹಿಕ ಶಿಕ್ಷಕಿ ಮೀರಾ ಎಂಬಾಕೆ ವಿದ್ಯಾರ್ಥಿ ಕಲ್ಪನಾ ಫೌಜ್ ದಾರ್ ಳನ್ನು ಪ್ರೀತಿಸುತ್ತಿದ್ದಳು. ಹೀಗೆ ಮುಂದುವರಿದ ಪ್ರೇಮ ಪುರಾಣ ಇದೀಗ ಆಕೆಯನ್ನು ವಿವಾಹವಾಗಲು ಶಿಕ್ಷಕಿ ಮೀರಾ ಆಪರೇಶನ್ ಮೂಲಕ ಲಿಂಗ ಬದಲಾಯಿಸಿಕೊಂಡಿರುವುದಾಗಿ ವರದಿ ವಿವರಿಸಿದೆ.

“ನಮ್ಮದು ನಿಜವಾದ ಪ್ರೀತಿ, ಅದಕ್ಕಾಗಿಯೇ ನಾನು ಲಿಂಗ ಬದಲಾವಣೆ ಮಾಡಿಕೊಂಡಿದ್ದೇನೆ ಎಂದು ತಿಳಿಸಿರುವ ಮೀರಾ..ಈಗ ತಾನು ಆರವ್ ಕುಂತಲ್ ಆಗಿದ್ದೇನೆ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.

Advertisement

ಶಾಲೆಯ ದೈಹಿಕ ಶಿಕ್ಷಣ ತರಗತಿಯಲ್ಲಿ ಮೀರಾ ಕಲ್ಪನಾಳನ್ನು ಭೇಟಿಯಾಗಿದ್ದಳು. ಕಲ್ಪನಾ ರಾಜ್ಯ ಮಟ್ಟದ ಕಬಡ್ಡಿ ಆಟಗಾರ್ತಿ. ಈಕೆ ಜನವರಿಯಲ್ಲಿ ದುಬೈನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಕಬಡ್ಡಿ ಟೂರ್ನ್ ಮೆಂಟ್ ನಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.

ದೈಹಿಕ ಶಿಕ್ಷಣ ತರಬೇತಿ ವೇಳೆ ತಾನು ಕಲ್ಪನಾಳ ಜೊತೆ ಮಾತನಾಡುತ್ತ, ತರಬೇತಿ ಕೊಡುತ್ತ ನಿಧಾನಕ್ಕೆ ಪ್ರೀತಿಸತೊಡಗಿದ್ದೆ. ಆದರೆ ಕಲ್ಪನಾ ಯಾವಾಗಲೂ ನಾನು(ಮೀರಾ) ಹುಡುಗನಾಗಬೇಕು ಎಂದು ಬಯಸುತ್ತಿದ್ದಳು. ನಾನು ಹುಟ್ಟಿನಿಂದಲೇ ಹೆಣ್ಣಾಗಿದ್ದೆ, ಆದರೂ ನಾನು ಹುಡುಗ ಎಂಬುದಾಗಿ ಆಲೋಚಿಸುತ್ತಿದ್ದೆ. ಕೊನೆಗೆ ಸರ್ಜರಿ ಮೂಲಕ ಲಿಂಗ ಪರಿವರ್ತನೆಗೆ ಮುಂದಾಗಿದ್ದು, ಅದರಂತೆ 2019ರ ಡಿಸೆಂಬರ್ ನಲ್ಲಿ ಮೊದಲ ಸರ್ಜರಿ ಮಾಡಿಸಿಕೊಂಡಿದ್ದೆ ಎಂದು ಆರವ್ ತಿಳಿಸಿದ್ದಾರೆ.

ತುಂಬಾ ಸಮಯದಿಂದ ನಾನು ಆರವ್ (ಮೀರಾ)ನನ್ನು ಪ್ರೀತಿಸುತ್ತಿದ್ದೆ ಎಂದು ತಿಳಿಸಿರುವ ಕಲ್ಪನಾ, ಒಂದು ವೇಳೆ ಮೀರಾ ಸರ್ಜರಿಗೆ ಒಳಗಾಗದಿದ್ದರೂ ನಾನು ಅವರನ್ನು ವಿವಾಹವಾಗುತ್ತಿದ್ದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next