ಜೈಪುರ್/ನವದೆಹಲಿ: ಸಚಿನ್ ಪೈಲಟ್ ಅವರನ್ನು ಉಪಮುಖ್ಯಮಂತ್ರಿ ಹಾಗೂ ಪಿಸಿಸಿ ವರಿಷ್ಠ ಹುದ್ದೆಯಿಂದ ವಜಾಗೊಳಿಸಿದ ಬೆನ್ನಲ್ಲೇ ಇದೀಗ ರಾಜಸ್ಥಾನ್ ವಿಧಾನಸಭಾ ಸ್ಪೀಕರ್ ಸಿಪಿ ಜೋಶಿ ಅವರು ಬುಧವಾರ ಪೈಲಟ್ ಹಾಗೂ ಇತರ 18 ಮಂದಿ ಬಂಡಾಯ ಶಾಸಕರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ರಾಜಸ್ಥಾನ್ ಸರ್ಕಾರದ ಚೀಫ್ ವಿಪ್ ಮಹೇಶ್ ಜೋಶಿ ಅವರ ದೂರಿನ ಆಧಾರದ ಮೇಲೆ ಸ್ಪೀಕರ್ ಸಿಪಿ ಜೋಶಿ ಅವರು ಪೈಲಟ್ ಹಾಗೂ ಇತರ 18 ಮಂದಿ ಬಂಡಾಯ ಶಾಸಕರು ಜುಲೈ 17ರೊಳಗೆ ಉತ್ತರ ನೀಡುವಂತೆ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಏನಿದು ರಾಜಸ್ಥಾನ್ ಬಿಕ್ಕಟ್ಟು: ಮೂರು ಬೇಡಿಕೆ ಈಡೇರಿಸುವಂತೆ ಸಚಿನ್ ಪೈಲಟ್ ಪಟ್ಟು!
ಪಕ್ಷದ ವಿಪ್ ಅನ್ನು ಉಲ್ಲಂಘಿಸಿದ ಪೈಲಟ್ ಮತ್ತು ಅವರ ಆಪ್ತ ಶಾಸಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಒಂದು ವೇಳೆ ಅವರು ಪಕ್ಷದ ವಿಪ್ ಉಲ್ಲಂಘಿಸಿದ್ದು ಸಾಬೀತಾದರೆ ಪೈಲಟ್ ಹಾಗೂ 18 ಮಂದಿ ಶಾಸಕರು ಪಕ್ಷದಿಂದ ವಜಾಗೊಳ್ಳಲಿದ್ದಾರೆ ಎಂದು ವರದಿ ವಿವರಿಸಿದೆ.
ಇದನ್ನೂ ಓದಿ:ಪೈಲಟ್ ಗೆ ಎಷ್ಟು ಶಾಸಕರ ಬೆಂಬಲವಿದೆ; ಕಾಂಗ್ರೆಸ್ ಹೈಕಮಾಂಡ್ ಹೇಳಿದ್ದೇನು ಗೊತ್ತಾ?