Advertisement

ರಾಜಸ್ಥಾನ್‌ಗೆ ಐದನೇ ಗೆಲುವು

09:12 AM Apr 29, 2019 | keerthan |

ಜೈಪುರ: ಶನಿವಾರದ ಮಹತ್ವದ ಐಪಿಎಲ್‌ ಪಂದ್ಯದಲ್ಲಿ ಹೈದರಾಬಾದ್‌ಗೆ 7 ವಿಕೆಟ್‌ ಸೋಲುಣಿಸಿದ ರಾಜಸ್ಥಾನ್‌ ತನ್ನ ಮುಂದಿನ ಸುತ್ತಿನ ಪ್ರವೇಶದ ಸಾಧ್ಯತೆಯನ್ನು ತೆರೆದಿರಿಸಿದೆ.

Advertisement

ಜಾನಿ ಬೇರ್‌ಸ್ಟೊ ಗೈರಲ್ಲಿ ಆಡಲಿಳಿದ ಹೈದರಾಬಾದ್‌ 8 ವಿಕೆಟಿಗೆ 160 ರನ್‌ ಗಳಿಸಿದರೆ, ರಾಜಸ್ಥಾನ್‌ 19.1 ಓವರ್‌ಗಳಲ್ಲಿ ಕೇವಲ 3 ವಿಕೆಟಿಗೆ 161 ರನ್‌ ಪೇರಿಸಿ ವಿಜಯಿಯಾಯಿತು. ಇದು ರಾಜಸ್ಥಾನ್‌ ತಂಡದ ಐದನೇ ಗೆಲುವು ಆಗಿದೆ.

ಲಿವಿಂಗ್‌ಸ್ಟೋನ್‌, ರಹಾನೆ, ಸ್ಯಾಮ್ಸನ್‌ ರಾಜಸ್ಥಾನ್‌ ಜಯದಲ್ಲಿ ಮಹತ್ವದ ಪಾತ್ರ ವಹಿಸಿ ದರು. ಸ್ಯಾಮ್ಸನ್‌ 48 ರನ್‌ ಗಳಿಸಿ ಅಜೇಯರಾಗಿ ಉಳಿದರು. ಹೈದರಾಬಾದ್‌ ಬ್ಯಾಟಿಂಗ್‌ ಸರದಿಯಲ್ಲಿ ಮಿಂಚಿದ್ದು ಮನೀಷ್‌ ಪಾಂಡೆ ಮತ್ತು ಡೇವಿಡ್‌ ವಾರ್ನರ್‌ ಮಾತ್ರ. ವನ್‌ಡೌನ್‌ನಲ್ಲಿ ಬಂದ ಪಾಂಡೆ 36 ಎಸೆತಗಳಿಂದ 61 ರನ್‌ ಬಾರಿಸಿ ತಂಡದ ರಕ್ಷಣೆಗೆ ನಿಂತರು. ಈ ಅಮೋಘ ಆಟದ ವೇಳೆ 9 ಬೌಂಡರಿ ಸಿಡಿಯಲ್ಪಟ್ಟಿತು. ವಾರ್ನರ್‌ ಗಳಿಕೆ 37 ರನ್‌. ಅಚ್ಚರಿಯೆಂದರೆ, ಈ 32 ಎಸೆತಗಳ ಆಟದಲ್ಲಿ ಒಂದೂ ಬೌಂಡರಿ ಹೊಡೆತ ಇರಲಿಲ್ಲ!

ವಾರ್ನರ್‌ಗೆ ಜೋಡಿಯಾಗಿ ಬಂದ ನಾಯಕ ಕೇನ್‌ ವಿಲಿಯಮ್ಸನ್‌ 13 ರನ್ನಿಗೆ ಆಟ ಮುಗಿಸಿದರು. ಎರಡಂಕೆಯ ರನ್‌ ಗಳಿಸಿದ ಮತ್ತೂಬ್ಬ ಆಟಗಾರ ರಶೀದ್‌ ಖಾನ್‌. 8 ಎಸೆತಗಳಿಂದ 17 ರನ್‌ ಮಾಡಿದ ರಶೀದ್‌, ಒಂದು ಬೌಂಡರಿ ಜತೆಗೆ ಹೈದರಾಬಾದ್‌ ಸರದಿಯ ಏಕೈಕ ಸಿಕ್ಸರ್‌ ಹೊಡೆದರು. ಈ ಸಿಕ್ಸರ್‌ ವರುಣ್‌ ಆರೋನ್‌ ಎಸೆದ ಇನ್ನಿಂಗ್ಸಿನ ಅಂತಿಮ ಓವರಿನ ಅಂತಿಮ ಎಸೆತದಲ್ಲಿ ಬಂತು.

ಸನ್‌ರೈಸರ್ ಹೈದರಾಬಾದ್‌
ಡೇವಿಡ್‌ ವಾರ್ನರ್‌ ಸಿ ಸ್ಮಿತ್‌ ಬಿ ಥಾಮಸ್‌ 37
ಕೇನ್‌ ವಿಲಿಯಮ್ಸನ್‌ ಬಿ ಗೋಪಾಲ್‌ 13
ಮನೀಷ್‌ ಪಾಂಡೆ ಸಿ ಸ್ಯಾಮ್ಸನ್‌ ಬಿ ಗೋಪಾಲ್‌ 61
ವಿಜಯ್‌ ಶಂಕರ್‌ ಸಿ ಉನಾದ್ಕತ್‌ ಬಿ ಆರೋನ್‌ 8
ಶಕಿಬ್‌ ಅಲ್‌ ಹಸನ್‌ ಸಿ ಗೋಪಾಲ್‌ ಬಿ ಉನಾದ್ಕತ್‌ 9
ದೀಪಕ್‌ ಹೂಡಾ ಸಿ ಮತ್ತು ಬಿ ಉನಾದ್ಕತ್‌ 0
ವೃದ್ಧಿಮಾನ್‌ ಸಾಹಾ ಸಿ ಸ್ಯಾಮ್ಸನ್‌ ಬಿ ಥಾಮಸ್‌ 5
ರಶೀದ್‌ ಖಾನ್‌ ಔಟಾಗದೆ 17
ಭುವನೇಶ್ವರ್‌ ಕುಮಾರ್‌ ಸಿ ಉನಾದ್ಕತ್‌ ಬಿ ಆರೋನ್‌ 1
ಸಿದ್ಧಾರ್ಥ್ ಕೌಲ್‌ ಔಟಾಗದೆ 0
ಇತರ 9
ಒಟ್ಟು (8 ವಿಕೆಟಿಗೆ) 160
ವಿಕೆಟ್‌ ಪತನ: 1-28, 2-103, 3-121, 4-125, 5-127, 6-137, 7-137, 8-147.
ಬೌಲಿಂಗ್‌: ವರುಣ್‌ ಆರೋನ್‌ 4-0-36-2
ಒಶೇನ್‌ ಥಾಮಸ್‌ 4-0-28-2
ಶ್ರೇಯಸ್‌ ಗೋಪಾಲ್‌ 4-0-30-2
ಜೈದೇವ್‌ ಉನಾದ್ಕತ್‌ 4-0-26-2
ರಿಯಾನ್‌ ಪರಾಗ್‌ 3-0-24-0
ಸ್ಟುವರ್ಟ್‌ ಬಿನ್ನಿ 1-0-10-0

Advertisement

ರಾಜಸ್ಥಾನ್‌ ರಾಯಲ್ಸ್‌
ಅಜಿಂಕ್ಯ ರಹಾನೆ ಸಿ ವಾರ್ನರ್‌ ಬಿ ಶಕಿಬ್‌ 39
ಲಿವಿಂಗ್‌ಸ್ಟೋನ್‌ ಸಿ ಸಾಹಾ ಬಿ ರಶೀದ್‌ 44
ಸಂಜು ಸ್ಯಾಮ್ಸನ್‌ ಔಟಾಗದೆ 48
ಸ್ಟೀವನ್‌ ಸ್ಮಿತ್‌ ಕೌಲ್‌ ಬಿ ಅಹ್ಮದ್‌ 22
ಆ್ಯಸ್ಟನ್‌ ಟರ್ನರ್‌ ಔಟಾಗದೆ 3
ಇತರ 5
ಒಟ್ಟು (19.1 ಓವರ್‌ಗಳಲ್ಲಿ 3 ವಿಕೆಟಿಗೆ) 161
ವಿಕೆಟ್‌ ಪತನ: 1-78, 2-93, 3-148
ಬೌಲಿಂಗ್‌: ಭುವನೇಶ್ವರ್‌ ಕುಮಾರ್‌ 4-0-22-0
ಶಕಿಬ್‌ ಅಲ್‌ ಹಸನ್‌ 3.1-0-26-1
ರಶೀದ್‌ ಖಾನ್‌ 4-0-30-1
ಖಲೀಲ್‌ ಅಹ್ಮದ್‌ 4-0-33-1
ಸಿದ್ಧಾರ್ಥ್ ಕೌಲ್‌ 4-0-48-0

Advertisement

Udayavani is now on Telegram. Click here to join our channel and stay updated with the latest news.

Next