Advertisement
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 6 ವಿಕೆಟಿಗೆ 150 ರನ್ ಗಳಿಸಿತು. ಇದನ್ನು ಬೆನ್ನತ್ತಿದ ರಾಜಸ್ಥಾನ್ 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 151 ರನ್ ಗಳಿಸಿತು. ರಾಜಸ್ಥಾನ್ ಪರ ಯಶಸ್ವಿ ಜೈಸ್ವಾಲ್ (59), ಆರ್.ಅಶ್ವಿನ್ (40) ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. ಚೆನ್ನೈ ಪರ ಪ್ರಶಾಂತ್ ಸೋಲಂಕಿ 20 ರನ್ ನೀಡಿ 2 ವಿಕೆಟ್ ಪಡೆದರು.
Related Articles
Advertisement
ಬೌಲ್ಟ್ ಅವರ 3ನೇ ಓವರ್‌ನಲ್ಲಂತೂ 26 ರನ್ ಸಿಡಿಯಲ್ಪಟ್ಟಿತು. ಎಲ್ಲವೂ ಅಲಿ ಬ್ಯಾಟ್‌ನಿಂದಲೇ ಬಂತು. ಮೊದಲ ಎಸೆತವನ್ನು ಸಿಕ್ಸರ್‌ಗೆ ರವಾನಿಸಿದ ಅಲಿ, ಬಳಿಕ ಸತತ 5 ಬೌಂಡರಿ ಬಾರಿಸಿ ಮೆರೆದರು. 19 ಎಸೆತಗಳಲ್ಲಿ ಅವರ ಅರ್ಧಶತಕ ಪೂರ್ತಿಗೊಂಡಿತು. ಪವರ್ ಪ್ಲೇಯಲ್ಲಿ ಚೆನ್ನೈ ಒಂದಕ್ಕೆ 75 ರನ್ ಗಳಿಸಿ ಬೃಹತ್ ಮೊತ್ತದ ಸೂಚನೆ ನೀಡಿತು. ಕಾನ್ವೆ-ಅಲಿ ದ್ವಿತೀಯ ವಿಕೆಟಿಗೆ 6.3 ಓವರ್‌ಗಳಿಂದ 83 ರನ್ ಪೇರಿಸಿ ರಾಜಸ್ಥಾನವನ್ನು ನಡುಗಿಸಿದರು. ಆದರೆ ಇಲ್ಲಿಂದ ಮುಂದೆ ರಾಜಸ್ಥಾನ್ ಬೌಲರ್‌ಗಳ ಹಿಡಿತ ಬಿಗಿಗೊಂಡಿತು.
ಕಾನ್ವೆ ಬೆನ್ನಲ್ಲೇ ಜಗದೀಶನ್ (1), ಅಂಬಾಟಿ ರಾಯುಡು (3) ಪೆವಿಲಿಯನ್ ಸೇರಿಕೊಂಡರು. 10 ರನ್ ಅಂತರದಲ್ಲಿ 3 ವಿಕೆಟ್ ಬಿತ್ತು. 7ರಿಂದ 10ನೇ ಓವರ್ ಅವಧಿಯಲ್ಲಿ ಚೆನ್ನೈ ಗಳಿಸಿದ್ದು ಕೇವಲ 19 ರನ್. 15 ಓವರ್ ಮುಕ್ತಾಯಕ್ಕೆ 4ಕ್ಕೆ 117 ರನ್ನಷ್ಟೇ ಆಗಿತ್ತು. ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡಿದ್ದ ಅಲಿಗೆ ನಾಯಕ ಧೋನಿ ಜತೆಯಾದರು. ಆದರೆ ಆರಂಭದ ಅಬ್ಬರ ಕಂಡುಬರಲಿಲ್ಲ. ಅಲಿ ಹಾಗೂ ಚೆನ್ನೈಗೆ ಕಡಿವಾಣ ಹಾಕುವಲ್ಲಿ ರಾಜಸ್ಥಾನ್ ಬೌಲರ್ ಧಾರಾಳ ಯಶಸ್ಸು ಕಂಡಿದ್ದರು. 5ನೇ ವಿಕೆಟಿಗೆ 51 ರನ್ ಬಂತಾದರೂ ಇದಕ್ಕೆ 52 ಎಸೆತ ಬೇಕಾಯಿತು. ಅಲಿ ಹೊರತುಪಡಿಸಿದರೆ 26 ರನ್ ಮಾಡಿದ ಧೋನಿ ಅವರದೇ ಹೆಚ್ಚಿನ ಗಳಿಕೆ. ರಾಜಸ್ಥಾನ್ ಪರ ಮೆಕಾಯ್ ಮತ್ತು ಚಹಲ್ ಅಮೋಘ ದಾಳಿ ಸಂಘಟಿಸಿದರು.
ದುಬೆ ಬದಲು ರಾಯುಡು: ಎರಡೂ ತಂಡಗಳು ಒಂದೊಂದು ಬದಲಾವಣೆಯೊಂದಿಗೆ ಆಡಲಿಳಿದವು. ಚೆನ್ನೈ ಪರ ಅಂಬಾಟಿ ರಾಯುಡು ಅವಕಾಶ ಪಡೆದರು. ಶಿವಂ ದುಬೆ ಹೊರಗುಳಿದರು. ಕೆಕೆಆರ್ ಶಿಮ್ರಾನ್ ಹೆಟ್‌ಮೈರ್ ಅವರನ್ನು ಸೇರಿಸಿಕೊಂಡಿತು. ಇವರಿಗಾಗಿ ಜಾಗ ಬಿಟ್ಟವರು ಜಿಮ್ಮಿ ನೀಶಮ್.
ಸಂಕ್ಷಿಪ್ತ ಸ್ಕೋರ್: ಚೆನ್ನೈ ಕಿಂಗ್ಸ್ 20 ಓವರ್, 150/6 (ಮೊಯಿನ್ ಅಲಿ 93, ಚಹಲ್ 26ಕ್ಕೆ 2, ಒಬೆದ್ ಮೆಕಾಯ್ 20ಕ್ಕೆ 2). ರಾಜಸ್ಥಾನ್ 20 ಓವರ್, 19.4 ಓವರ್, 151/5 (ಜೈಸ್ವಾಲ್ 59, ಆರ್.ಅಶ್ವಿನ್ 40, ಪ್ರಶಾಂತ್ ಸೋಲಂಕಿ 20ಕ್ಕೆ 2)