Advertisement
2 ವರ್ಷಗಳ ನಿಷೇಧ ಮುಗಿಸಿ ಬಂದಿರುವ ಚೆನ್ನೈ ಸೂಪರ್ ಕಿಂಗ್ಸ್ 7 ಜಯ ಹಾಗೂ 14 ಅಂಕಗಳೊಂದಿಗೆ ಈಗಾಗಲೇ ಪ್ಲೇ-ಆಫ್ ಹಾದಿಯನ್ನು ಸುಗಮಗೊಳಿಸಿಕೊಂಡಿದೆ. ಇನ್ನೊಂದು ಪಂದ್ಯ ಗೆದ್ದರೆ ಇದು ಅಧಿಕೃತಗೊಳ್ಳಲಿದೆ. ಹೀಗಾಗಿ ಧೋನಿ ಪಡೆ ಚಿಂತೆಪಡುವಂಥದ್ದೇನಿಲ್ಲ.
ಹ್ಯಾಟ್ರಿಕ್ ಸೋಲಿನ ಬಳಿಕ ಚೇತರಿಸಿಕೊಂಡ ರಾಜಸ್ಥಾನ್, ಹಿಂದಿನ ಮುಖಾಮುಖೀಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್‌ಗ 15 ರನ್ನುಗಳ ಸೋಲುಣಿಸಿ ಗೆಲುವಿನ ಹಳಿ ಏರಿತ್ತು. ತವರಿನ ಜೈಪುರ ಅಂಗಳದಲ್ಲೇ ಈ ಗೆಲುವು ಒಲಿಸಿಕೊಂಡದ್ದು ಹಾಗೂ ಶುಕ್ರವಾರ ಚೆನ್ನೈ ವಿರುದ್ಧ ಇದೇ ಅಂಗಳದಲ್ಲಿ ಆಡುವುದು ರಾಜಸ್ಥಾನ್ ತಂಡದ ಆತ್ಮವಿಶ್ವಾಸವನ್ನು ಸ್ವಲ್ಪ ಮಟ್ಟಿಗಾದರೂ ಹೆಚ್ಚಿಸಿರುವುದರಲ್ಲಿ ಅನುಮಾನವಿಲ್ಲ. ಮೊದಲ ಸುತ್ತಿನಲ್ಲಿ ಸೋಲು
ಚೆನ್ನೈ ವಿರುದ್ಧ ಪುಣೆಯಲ್ಲಿ ಆಡಿದ ಮೊದಲ ಸುತ್ತಿನಲ್ಲಿ ರಾಜಸ್ಥಾನ್ ರಾಯಲ್ಸ್ 64 ರನ್ನುಗಳ ಭಾರೀ ಸೋಲಿಗೆ ತುತ್ತಾಗಿತ್ತು. ಇದಕ್ಕೆ ಸೇಡು ತೀರಿಸಬೇಕಾದ ಅನಿವಾರ್ಯತೆಯೂ ತಂಡದ ಮೇಲಿದೆ. ಎ. 20ರ ಆ ಮುಖಾಮುಖೀಯಲ್ಲಿ ಶೇನ್ ವಾಟ್ಸನ್ ಅವರ ಅಮೋಘ ಶತಕ ಸಾಹಸದಿಂದ (106) ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟಿಗೆ 204 ರನ್ ಪೇರಿಸಿತ್ತು. ಜವಾಬಿತ್ತ ರಾಜಸ್ಥಾನ್ 18.3 ಓವರ್‌ಗಳಲ್ಲಿ 140ಕ್ಕೆ ಕುಸಿದಿತ್ತು. 45 ರನ್ ಮಾಡಿದ ಬೆನ್ ಸ್ಟೋಕ್ಸ್ ಅವರದೇ ಗರಿಷ್ಠ ಗಳಿಕೆ ಆಗಿತ್ತು. ಚಹರ್, ಠಾಕೂರ್, ಬ್ರಾವೊ ಮತ್ತು ಕಣ್ì ಶರ್ಮ ತಲಾ 2 ವಿಕೆಟ್ ಕಿತ್ತು ರಾಜಸ್ಥಾನ್‌ಗೆ ಕಂಟಕವಾಗಿ ಪರಿಣಮಿಸಿದ್ದರು.
Related Articles
Advertisement
ಚೆನ್ನೈ ರೆಡ್-ಹಾಟ್ ಫಾರ್ಮ್ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಫಾರ್ಮ್ನಲ್ಲಿದೆ. ಕಳೆದ ಪಂದ್ಯದಲ್ಲಿ ಆರ್‌ಸಿಬಿಯನ್ನು ಬೆಂಗಳೂರಿನಲ್ಲೇ 127ಕ್ಕೆ ನಿಯಂತ್ರಿಸಿ 7ನೇ ಜಯ ಸಾಧಿಸಿತ್ತು. ರವೀಂದ್ರ ಜಡೇಜ, ಹರ್ಭಜನ್ ಸಿಂಗ್ ಅಮೋಘ ಮಟ್ಟದ ಬೌಲಿಂಗ್ ಪ್ರದರ್ಶಿಸಿದ್ದರು. ಆದರೆ ಗಾಯಾಳು ದೀಪಕ್ ಚಹರ್ ಗೈರಲ್ಲಿ ಲುಂಗಿ ಎನ್‌ಗಿಡಿ, ಡೇವಿಡ್ ವಿಲ್ಲಿ, ಶಾದೂìಲ್ ಠಾಕೂರ್ ಹೆಚ್ಚಿನ ಜವಾಬ್ದಾರಿ ವಹಿಸಬೇಕಿದೆ. ಚೆನ್ನೈ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಎರಡು ಮಾತಿಲ್ಲ. ಅಂಬಾಟಿ ರಾಯುಡು, ಶೇನ್ ವಾಟ್ಸನ್, ಧೋನಿ, ಬ್ರಾವೊ, ರೈನಾ ಎಲ್ಲರೂ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಯಾವುದೇ ಕ್ರಮಾಂಕಕ್ಕೂ ಸಲ್ಲುವ ರಾಯುಡು 10 ಪಂದ್ಯಗಳಿಂದ 423 ರನ್ ಪೇರಿಸಿ ಎದುರಾಳಿಗಳ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದಾರೆ. ಮತ್ತೆ ಫಿನಿಶರ್ ಪಾತ್ರವನ್ನುನ ಯಶಸ್ವಿಯಾಗಿ ನಿಭಾಯಿಸುತ್ತಿರುವ ಧೋನಿ 3 ಅರ್ಧ ಶತಕಗಳ ಸಹಿತ 360 ರನ್ ಪೇರಿಸಿದ್ದಾರೆ.