Advertisement

ಇಂಗ್ಲೆಂಡ್ ಟೀಂ ಬಿಟ್ಟುಬಿಡಿ..; ಜೋಸ್ ಬಟ್ಲರ್ ಗೆ 40 ಕೋಟಿ ಆಫರ್ ನೀಡಿದ ರಾಜಸ್ಥಾನ ರಾಯಲ್ಸ್

01:41 PM Jun 29, 2023 | Team Udayavani |

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಚೊಚ್ಚಲ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ಇಂಗ್ಲೆಂಡ್ ವೈಟ್-ಬಾಲ್ ನಾಯಕ ಜೋಸ್ ಬಟ್ಲರ್ ಅವರ ಸೇವೆಗಳನ್ನು ಪ್ರಪಂಚದಾದ್ಯಂತದ ಇತರ ಲೀಗ್‌ಗಳಲ್ಲಿ ತಮ್ಮ ಫ್ರಾಂಚೈಸಿಗಳಿಗೆ ಪಡೆದುಕೊಳ್ಳುವ ಸಾಧ್ಯತೆಯನ್ನು ಎದುರು ನೋಡುತ್ತಿದೆ.

Advertisement

ರಾಯಲ್ಸ್ ಮ್ಯಾನೇಜ್ಮೆಂಟ್ ಜೋಸ್ ಬಟ್ಲರ್ ಅವರನ್ನು ದೀರ್ಘಾವಧಿಗೆ ತಮ್ಮೊಂದಿಗೆ ಉಳಿಸಲು ಮತ್ತು ನಾಲ್ಕು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಲು ಉತ್ಸುಕವಾಗಿದೆ ಎಂದು ವರದಿ ತಿಳಿಸಿದೆ.

ಪ್ರತಿಯೊಂದು ಕ್ರಿಕೆಟ್ ಆಡುವ ರಾಷ್ಟ್ರವು ತನ್ನ ಟಿ20 ಕೂಟವನ್ನು ಪ್ರಾರಂಭಿಸಿರುವುದರಿಂದ ಚುಟುಕು ಸ್ವರೂಪವು ತ್ವರಿತ ಗತಿಯಲ್ಲಿ ಬೆಳೆಯುತ್ತಿದೆ. ಹೊಸ ಲೀಗ್‌ ಗಳ ಸೇರ್ಪಡೆಯೊಂದಿಗೆ, ಐಪಿಎಲ್ ಮಾಲಕರು ತಮ್ಮ ಪ್ರಾಬಲ್ಯವನ್ನು ವಿಸ್ತರಿಸಿದ್ದು, ಐಪಿಎಲ್ ತಂಡಗಳ ಮಾಲಕರು ವಿವಿಧ ಲೀಗ್ ಗಳಲ್ಲಿ ಫ್ರಾಂಚೈಸಿ ಹೊಂದಿದ್ದಾರೆ.

ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುವ ಜೋಸ್ ಬಟ್ಲರ್ ಅವರು ಸೌತ್ ಆಫ್ರಿಕಾ ಟಿ20 ಲೀಗ್ ನಲ್ಲಿ ಪರ್ಲ್ಸ್ ರಾಯಲ್ಸ್ ಪರ ಆಡುತ್ತಾರೆ. ಆದರೆ ಸಿಪಿಎಲ್ ನಲ್ಲಿ ಬಾರ್ಬಡೋಸ್ ರಾಯಲ್ಸ್ ಭಾಗವಾಗಿಲ್ಲ.

ಇದನ್ನೂ ಓದಿ:ಸಿದ್ದರಾಮಯ್ಯನವರೇ, ಒಂದಿಷ್ಟು ವಿಷ ಕೊಟ್ಟುಬಿಡಿ, ಆದರೆ.. : ಆಟೋ ಚಾಲಕನ ಅಳಲು

Advertisement

ಇದೀಗ ಹೊಸ ಬೆಳವಣಿಗೆಯಲ್ಲಿ ರಾಯಲ್ಸ್ ಫ್ರಾಂಚೈಸಿಯು ಬಟ್ಲರ್ ಅವರಿಗೆ ನಾಲ್ಕು ವರ್ಷಕ್ಕೆ 40 ಕೋಟಿ ರೂ ನೀಡಲು ಮುಂದಾಗಿದೆ ಎಂದು ವರದಿ ತಿಳಿಸಿದೆ. ಒಂದು ವೇಳೆ ಇಂಗ್ಲೆಂಡ್ ಏಕದಿನ ಮತ್ತು ಟಿ20 ನಾಯಕ ಬಟ್ಲರ್ ಈ ಒಪ್ಪಂದಕ್ಕೆ ಸಹಿ ಹಾಕಿದರೆ, ತನ್ನ ಅಂತಾರಾಷ್ಟ್ರೀಯ ಒಪ್ಪಂದವನ್ನು ಬಿಟ್ಟುಕೊಡಬೇಕಾಗುತ್ತದೆ. ಅಲ್ಲದೆ ಇಂಗ್ಲೆಂಡ್ ಪರವಾಗಿ ವೈಟ್-ಬಾಲ್ ಕ್ರಿಕೆಟ್ ಆಡಲು ಅವರು ರಾಯಲ್ಸ್ ಫ್ರಾಂಚೈಸಿ ಮ್ಯಾನೇಜ್ಮೆಂಟ್ ನ ಅನುಮತಿಯನ್ನು ಪಡೆಯಬೇಕಾಗುತ್ತದೆ.

ಬಟ್ಲರ್ ಜೊತೆಗೆ, ಮುಂಬೈ ಇಂಡಿಯನ್ಸ್ ಸಹ ಜೋಫ್ರಾ ಆರ್ಚರ್‌ ಗೆ ಇದೇ ರೀತಿಯ ಆಫರ್ ನೀಡಲಾಗಿತ್ತು. ಜೇಸನ್ ರಾಯ್ ಇತ್ತೀಚೆಗೆ ಕೆಕೆಆರ್ ನೊಂದಿಗೆ ಇದೇ ರೀತಿಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅವರು ಮುಂಬರುವ ಮೇಜರ್ ಲೀಗ್ ಕ್ರಿಕೆಟ್ (MLC) ನಲ್ಲಿ ಎಲ್ ಎ ನೈಟ್ ರೈಡರ್ಸ್‌ಗಾಗಿ ಆಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next