Advertisement

ರಾಜಸ್ಥಾನ: ಅಶೋಕ್ ಗೆಹ್ಲೋಟ್‌ ಅಧಿವೇಶನ ತಂತ್ರ

03:02 AM Jul 20, 2020 | Hari Prasad |

ಜೈಪುರ: ರಾಜಸ್ಥಾನ ರಾಜಕೀಯ ಪ್ರಮುಖ ಘಟ್ಟ ತಲುಪಿದ್ದು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಕುರ್ಚಿ ಉಳಿಸಿಕೊಳ್ಳಲು ‘ಪ್ಲಾನ್‌ ಬಿ’ ತಂತ್ರದ ಮೊರೆ ಹೊಕ್ಕಿದ್ದಾರೆ.

Advertisement

ಬಂಡಾಯ ನಾಯಕ ಸಚಿನ್‌ ಪೈಲಟ್‌ ಮತ್ತು ಅವರ ಬೆಂಬಲಿಗ ಶಾಸಕರು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ಕುರಿತಾಗಿ ಮಂಗಳವಾರ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಕೋರ್ಟ್‌ನಲ್ಲೇನಾದರೂ ಸಚಿನ್‌ ಪೈಲಟ್‌ ಗುಂಪಿಗೆ ಜಯ ಸಿಕ್ಕಿದರೆ, ಪ್ರತಿಯಾಗಿ ಏನು ಮಾಡಬೇಕು ಎಂಬ ಬಗ್ಗೆ ಚಿಂತನೆ ಶುರುವಾಗಿವೆ.

ಅಶೋಕ್‌ ಗೆಹ್ಲೋಟ್‌ ಈ ವಾರವೇ ವಿಧಾನಸಭೆ ಅಧಿವೇಶನ ಕರೆಯಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ಅವರು ಶನಿವಾರ ಸಂಜೆ ರಾಜ್ಯಪಾಲ ಕಲ್ರಾಜ್‌ ಮಿಶ್ರಾ ಅವರನ್ನು ಭೇಟಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಸದ್ಯ ಅಧಿವೇಶನ ನಡೆಯದಿರುವುದರಿಂದ ವಿಪ್‌ ಅನ್ವಯವಾಗುವುದಿಲ್ಲ ಎಂಬುದು ಸಚಿನ್‌ ಪೈಲಟ್‌ ಗುಂಪಿನ ವಾದ. ಹೀಗಾಗಿಯೇ ಕೋರ್ಟ್‌ನಲ್ಲಿ ಅವರ ಪರ ತೀರ್ಪು ಬಂದರೂ ಈ ವಾರವೇ ಅಧಿವೇಶನ ಕರೆದು ಪೈಲಟ್‌ ಗುಂಪು ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಉಂಟುಮಾಡುವ ಯೋಜನೆ ರೂಪಿಸಲಾಗುತ್ತಿದೆ. ಒಂದು ವೇಳೆ ಅಧಿವೇಶನಕ್ಕೆ ಗೈರಾದರೆ ಅವರ ಅನರ್ಹತೆ ಸುಲಭವಾಗಲಿದೆ ಎಂಬುದು ಲೆಕ್ಕಾಚಾರ.

ಗೆಹ್ಲೋಟ್‌ ಮೇಲೆ ನಂಬಿಕೆ
ಸದ್ಯ ಕಾಂಗ್ರೆಸ್‌ ಹೈಕಮಾಂಡ್‌ ಸಿಎಂ ಗೆಹ್ಲೋಟ್‌ ಮೇಲೆ ನಂಬಿಕೆ ಇರಿಸಿದೆ. ಶನಿವಾರ ಬಿಟಿಪಿಯ ಇಬ್ಬರು ಶಾಸಕರು ಸರಕಾರಕ್ಕೆ ಬೆಂಬಲ ಘೋಷಿಸಿದ ಮೇಲೆ ಗೆಹ್ಲೋಟ್‌ ಕೂಡ ನಿರಾಳವಾಗಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಅಧಿವೇಶನ ಕರೆಯಲು ಮುಂದಾಗಿರಬಹುದು ಎನ್ನಲಾಗುತ್ತಿದೆ.

Advertisement

ಬೆಂಗಳೂರಿಗೆ ಹೋಗಿಲ್ಲ
ನಾವ್ಯಾರೂ ಬೆಂಗಳೂರಿಗೆ ಹೋಗಿಲ್ಲ ಎಂದು ಸಚಿನ್‌ ಪೈಲಟ್‌ ಗುಂಪಿನ ಹಿರಿಯ ಶಾಸಕರೊಬ್ಬರು ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮಗಳ ವರದಿ ಸುಳ್ಳು ಎಂದು ಹೇಳಿದ್ದಾರೆ. ಆದರೆ ಇರುವ ಸ್ಥಳದ ಬಗ್ಗೆ ಮಾತ್ರ ಅವರು ಗುಟ್ಟು ಬಿಟ್ಟುಕೊಟ್ಟಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next