Advertisement

ನನ್ನ ಜಾತಿ ಅಭಿವೃದ್ಧಿ ಮೊದಲ ಆದ್ಯತೆ, ಸಮಾಜ ಆಮೇಲೆ: ರಾಜಸ್ಥಾನ ಸಚಿವೆ

06:37 AM Jan 02, 2019 | udayavani editorial |

ಜೈಪುರ : ”ನನ್ನ ಜಾತಿಯ ಜನರ ಅಭಿವೃದ್ಧಿಗೆ ಕೆಲಸ ಮಾಡುವುದು ನನ್ನ ಮೊದಲ ಆದ್ಯತೆ; ಅನಂತರದ ಆದ್ಯತೆ ಸಮಾಜಕ್ಕಾಗಿ ದುಡಿಯುವುದು” ಎಂದು ರಾಜಸ್ಥಾನದ ಸಚಿವೆ ಮಮತಾ ಭೂಪೇಶ್‌ ಹೇಳಿದ್ದಾರೆ.

Advertisement

ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯ ಶಾಸಕಿಯಾಗಿರುವ ಭೂಪೇಶ್‌ ಅವರು,  ಮುಖ್ಯಮಂತ್ರಿ ಅಶೋಕ್‌ ಗೆಹ್‌ಲೋಟ್‌ ಸಚಿವ ಸಂಪುಟದ ಏಕೈಕ ಸಚಿವೆಯಾಗಿದ್ದಾರೆ.

ಆಳ್ವಾರ್‌ನಲ್ಲಿ ಬೈರ್ವಾ ದಿವಸ್‌ ಪ್ರಯುಕ್ತ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುತ್ತಿದ್ದ  ಮಹಿಳಾ ಮತ್ತು ಶಿಶು ಅಭಿವೃದ್ಧಿ  ಸಚಿವೆ ಭೂಪೇಶ್‌, ”ನನ್ನ ಜಾತಿಯ ಜನರ ಕಷ್ಟಕಾಲದಲ್ಲಿ ಅವರ ಬೆಂಬಲಕ್ಕೆ ನಿಂತು ಕೆಲಸ ಮಾಡುವುದಕ್ಕೆ ನಾನು ಬದ್ಧಳಿದ್ದೇನೆ; ಆದುದರಿಂದ ನನ್ನ ಜಾತಿಯವರಿಗಾಗಿ ಕೆಲಸ ಮಾಡುವುದಕ್ಕೆ ನನ್ನ ಮೊದಲ ಆದ್ಯತೆ ಇದೆ; ಅನಂತರವೇ ನಾನು ಸಮಾಜದ ಅಭಿವೃದ್ಧಿಗಾಗಿ ದುಡಿಯುವೆ” ಎಂದು ಹೇಳಿದರು. 

ಸಚಿವೆಯ ಈ ಹೇಳಿಕೆ ಬಗ್ಗೆ ಸ್ಪಷ್ಟನೆ ಕೋರಿ ಮಾಧ್ಯಮದವರು ಆಕೆಯನ್ನು ಸಂಪರ್ಕಿಸಲು ಯತ್ನಿಸಿದರೂ ಅದು ಫ‌ಲಕಾರಿಯಾಗಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next