ಜೈಪುರ: ತ್ಯಾಗ ಬಲಿದಾನದ ಬಕ್ರೀದ್ ಹಬ್ಬ ಬಂದಿದೆ. ಆಡು, ಮೇಕೆ ಮಾರಾಟ ಜೋರಾಗಿದೆ. 10 -15 ಸಾವಿರಕ್ಕೂ ಹೆಚ್ಚಿನ ಬೆಲೆಗೆ ಆಡು, ಮೇಕೆಗಳು ಮಾರಾಟವಾಗುತ್ತಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಕುರಿಮರಿಗೆ ಎಷ್ಟೇ ಬೆಲೆ ಬಂದರೂ ಅದನ್ನು ಮಾರಾಟ ಮಾಡಲು ಮುಂದಾಗುತ್ತಿಲ್ಲ.
ರಾಜಸ್ಥಾನದ ಚುರು ಜಿಲ್ಲೆಯ ರಾಜು ಸಿಂಗ್ ಎನ್ನುವವರ ಕುರಿಮರಿಯೊಂದರ ಖರೀದಿಗೆ 1 ಕೋಟಿ ರೂ. ಆಫರ್ ಬಂದರೂ ಅದನ್ನು ಅವರು ಮಾರಾಟ ಮಾಡಲು ನಿರಾಕರಿಸಿದ್ದಾರೆ.
ಹೌದು, ಕಳೆದ ವರ್ಷ ರಾಜು ಸಿಂಗ್ ಅವರು ಸಾಕುತ್ತಿದ್ದ ಹೆಣ್ಣು ಕುರಿಯೊಂದು ಗಂಡು ಕುರಿಮರಿಗೆ ಜನ್ಮ ನೀಡಿದ್ದು, ಇಂದು ಅದೇ ಕುರಿಮರಿಯನ್ನು ಲಕ್ಷದಿಂದ ಕೋಟಿಯವರೆಗಿನ ಬೆಲೆಗೆ ಜನ ಕೇಳುತ್ತಿದ್ದಾರೆ. ಕುರಿಮರಿಯ ದೇಹದ ಮೇಲೆ ಉರ್ದುವಿನಲ್ಲಿ ಏನೋ ಬರೆದಾಗಿನ ಅಕ್ಷರವಿದೆ. ಅದು ಏನೆಂದು ಊರಿನ ಮುಸ್ಲಿಂಮರ ಬಳಿ ರಾಜು ಸಿಂಗ್ ಕೇಳಿದ್ದಾರೆ. ಅದು ಉರ್ದುವಿನಲ್ಲಿ ʼ786ʼ ಅಕ್ಷರವೆಂದು ಅವರು ಹೇಳಿದ್ದಾರೆ. ಮುಸ್ಲಿಂಮರಲ್ಲಿ ʼ786ʼ ಅಕ್ಷರವನ್ನು ಪವಿತ್ರವೆಂದು ನಂಬಲಾಗುತ್ತದೆ.
ಇದನ್ನೂ ಓದಿ: ಸರ್ಕಸ್ ಕಲಾವಿದನ ಹತ್ಯೆ ಪ್ರಕರಣ: ಕಾಂಡೋಮ್ ಪ್ಯಾಕೆಟ್‌ನಿಂದ ಪತ್ತೆಯಾಯಿತು ಆರೋಪಿಗಳ ಜಾಡು
ಈ ವಿಚಾರ ಅಕ್ಕಪಕ್ಕದ ಗ್ರಾಮಕ್ಕೂ ಹಬ್ಬಿದ್ದು, ಮುಸ್ಲಿಂಮರು ಕುರಿಮರಿಯನ್ನು ಮಾರಾಟ ಮಾಡಿ, ನಾವು ಖರೀದಿಸುತ್ತೇವೆ ಎಂದು 70 ಲಕ್ಷದಿಂದ 1 ಕೋಟಿವರೆಗಿನ ಆಫರ್ ನ್ನು ನೀಡಿದ್ದಾರೆ. ಆದರೆ ಈ ಕುರಿಮರಿ ರಾಜು ಸಿಂಗ್ ಅವಗಿಗೆ ಆತ್ಮೀಯವಾಗಿರುವುದರಿಂದ ಅದನ್ನು ಅವರು ಮಾರಲು ನಿರಾಕರಿಸಿದ್ದಾರೆ.
ಕುರಿಗೆ ಭಾರಿ ಬಿಡ್ ಆಗಿದ್ದರಿಂದ ಕುರಿಮರಿಗಾಗಿ ವಿಶೇಷ ಕಾಳಜಿಯನ್ನು ನೀಡಲಾಗುತ್ತಿದೆ. ಇದಕ್ಕೆ ದಾಳಿಂಬೆ, ಪಪ್ಪಾಯಿ, ಬಿಂದೋಲ, ರಾಗಿ ಮತ್ತು ಹಸಿರು ತರಕಾರಿಗಳನ್ನು ನೀಡಲಾಗುತ್ತದೆ. ಭದ್ರತಾ ಕಾರಣಗಳಿಗಾಗಿ ಈಗ ಕುರಿಮರಿಯನ್ನು ತನ್ನ ಮನೆಯೊಳಗೆ ಇಡುತ್ತಿದ್ದೇನೆ ಎಂದು ಸಿಂಗ್ ಹೇಳಿದ್ದಾರೆ.
ಒಂದು ವೇಳೆ 2 ಕೋಟಿ ರೂ. ಆಫರ್ ಬಂದರೆ ಅದನ್ನು ಮಾರಾಟ ಮಾಡುವುದಾಗಿ ಮಾಲೀಕರು ಹೇಳಿದ್ದಾರೆ ಎಂದು ಮತ್ತೊಂದು ವರದಿ ತಿಳಿಸಿದೆ.