Advertisement

ಪತ್ನಿ ಮೇಲೆ ಸ್ನೇಹಿತ ಅತ್ಯಾಚಾರ ಎಸಗುತ್ತಿದ್ರೆ…ಕೋಣೆ ಹೊರಗೆ ಪತಿ ಕಾವಲು!

07:24 PM Jun 19, 2020 | Nagendra Trasi |

ಅಲ್ವಾರ್(ರಾಜಸ್ಥಾನ್): 35ವರ್ಷದ ಪತ್ನಿಯನೇ ಸ್ವತಃ ಗಂಡನೇ ಕಿಡ್ನಾಪ್ ಮಾಡಿ ನಂತರ ತನ್ನ ಸ್ನೇಹಿತನ ಬಳಿ ಆಕೆ ಅತ್ಯಾಚಾರ ಎಸಗುವಂತೆ ಸೂಚನೆ ನೀಡಿದ್ದ, ಅಷ್ಟೇ ಅಲ್ಲ ಸ್ನೇಹಿತ ಪತ್ನಿಯ ಮೇಲೆ ಅತ್ಯಾಚಾರ ಎಸಗುತ್ತಿದ್ದ ವೇಳೆ ಈತ ಕೋಣೆಯ ಹೊರಗೆ ಕಾವಲು ಕಾಯುತ್ತಿದ್ದ ಘಟನೆ ರಾಜಸ್ಥಾನದ ಅಲ್ವಾರ್ ನ ಶಹಜಹಾನ್ ಪುರದಲ್ಲಿ ನಡೆದಿದೆ.

Advertisement

ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಆಕೆಯ ಗಂಡ ಹಾಗೂ ಸ್ನೇಹಿತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ:
ಜೂನ್ 4ರಂದು ಬೈಕ್ ನಲ್ಲಿ ಬಲವಂತವಾಗಿ ಪತ್ನಿ ಹಾಗೂ ಆತನ ಗೆಳೆಯನನ್ನು ನಿರ್ಜನ ಪ್ರದೇಶಕ್ಕೆ ಕರದೊಯ್ದಿದ್ದ. ಅಲ್ಲಿ ಪತ್ನಿಯನ್ನು ಪಾಳು ಬಿದ್ದ ಕೋಣೆಯೊಂದಕ್ಕೆ ಕರೆದೊಯ್ದು ಬಿಟ್ಟಿದ್ದ. ಬಳಿಕ ಗೆಳೆಯ ಬಲ್ವಾನ್ ಹತ್ತಿರ ಅತ್ಯಾಚಾರ ಎಸಗುವಂತೆ ಹೇಳಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಇದರಲ್ಲಿ ತುಂಬಾ ಕಸಿವಿಸಿಗೊಳ್ಳುವ ವಿಚಾರವೆನೆಂದರೆ ಕೋಣೆಯೊಳಗೆ ಪತ್ನಿಯ ಮೇಲೆ ಗೆಳೆಯ ಅತ್ಯಾಚಾರ ಎಸಗುತ್ತಿದ್ದರೆ ಪತಿ ಹೊರಗೆ ಕಾವಲು ಕಾಯುತ್ತಿದ್ದದ್ದು ಎಂದು ಶಹಜಹಾನ್ ಪುರ್ ಠಾಣಾಧಿಕಾರಿ ಸುರೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ.

ಘಟನೆ ನಡೆದ ನಂತರ ಪತಿಯೇ ಪತ್ನಿಗೆ ಬೆದರಿಕೆಯೊಡ್ಡಿದ್ದ ಈ ವಿಚಾರವನ್ನು ಪೊಲೀಸರಿಗಾಗಲಿ, ಮನೆಯವರಿಗಾಗಲಿ ತಿಳಿಸಕೂಡದು ಎಂದು ಎಚ್ಚರಿಕೆ ನೀಡಿದ್ದನಂತೆ. ಕೊನೆಗೂ ಆಕೆ ಈ ವಿಚಾರವನ್ನು ಪೋಷಕರಿಗೆ ತಿಳಿಸಿದ್ದು, ಪತಿ ಹಾಗೂ ಗೆಳೆಯನ ವಿರುದ್ಧ ದೂರು ನೀಡಲು ನಿರ್ಧರಿಸಿದ್ದರು.

Advertisement

ಎಫ್ ಐಆರ್ ದಾಖಲಿಸಿಕೊಂಡ ಪೊಲೀಸರು ಸಂತ್ರಸ್ತೆಯ ಪತಿ ಹಾಗೂ ಗೆಳೆಯನನ್ನು ಬುಧವಾರ ಬಂಧಿಸಿದ್ದು, ಗುರುವಾರ ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next