Advertisement

ʼದಿ ಕೇರಳ ಸ್ಟೋರಿʼ ನೋಡಿ ಹೊಗಳಿದ್ದಕ್ಕೆ ಯುವಕನನ್ನು ಥಳಿಸಿದ ಗುಂಪು

09:28 AM May 08, 2023 | Team Udayavani |

ಜೈಪುರ: ʼದಿ ಕೇರಳ ಸ್ಟೋರಿʼ ಸಿನಿಮಾವನ್ನು ನೋಡಿ ಹೊಗಳಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಗುಂಪೊಂದು ಥಳಿಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿರುವುದು ವರದಿಯಾಗಿದೆ.

Advertisement

ದೇಶದಲ್ಲಿ  ಭಾರೀ ಸುದ್ದಿಯಾಗುತ್ತಿರುವ ʼದಿ ಕೇರಳ ಸ್ಟೋರಿʼ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಮೂರೇ ದಿನದಲ್ಲಿ ಸಿನಿಮಾ ಕೋಟಿಗಟ್ಟಲೇ ಕಮಾಯಿ ಮಾಡಿದೆ. ಪಾಸಿಟಿವ್‌ – ನೆಗೆಟಿವ್‌ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ʼದಿ ಕೇರಳ ಸ್ಟೋರಿʼ ಸಿನಿಮಾವನ್ನು ನೋಡಿ ಹೊಗಳಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಗುಂಪೊಂದು ಥಳಿಸಿದೆ.

ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತನಾಗಿರುವ ಯುವಕನೊಬ್ಬ ʼದಿ ಕೇರಳ ಸ್ಟೋರಿʼ ಸಿನಿಮಾವನ್ನು ನೋಡಿ ಅದರ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಪಾಸಿಟಿವ್‌ ಆಗಿ ಬರೆದುಕೊಂಡಿದ್ದ. ಆ ಬಳಿಕ ವಾಟ್ಸಾಪ್‌ ನಲ್ಲಿ ಸಿನಿಮಾವನ್ನು ಯುವತಿಯರು ನೋಡಲೇಬೇಕೆಂದು ಸ್ಟೇಟಸ್‌ ಹಾಕಿದ್ದ ಎನ್ನಲಾಗಿದೆ.

ಶನಿವಾರ ರಾತ್ರಿ ಮನೆಗೆ ವಾಪಾಸ್‌ ಆಗುತ್ತಿದ್ದ ವೇಳೆ ಮೂವರು ತನ್ನನ್ನು ತಡೆದು, ಆ ಸಿನಿಮಾದ ಬಗ್ಗೆ ಹೊಗಳಿ ನಮ್ಮ ಸಮುದಾಯವನ್ನು ಅವಮಾನ ಮಾಡಿದ್ದೀಯ ಎಂದು ನನ್ನ ಮೇಲೆ ಹಲ್ಲೆಗೈದಿದ್ದಾರೆ ಎಂದು ಮಂದಿರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸದ್ಯ ಪೊಲೀಸರು ಈ ಪ್ರಕರಣದಲ್ಲಿ ಅಪ್ರಾಪ್ತನನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next