Advertisement

Rajasthan ‘ಕನ್ಹಯ್ಯ ಜಗಳ’:ಬಿಜೆಪಿಗರಿಗೆ ನಂಟು ಇದೆ: ಗೆಹ್ಲೋಟ್‌ ಆರೋಪ

11:31 PM Nov 13, 2023 | Vishnudas Patil |

ಜೋಧಪುರ: ಉದಯ್‌ಪುರದ ಟೈಲರ್‌ ಕನ್ಹಯ್ಯ ಲಾಲ್‌ ಹತ್ಯೆಯ ಆರೋಪಿಗಳಿಗೆ ಬಿಜೆಪಿ ನಂಟಿದೆ ಎಂದು ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌ ಆರೋಪಿಸಿದ್ದಾರೆ.

Advertisement

ನ.25ರಂದು ಚುನಾವಣೆ ಹಿನ್ನೆಲೆಯಲ್ಲಿ ಕನ್ಹಯ್ಯ ಲಾಲ್‌ ಹತ್ಯೆ ವಿಚಾರ ಪುನಃ ಮುನ್ನೆಲೆಗೆ ಬಂದಿದೆ. ಹೀಗಾಗಿ, ಈ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

ಜೋಧ್‌ಪುರದಲ್ಲಿ ಮಾತನಾಡಿದ ಸಿಎಂ ಅಶೋಕ್‌ ಗೆಹ್ಲೋಟ್‌ ” ಟೈಲರ್‌ ಕನ್ಹಯ್ಯ ಲಾಲ್‌ ಹತ್ಯೆ ಮತ್ತು ಬಿಜೆಪಿ ಗರಿಗೆ ನಂಟು ಇದೆ. ಕಳೆದ ವರ್ಷದ ಜೂ. 28 ರಂದು ಹತ್ಯೆ ಘಟನೆ ನಡೆದ ಬಳಿಕ ಎರಡು-ಮೂರು ಗಂಟೆ ಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಆದರೆ ಬೇರೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳನ್ನು ಬಿಜೆಪಿ ನಾಯಕರು ತಮ್ಮ ಪ್ರಭಾವ ಬೀರಿ ಪೊಲೀಸರಿಂದ ಬಿಡಿಸಿದ್ದರು. ಈ ಕಾರಣಕ್ಕಾಗಿ ಯೇ ಈ ಪ್ರಕರಣದಲ್ಲಿ ಬಿಜೆಪಿಯು ರಕ್ಷಣಾತ್ಮಕ ನಡೆಯನ್ನು ಅನುಸರಿಸುತ್ತಿದೆ’ ಎಂದು ಟೀಕಿಸಿದ್ದಾರೆ.

ಈಗ ಮಾಹಿತಿಯೇ ಇಲ್ಲ

ಪ್ರಕರಣವನ್ನು ಎನ್‌ಐಎ ಪ್ರಕರಣವನ್ನು ಕೈಗೆತ್ತಿಕೊಂಡಿತು. ಅದರೆ ಅನಂತರ‌ ತನಿಖೆಯ ಪ್ರಗತಿ ಎಲ್ಲಿಗೆ ಬಂತು ಎಂಬುದು ತಿಳಿಯ ಲಿಲ್ಲ. ಈ ಪ್ರಕರಣದಲ್ಲಿ ಎನ್‌ಐಎ ಕಾಲಹರಣ ಮಾಡುತ್ತಿದೆ’ ಎಂದು ದೂರಿದ್ದಾರೆ. ಇಸ್ಲಾಮ್‌ ನಿಂದಿಸಿದ ಆರೋಪದಲ್ಲಿ ಇಬ್ಬರು ಕನ್ಹಯ್ಯ ಲಾಲ್‌ ಅವರ ಶಿರಚ್ಛೇದ ಮಾಡಿದ್ದರು.

Advertisement

ಸುಳ್ಳಿನ ಕಂತೆ: ಮುಖ್ಯಮಂತ್ರಿ ಆರೋಪಕ್ಕೆ ತಿರು ಗೇಟು ನೀಡಿದ ಪಶ್ಚಿಮ ರಾಜಸ್ಥಾನ ಬಿಜೆಪಿ ಉಸ್ತು ವಾರಿ ರಾಜೇಂದ್ರ ಗೆಹ್ಲೋಟ್‌, “ಆರೋಪಿಗಳನ್ನು ಮೊದಲೇ ಪೊಲೀಸರು ಬಂಧಿಸಿದ್ದರೆ, ಅವರನ್ನು ಏಕೆ ಬಿಟ್ಟು ಕಳುಹಿಸಿದರು. ಇದು ರಾಜಸ್ಥಾನ ಸರ ಕಾ ರದ ವೈಫ‌ಲ್ಯ. ರಾಜ್ಯ ಸರ ಕಾ ರಕ್ಕೆ ಮೊದಲೇ ಮಾಹಿತಿ ಇತ್ತು ಹಾಗೂ ಪೊಲೀಸರಿಗೂ ಬೆದರಿಕೆಗಳ ಸಂಬಂಧ ದೂರುಗಳನ್ನು ನೀಡಲಾಗಿತ್ತು. ಆದರೂ ಇಂಥ ಘೋರ ಅಪರಾಧ ನಡೆಯಲು ಬಿಟ್ಟರು’ ಎಂದು ದೂರಿದ್ದಾರೆ.

ಕೆಲವು ದಿನಗಳ ಹಿಂದೆ ನಡೆದ ರ್ಯಾಲಿಯಲ್ಲಿ ಹತ್ಯೆ ವಿಚಾರ ಪ್ರಸ್ತಾವಿಸಿದ್ದ ಪ್ರಧಾನಿ “ಕಾಂಗ್ರೆಸ್‌ಗೆ ಅಪರಾಧಿಗಳ ಬಗ್ಗೆ ಹಾಗೂ ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಇದೆ’ ಎಂದು ಟೀಕಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next