Advertisement

Rajasthan;Voting ಹೆಚ್ಚಳವೇ ಬದಲಾವಣೆಯ ಸೂಚನೆ: ರಾಜ್ಯವರ್ಧನ್ ರಾಥೋಡ್

03:39 PM Dec 01, 2023 | Team Udayavani |

ಜೈಪುರ(ರಾಜಸ್ಥಾನ): ‘ಈ ಬಾರಿ ರಾಜಸ್ಥಾನದ ಮತದಾರರಲ್ಲಿ ಬದಲಾವಣೆಯನ್ನು ತರಲು ಉತ್ಸಾಹವಿದ್ದ ಕಾರಣ ಮತದಾನದಲ್ಲಿ ಶೇಕಡಾವಾರು ಹೆಚ್ಚಳವಾಗಿದೆ’ ಎಂದು ಕೇಂದ್ರ ಸಚಿವ ರಾಜ್ಯವರ್ಧನ್ ರಾಥೋಡ್ ಗುರುವಾರ ಹೇಳಿಕೆ ನೀಡಿದ್ದಾರೆ.

Advertisement

ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್‌ಗಳ ಕುರಿತು ಪ್ರತಿಕ್ರಿಯಿಸಿ, ”ಕಾಂಗ್ರೆಸ್‌ನ ಕೆಟ್ಟ ಆಡಳಿತದಿಂದಾಗಿ ಈ ಬಾರಿ ಮತದಾರರು ಮೌನವಾಗಿದ್ದರು.ಅವರು ಯಾರಿಗೆ ಮತ ಹಾಕಿದ್ದಾರೆನ್ನುವುದನ್ನು ಅವರ ನೆರೆಹೊರೆಯವರೊಂದಿಗೆ ಹಂಚಿಕೊಳ್ಳಲಿಲ್ಲ. ಇಂತಹ ಎಕ್ಸಿಟ್ ಪೋಲ್‌ಗಳು ಎಷ್ಟು ನಿಖರವಾಗಿರಬಹುದು ಎಂದು ನಾವು ಊಹಿಸಬಹುದು. ಪರಿಸ್ಥಿತಿ ಮತದಾನದ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು ಮಾಡಿದ ವಿಶ್ಲೇಷಣೆ ಎಕ್ಸಿಟ್ ಪೋಲ್‌ಗಳಿಗಿಂತ ಹೆಚ್ಚು ನಿಖರವಾಗಿದೆ. ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ” ಎಂದರು.

2013 ರ ಸೆಪ್ಟೆಂಬರ್ ನಲ್ಲಿ ರಾಥೋಡ್ ಭಾರತೀಯ ಸೇನೆಯಿಂದ ನಿವೃತ್ತಿ ಪಡೆದ ನಂತರ ಬಿಜೆಪಿ ಸೇರಿದ್ದರು. 2014 ರ ಲೋಕಸಭಾ ಚುನಾವಣೆಯಲ್ಲಿ ಜೈಪುರ ಗ್ರಾಮಾಂತರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು.ನರೇಂದ್ರ ಮೋದಿ ಸರಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾಗಿದ್ದರು. ಆ ಬಳಿಕ 2017 ರಲ್ಲಿ ಕ್ರೀಡಾ ಸಚಿವರಾಗಿ ನೇಮಕಗೊಂಡಿದ್ದರು. ಮೇ 2018 ರಲ್ಲಿ ಅವರು ಮಾಹಿತಿ ಮತ್ತು ಪ್ರಸಾರಕ್ಕಾಗಿ ರಾಜ್ಯ ಸಚಿವರಾದರು.

53 ರ ಹರೆಯದ ರಾಥೋಡ್ ಈ ವಿಧಾನ ಸಭಾ ಚುನಾವಣೆಯಲ್ಲಿ ಜೋತ್ವಾರಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.  2004 ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದು ದಾಖಲೆ ಬರೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next