Advertisement

ಮತಾಂತರಕ್ಕೆ ನಿಯಮಾವಳಿ

06:45 AM Dec 16, 2017 | Team Udayavani |

ಜೋಧ್‌ಪುರ: ಯಾವುದೇ ಧರ್ಮಕ್ಕೆ ಬದಲಾಗಲು ಬಯಸಿದವರು ತಮ್ಮ ಹೆಸರನ್ನು ನೋಟಿಸ್‌ ಬೋರ್ಡ್‌ನಲ್ಲಿ ಒಂದು ವಾರ ಪ್ರದರ್ಶಿಸಬೇಕು ಎಂದು ರಾಜಸ್ಥಾನ ಹೈಕೋರ್ಟ್‌ ಹೊಸ ನಿಯಮಾವಳಿಯನ್ನು ಹೊರಡಿಸಿದೆ. 

Advertisement

ಲವ್‌ ಜೆಹಾದ್‌ ಪ್ರಕರಣದ ಅರೋಪಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜಸ್ಥಾನ ಹೈಕೋರ್ಟ್‌ ಈ ನಿಯಮಾವಳಿ ಹೊರಡಿಸಿದೆ. ಅನುಮತಿ ನೀಡುವ ಮೊದಲು ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ ಎಂದು ಕೋರ್ಟ್‌ ಹೇಳಿದೆಯಾದರೂ, ಆಕ್ಷೇಪಣೆ ಸಲ್ಲಿಸಲು ಯಾರು ಅರ್ಹರು ಎಂಬುದನ್ನು ನಿಗದಿಪಡಿಸಿಲ್ಲ. ಈ ನೀತಿಗಳಿಗೆ ಬದ್ಧವಾಗದ ಯಾವುದೇ ವಿವಾಹ ಅಥವಾ ಮತಾಂತರವನ್ನು ಕೋರ್ಟ್‌ ರದ್ದುಗೊಳಿಸಬಹುದಾಗಿದೆ. ಬಲವಂತವಾಗಿ ಮತಾಂತರ ತಡೆಯಲು ಕೆಲವು ನಿಯಮಾವಳಿಗಳು ಅಗತ್ಯವಿರುತ್ತವೆ. ಯಾಕೆಂದರೆ ಧರ್ಮವು ನಂಬಿಕೆಯದ್ದಾಗಿದೆ. ಅದು ತಾರ್ಕಿಕವಾದದ್ದಲ್ಲ ಎಂದು ನ್ಯಾಯಮೂರ್ತಿ ಗೋಪಾಲ ಕೃಷ್ಣ ವ್ಯಾಸ ಮತ್ತು ವಿರೇಂದರ್‌ ಕುಮಾರ್‌ ಮಾಥುರ್‌ ಹೇಳಿದ್ದಾರೆ. 

ರಾಜಸ್ಥಾನ ಧಾರ್ಮಿಕ ಸ್ವಾತಂತ್ರ್ಯ ವಿಧೇಯಕ 2006 ಜಾರಿಯಾಗುವ ವರೆಗೆ ಈ ನಿಯಮ ಅನ್ವಯವಾಗುತ್ತದೆ ಎಂದಿದೆ ಹೈಕೋರ್ಟ್‌. ಸದ್ಯ ಈ ವಿಧೇಯಕ ರಾಷ್ಟ್ರಪತಿ ಸಹಿಗಾಗಿ ಕಾಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next