ಜೈಪುರ: ಮಧ್ಯ ವಯಸ್ಕನೊಂದಿಗೆ ಮದುವೆ ಮಾಡಿಕೊಡಲು 7 ವರ್ಷದ ಬಾಲಕಿಯನ್ನು 4.50 ಲಕ್ಷ. ರೂ.ಗೆ ಮಾರಾಟ ಮಾಡಿರುವ ಘಟನೆ ರಾಜಸ್ಥಾನದ ಧೋಲ್ಪುರ್ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.
ರಾಜಸ್ಥಾನದ ಮೇನಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 38 ವರ್ಷದ ಭೂಪಾಲ್ ಸಿಂಗ್ ಎಂಬಾತ ಬಾಲಕಿಯ ತಂದೆಗೆ 4.50 ಲಕ್ಷ ರೂ.ವನ್ನು ಕೊಟ್ಟು ಬಾಲಕಿಯನ್ನು ಖರೀದಿಸಿದ್ದಾನೆ. ಆದಾದ ಬಳಿಕ ಮೇ.21 ರಂದು ಬಾಲಕಿಯನ್ನು ವಿವಾಹವಾಗಿದ್ದಾರೆ.
ಮಧ್ಯ ಪ್ರದೇಶದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಭೂಪಾಲ್ ಸಿಂಗ್ ಕುಟುಂಬದ ಕೆಲ ಸದಸ್ಯರು ಜೈಲು ಶಿಕ್ಷೆ ಅನುಭವಿಸಿದ ಬಳಿಕ ಅವರ ಕುಟುಂಬ ರಾಜಸ್ಥಾನದಲ್ಲಿ ಬಂದು ನೆಲೆಸಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: Love jihad: ವಿವಾಹಿತ ಮಹಿಳೆ ಮೇಲೆ ದೌರ್ಜನ್ಯವೆಸಗಿ, ಮತಾಂತರ ಮಾಡಲು ಯತ್ನಿಸಿದಾತ ಅರೆಸ್ಟ್
ಮಂಗಳವಾರ ಈ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿದೆ. ಉಪ ಪೊಲೀಸ್ ಅಧೀಕ್ಷಕ (ಉನ್ಮಾದ) ದೀಪಕ್ ಖಂಡೇಲ್ವಾಲ್ ಅವರು ಬಾಲಕಿಯನ್ನು ಪತ್ತೆ ಹಚ್ಚಿ, ಆರೋಪಿಯ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ನವ ವಿವಾಹಿತೆಯಂತೆ ಆಕೆಯ ಕೈ ಮೇಲೆ ಮೆಹೆಂದಿಯನ್ನು ಹಾಕಲಾಗಿತ್ತು ಎಂದು ಧೋಲ್ಪುರ್ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ಹೇಳಿದ್ದಾರೆ.
ಬಾಲಕಿಯ ತಂದೆಗೆ 4.50 ಲಕ್ಷ ರೂ.ವನ್ನು ಕೊಟ್ಟು ಬಳಿಕವೇ ಆಕೆಯನ್ನು ಖರೀದಿಸಿದ್ದೇವೆ ಎಂದು ಸಿಂಗ್ ಕುಟುಂಬಸ್ಥರು ಪೊಲೀಸರ ಮುಂದೆ ಹೇಳಿದ್ದಾರೆ.
ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಕೃತ್ಯದಲ್ಲಿ ಯಾರು, ಎಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.