Advertisement
ಈ ಹಿಂದೆ ನ.23ರಂದು ಮತದಾನ ನಿಗದಿಯಾಗಿತ್ತು. ಆದರೆ ಅಂದು ದೇವ ಉತ್ಥಾನ ಏಕಾದಶಿಯ ಶುಭ ದಿನವಾಗಿರುವ ಕಾರಣ ರಾಜ್ಯದಲ್ಲಿ 50 ಸಾವಿರಕ್ಕೂ ಹೆಚ್ಚು ಮದುವೆಗಳು ಜರುಗುತ್ತಿವೆ. ಈ ಹಿನ್ನೆಲೆಯಲ್ಲಿ ಮತದಾನದ ದಿನಾಂಕ ಮುಂದೂಡುವಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸಾಮಾಜಿಕ ಸಂಘಟನೆಗಳು ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು. ಇದನ್ನು ಪರಿಗಣಿಸಿ ರಾಜಸ್ಥಾನದಲ್ಲಿ ಮತದಾನದ ದಿನಾಂಕವನ್ನು ನ.25ಕ್ಕೆ ಮುಂದೂಡಿದೆ. ಇನ್ನೊಂದೆಡೆ, ಈ ಹಿಂದೆ ನಿಗದಿಯಾಗಿರುವಂತೆ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡ, ತೆಲಂಗಾಣ ಮತ್ತು ಮಿಜೋರಾಂ ಒಳಗೊಂಡ ಪಂಚ ರಾಜ್ಯಗಳ ಚುನಾವಣೆಯ ಮತ ಎಣಿಕೆ ಕಾರ್ಯವು ಡಿ.3ರಂದು ನಡೆಯಲಿದೆ.
“ಮತಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್, ಇಸ್ರೇಲ್ ವಿರುದ್ಧ ಹಮಾಸ್ ಉಗ್ರರ ದಾಳಿಯನ್ನು ಸರಿಯಾಗಿ ಖಂಡಿಸಲು ವಿಫಲವಾಗಿದೆ’ ಎಂದು ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ಛತ್ತೀಸಗಡದ ರಾಜಧಾನಿ ರಾಯು³ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇಸ್ರೇಲ್‌ನಲ್ಲಿ ಘನಘೋರ ಉಗ್ರ ದಾಳಿಯಾಗಿದೆ. ಸಣ್ಣ ಮಕ್ಕಳು, ಮಹಿಳೆಯರು ಸೇರಿದಂತೆ ನಾಗರಿಕರ ಮೇಲೆ ಮಾರಣಾಂತಿಕ ದಾಳಿ ನಡೆದಿದೆ. ಆದರೆ ಕಾಂಗ್ರೆಸ್ ಇದನ್ನು ಖಂಡಿಸದೇ, ತುಷ್ಟೀಕರಣ ರಾಜಕೀಯ ಮುಂದುವರಿಸಿದೆ’ ಎಂದು ದೂರಿದ್ದಾರೆ.
Related Articles
ಮಿಜೋರಾಂ ವಿಧಾನಸಭೆ ಸ್ಪೀಕರ್, ಎಂಎನ್‌ಎಫ್ ನಾಯಕ ಲಾಲಿನ್ಲಿಲಿಯಾನೋ ಸೈಲೋ ಅವರು ಬುಧವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದೇ ವೇಳೆ ತಾವು ಬಿಜೆಪಿ ಸೇರ್ಪಡೆಯಾಗುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಮಿಜೋರಾಂ ಅಭಿವೃದ್ಧಿಗಾಗಿ ತಾವು ಈ ನಿರ್ಣಯ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.
Advertisement
ಬಾಕ್ಸ್41 ರ್ಯಾಲಿಗಳಲ್ಲಿ ಕೆಸಿಆರ್ ಭಾಗಿ:
ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಆರ್‌ಎಸ್ ಪಕ್ಷದ 41 ಪ್ರಚಾರ ರ್ಯಾಲಿಗಳಲ್ಲಿ ತೆಲಂಗಾಣ ಮುಖ್ಯಮಂತ್ರಿ, ಬಿಆರ್‌ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್ ಪಾಲ್ಗೊಳ್ಳುತ್ತಿದ್ದಾರೆ. ಅ.15ರಂದು ಸಿದ್ದಿಪೇಟ್ ಜಿಲ್ಲೆಯ ಹುಸ್ನಾಬಾದ್‌ನಲ್ಲಿ ಮೊದಲ ಬಿಆರ್‌ಎಸ್ ಪ್ರಚಾರ ರ್ಯಾಲಿ ಆಯೋಜಿಸಲಾಗಿದೆ. ನಂತರ ಸರಣಿಯಾಗಿ ಒಟ್ಟು 41 ಚುನಾವಣಾ ಸಮಾವೇಶಗಳಲ್ಲಿ ಕೆಸಿಆರ್ ಭಾಷಣ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.