Advertisement

ರಾಜಸ್ಥಾನದಲ್ಲಿ ಎಂಟರ ಬಾಲಕಿಯ ಅಪಹರಣ, ಅತ್ಯಾಚಾರ, ಕೊಲೆ

11:24 AM Dec 13, 2018 | udayavani editorial |

ಜೈಪುರ : ರಾಜಸ್ಥಾನದ ಝಲವಾರ್‌ ಜಿಲ್ಲೆಯ ಗ್ರಾಮವೊಂದರ ಗದ್ದೆಯಲ್ಲಿ ಎಂಟು ವರ್ಷ ಪ್ರಾಯದ ಬಾಲಕಿಯೋರ್ವಳ ಮೃತ ದೇಹ ಪತ್ತೆಯಾಗಿದೆ. ಈಕೆಯನ್ನು ಅಪಹರಿಸಿ, ಅತ್ಯಾಚಾರಗೈದು, ಕುತ್ತಿಗೆ ಬಿಗಿದು ಕೊಂದಿರುವುದನ್ನು ಪೊಲೀಸರು ಶಂಕಿಸಿದ್ದಾರೆ.

Advertisement

ತನ್ನ ಅಜ್ಜನ ಮನೆಯಲ್ಲಿ (ತಾಯಿಯ ತಂದೆ) ವಾಸಿಸಿಕೊಂಡಿದ್ದು ಮೂರನೇ ತರಗತಿಯಲ್ಲಿ ಓದುತ್ತಿದ್ದ ಈ ಬಾಲಕಿ ಕಳೆದ ಮಂಗಳವಾರದಿಂದ ನಾಪತ್ತೆಯಾಗಿದ್ದಳು. ಆಕೆಯ ಶವ ನಿನ್ನೆ ಬುಧವಾರ ಹೊಲವೊಂದರಲ್ಲಿ ಕಂಡು ಬಂತು. ಹುಡುಗಿಯ ಎದೆಯ ಮೇಲೆ ಗೀರಿದ ಗಾಯ ಕಂಡು ಬಂದಿದೆ. ದೇಹದಲ್ಲಿ ಬೇರೆ ಯಾವುದೇ ರೀತಿಯ ಗಾಯಗಳ ಗುರುತು ಕಂಡು ಬಂದಿಲ್ಲ ಎಂದು ಎಸ್‌ಎಚ್‌ಓ ರಾಧಾ ಕಿಶನ್‌ ಹೇಳಿದ್ದಾರೆ. 

ಬಾಲಕಿಯ ಅಪಹರಣ, ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿ ಪೊಲೀಸರು ಸ್ಥಳೀಯ ತರುಣನೋರ್ವನನು ಶಂಕಿಸಿದ್ದಾರೆ. ಬಾಲಕಿಯ ಶವ ಪತ್ತೆಯಾದೊಡನೆಯೇ ಆತ ವಿದ್ಯುತ್‌ ತಂತಿ ಸ್ಪರ್ಶಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಆತನನ್ನು  ಪಾರುಗೊಳಿಸಲಾಗಿದ್ದು  ಆತನೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಪೊಲೀಸರು ಪೋಕ್‌ಸೋ ಕಾಯಿದೆಯಡಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next