ಧಾರವಾಡ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ 9ನೇ ಪದವಿ ಪ್ರದಾನ ಸಮಾರಂಭ ಶನಿವಾರ ಜರುಗಿತು.
ಮುಖ್ಯ ಅತಿಥಿಯಾಗಿದ್ದ ಜೈಪುರ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ(ಐಐಟಿ) ನಿರ್ದೇಶಕ ಡಾ| ಉದಯ ಯರಗಟ್ಟಿ ಅವರು ಕಾಲೇಜಿನ 543 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಕಾಲೇಜಿನ ಏಳು ವಿಭಾಗದಲ್ಲಿ ಪ್ರತಿ ವಿಭಾಗದಲ್ಲಿ ಹೆಚ್ಚಿಗೆ ಅಂಕ ಗಳಿಸಿದ ಮೂರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ರ್‍ಯಾಂಕ್ ವಿತರಿಸಲಾಯಿತು. ಈ ಪೈಕಿ ಅತಿ ಹೆಚ್ಚು ಅಂಕಗಳಿಸಿದ (ಸಿಜಿಪಿಎ 9.70) ಇನ್‌ಫಾರ್ಮೇಶನ್ ಸೈನ್ಸ್ ವಿಭಾಗದ ಶಿರಸಿಯ ರಾಜಶ್ರೀ ಭಟ್‌ಗೆ ಡಾ| ವೀರೇಂದ್ರ ಹೆಗ್ಗಡೆ ಅವರ ಚಿನ್ನದ ಪದಕ ಪ್ರದಾನ ಮಾಡಲಾಯಿತು.
ಚಿನ್ನದ ಬೇಟೆ: ಶಿರಸಿಯ ಮತ್ತಿಗಾರ ಗ್ರಾಮದ ರಾಜಾರಾಮ ಹಾಗೂ ಶ್ರೀಲತಾ ಭಟ್ ದಂಪತಿಗೆ ಇಬ್ಬರು ಮಕ್ಕಳಿದ್ದು, ಈ ಪೈಕಿ ಹಿರಿಯ ಮಗಳೇ ರಾಜಶ್ರೀ. ಪೌರೋಹಿತ್ಯ ಹಾಗೂ ಕೃಷಿಯಲ್ಲಿ ತೊಡಗಿಕೊಂಡಿರುವ ರಾಜಾರಾಮ, ತಾವಂತೂ ಕಲಿಯಲಿಲ್ಲ. ಮಗಳಾದರೂ ಕಲಿಯಲಿ ಎಂಬ ಉದ್ದೇಶದಿಂದ ಮಗಳ ಇಚ್ಛೆಯಂತೆ ಅವಳ ಆಸೆಗೆ ನೀರೆರೆದು ಪ್ರೋತ್ಸಾಹಿಸಿದ್ದಾರೆ. ಅಷ್ಟೇ ಅಲ್ಲದೇ ಮುಂದೆ ಕೂಡ ಅವಳು ಆಸೆ ಪಟ್ಟರೆ ಕಲಿಸಲು ಸಿದ್ಧರಾಗಿದ್ದಾರೆ. ತಾಯಿ ಶ್ರೀಲತಾ ಅವರಿಂದ ಸಂಗೀತದಲ್ಲೂ ಆಸಕ್ತಿ ಹೊಂದಿ ಗಾಯಕಿ ಆಗಿರುವ ರಾಜಶ್ರೀ, ಈಗ ಸಿಕ್ಕಿರುವ ಕೆಲಸ ಮಾಡಲು ಉತ್ಸುಕತೆ ಹೊಂದಿದ್ದು, ಮುಂದೆ ಉನ್ನತ ಶಿಕ್ಷಣ ಪಡೆಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ರ್‍ಯಾಂಕ್ ಪಡೆದವರು: ಕೆಮಿಕಲ್ ವಿಭಾಗದಲ್ಲಿ ತೇಜಸ್ ಶೇಟ್, ನಿಮಿತ ಎನ್, ಟಿ.ಯು. ರಚಿತಾ; ಕಂಪ್ಯೂಟರ ಸೈನ್ಸ್ ವಿಭಾಗದಲ್ಲಿ ಗುಣಾ ಕೆ. ಕಂಬಳಿಮಠ, ಸೌಮ್ಯ ಭಟ್, ಸೌಮ್ಯಾ ದೇಸಾಯಿ; ಸಿವಿಲ್ ವಿಭಾಗದಲ್ಲಿ ವಿಜಯಕುಮಾರ ಅರೀಕಟ್ಟಿ, ಅಲ್ತಾಫ್ ಹುಸೇನಖಾನ್ ಎಚ್.ಎಸ್., ಹರ್ಷಿತಾ ಕೆ.; ಇನ್‌ಫಾರ್ಮೇಶನ್ ಸೈನ್ಸ್ ವಿಭಾಗದ ರಾಜಶ್ರೀ ಭಟ್, ಪ್ರಿಯಾಂಕಾ ಎ., ಅಮೃತಾ ಎಚ್.; ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ವಿನುತಾ ನಾಯ್ಕ, ವಿನಯಗೌಡ ಆರ್., ಸ್ಪೂರ್ತಿ ಎಸ್.; ಇಲೆಕ್ಟ್ರಿಕಲ್ ವಿಭಾಗದಲ್ಲಿ ಶೃತಿ, ಪ್ರತೀಕ್ಷಾ ಹೆಗಡೆ, ಶ್ರೇಯಾ ಪಾಟೀಲ ಹಾಗೂ ಮೆಕ್ಯಾನಿಕಲ್ ವಿಭಾಗದಲ್ಲಿ ಅಕುಂಶ ನಾಯ್ಕ, ಎನ್.ಪ್ರವೀಣ, ಪ್ರಸಾದ ಜಿ. ಅನುಕ್ರಮವಾಗಿ ಆಯಾ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.