Advertisement

ರಾಜಶೇಖರ ಕೋಟಿ ಜನಪರ ಕಾಳಜಿ ಹೊಂದಿದ್ದರು

01:35 PM Dec 18, 2017 | |

ಎಚ್‌.ಡಿ.ಕೋಟೆ: ರಾಜಶೇಖರ ಕೋಟಿ ಅವರು ಪತ್ರಿಕೋದ್ಯಮದಲ್ಲಿ ಕೇವಲ ವ್ಯಕ್ತಿಯಾಗಿರದೆ ಸದಾ ಜನಪರ ಚಟುವಟಿಕೆಗಳ ಮೂಲಕ ಶಕ್ತಿಯೂ ಆಗಿದ್ದರು ಎಂದು ಸಂಸದ ಆರ್‌.ಧ್ರುವನಾರಾಯಣ್‌ ಸ್ಮರಿಸಿದರು.

Advertisement

ತಾಲೂಕು ಪತ್ರಕರ್ತರ ಬಳಗದ ವತಿಯಿಂದ ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ನಡೆದ ರಾಜಶೇಖರ ಕೋಟಿ ಅವರ ಶ್ರದ್ಧಾಂಜಲಿ, ನುಡಿನಮನದಲ್ಲಿ ಕೋಟಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಮೈಸೂರು ಜಿಲ್ಲೆ ಸೇರಿದಂತೆ ನಾಲ್ಕೈದು ಜಿಲ್ಲೆಗಳಲ್ಲಿ ಕೋಟಿ ಅವರು ನಿರಂತರವಾಗಿ ವಿವಿಧ ಸಮಾಜ ಸೇವಾ ಕಾರ್ಯಗಳನ್ನು ಕೈಗೊಂಡಿದ್ದರು. ಬಸ್‌ ತಂಗುದಾಣ, ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ, ಬಡವರಿಗೆ ಸಹಾಯ ಮಾಡುವುದನ್ನೂ ಜೀವನ ತತ್ವವಾಗಿ ರೂಢಿಸಿಕೊಂಡಿದ್ದರು ಎಂದು ಹೇಳಿದರು.

ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಮಾತನಾಡಿ, ಬಹುತೇಕ ಪತ್ರಿಕೆಗಳು ಅಧಿಕಾರಸ್ತರನ್ನು ಓಲೈಸುವುದೇ ಹೆಚ್ಚು. ಆದರೆ, “ಆಂದೋಲನ’ದ ಕೋಟಿ ಅವರು ಅದಕ್ಕೆ ತದ್ವಿರುದ್ಧವಾಗಿದ್ದರು ಎಂದರು. ಪ್ರಗತಿಪರ ಚಿಂತಕ ಬೆಟ್ಟಯ್ಯಕೋಟೆ, ಒಮ್ಮೆ ಮೈಸೂರಿನಲ್ಲಿ ನಡೆದ ದಲಿತ ಐಕ್ಯತಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಕೋಟೆಗೆ ಹಿಂದಿರುಗುತ್ತಿದ್ದ ವೇಳೆ ಲಾರಿ ಅಪಘಾತಕ್ಕೊಳಗಾಗಿ ಹಲವರು ಸಾವಿಗೀಡಾದರು.

ಅವರಿಗೆ ಸರ್ಕಾರ ಪರಿಹಾರ ಕೊಡಲಿಲ್ಲ. ಆದರೆ, ಕೋಟಿ ಅವರು ಪತ್ರಿಕೆ ಮೂಲಕ ಸಹೃಯದರಿಂದ ದೇಣಿಗೆ ಸಂಗ್ರಹಿಸಿ ಸಂತ್ರಸ್ತ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ್ದರು ಎಂದು ಸ್ಮರಿಸಿದರು. ಚಾಮರಾಜನಗರ ಜಿಪಂ ಅಧ್ಯಕ್ಷ ರಾಮಚಂದ್ರ, ವಿಧಾನ ಪರಿಷತ್‌ ಮಾಜಿ ಸದಸ್ಯ ಸಿದ್ದರಾಜು, ವಿಧಾನ ಪರಿಷತ್‌ ಮಾಜಿ ಸದಸ್ಯ ಮಂಜುಕೋಟೆ, ತಾಲೂಕು ಕಸಾಪ ಅಧ್ಯಕ್ಷ ಕನ್ನಡ ಪ್ರಮೋದ್‌,

Advertisement

ಸಾಹಿತಿ ಡಾ.ಎಂ.ಎನ್‌.ರವಿಶಂಕರ್‌, ಜಿಪಂ ಅಧ್ಯಕ್ಷೆ ನಯೀಮಾಸುಲ್ತಾನ್‌, ಜಿಪಂ ಸದಸ್ಯರಾದ ವೆಂಕಟಸ್ವಾಮಿ, ಶ್ರೀಕೃಷ್ಣ, ಎಂ.ಪಿ.ನಾಗರಾಜು, ಜಿಪಂ ಸದಸ್ಯ ಅನಿಲ್‌ ಕುಮಾರ್‌, ಮುಖಂಡರಾದ ಗಿರಿಗೌಡ, ಅಂಕನಾಯಕ, ಶಂಭುಗೌಡ, ಕೆ.ಕೃಷ್ಣ, ನಂದಿನಿ, ಶಿವಪ್ಪ, ಬಾಲಯ್ಯ, ಜವರಯ್ಯ, ದೊಡ್ಡನಾಯಕ, ರಾಜೇಶ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next