Advertisement

ಬಿಕ್ಕುತ್ತಿದೆ ಪ್ರಾಮಾಣಿಕ ಸಂಸದನ ಕುಟುಂಬ

06:38 AM Mar 28, 2019 | Team Udayavani |

ವಿಜಯಪುರ: ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ನಡೆದ ಲೋಕಸಭಾ ಚುನಾವಣೆ ಸೇರಿ ಎರಡು ಬಾರಿ ವಿಜಯಪುರ ಕ್ಷೇತ್ರವನ್ನು ಪ್ರತಿನಿ ಧಿಸಿದ್ದ ಹಿರಿಯ ನಾಯಕನ ಕುಟುಂಬ ಇದೀಗ ಜಿಲ್ಲೆಯ ಮಟ್ಟಿಗೆ ಅಕ್ಷರಶ: ಅನಾಮಧೇಯವಾಗಿದೆ. ನೆಹರೂ,
ಇಂದಿರಾ ಕುಟುಂಬದೊಂದಿಗೆ ಒಡನಾಟ ಹೊಂದಿದ್ದರೂ ಇಂದಿಗೂ ಕುಟುಂಬ ರಾಜಕೀಯದಿಂದ ದೂರ ಇದೆ. ಶುಭ್ರ ರಾಜಕೀಯದ ಬದಟಛಿತೆ ಹೊಂದಿದ್ದ
ಕಾರಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರೂ ಸ್ವಾಭಿಮಾನದಿಂದ ಸ್ವಯಂ ಪರಿಶ್ರಮದ ಬದುಕು ಕಟ್ಟಿಕೊಂಡಿದೆ.

Advertisement

“ರಾಜಾರಾಂ ದುಬೇ’ ರಾಜ್ಯದ ರಾಜಕೀಯದ ಹಳೆ ತಲೆಮಾರಿನ ಜನರಿಗೆ ಚಿರಪರಿಚಿತ ಹೆಸರು. ದೇಶ ಸ್ವಾತಂತ್ರÂಗೊಂಡು ರಾಜ್ಯಾಂಗ ರಚನೆ ಬಳಿಕ1951 ಹಾಗೂ 1962ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ವಿಜಯಪುರ
ಉತ್ತರ ಕ್ಷೇತ್ರವನ್ನು ಪ್ರತಿನಿ ಧಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಕಟ್ಟುವಲ್ಲಿ ಪರಿಶ್ರಮಿಸಿದವರಲ್ಲಿ ರಾಜಾರಾಂ ದುಬೇ ಕೂಡ ಒಬ್ಬರು. ವಿಧಾನ ಪರಿಷತ್‌ ಸದಸ್ಯರಾಗಿದ್ದಾಗಲೇ 1970 ಫೆ.28ರಂದು ಬೆಂಗಳೂರಿನಲ್ಲಿ ರಾಜಾರಾಂ ನಿಧರಾದರು. ಆಗಲೂ ಇವರ ಬ್ಯಾಂಕ್‌ ಬ್ಯಾಲೆನ್ಸ್‌ 100 ರೂ.ಕೂಡ ಇರಲಿಲ್ಲ ಎಂಬುದು ಅವರು ಪ್ರಾಮಾಣಿಕ ರಾಜಕೀಯ ಮಾಡಿದ್ದಕ್ಕೆ ಸಾಕ್ಷಿಯಾಗಿತ್ತು.

ವಿವಾಹಕ್ಕೆ ನೆಹರೂ ಬಂದಿದ್ದರು: ದುಬೇ ಅವರು ಸಂಸದರಾದ ಬಳಿಕ ರಾಜಾರಾಂ-ನಿರ್ಮಲಾ ಅವರ ವಿವಾಹಕ್ಕೆ ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರೂ ವಿಜಯಪುರಕ್ಕೆ ಬಂದಿದ್ದರು. ದಂಪತಿಗೆ ಅಶೋಕ ಹಾಗೂ ಅನಿಲ ಎಂಬ ಇಬ್ಬರು ಮಕ್ಕಳುಜನಿಸಿದರೂ ಅವರನ್ನು ರಾಜಕೀಯಕ್ಕೆ ತರಲಿಲ್ಲ.  ಸ್ವಾಭಿಮಾನಿ ನಿರ್ಮಲಾ: 2011 ಏ.2ರಂದು ರಾಜಾರಾಂ ಎರಡನೇ ಪುತ್ರ ಅನಿಲ ಮೃತಪಟ್ಟಾಗ ಈ
ಕುಟುಂಬ ಅತ್ಯಂತ ಆರ್ಥಿಕ ದು:ಸ್ಥಿತಿಯಲ್ಲಿತ್ತು. ಇದನ್ನು ಗಮನಿಸಿದ “ಉದಯವಾಣಿ’ ವಿಶೇಷ ವರದಿ ಪ್ರಕಟಿಸಿದಾಗ ಈಗ ಸಚಿವರಾಗಿರುವ ಶಿವಾನಂದ ಪಾಟೀಲ, ಶಾಸಕರಾಗಿರುವ ಬಸನಗೌಡ ಪಾಟೀಲ ಯತ್ನಾಳ್‌ ಅವರು ದುಬೇ ಅವರ ಮನೆಗೆ
ಧಾವಿಸಿ ಆರ್ಥಿಕ ಸಹಾಯಕ್ಕೆ ಮುಂದಾದರು.ಆದರೆ, ದು ಬೇ ಪತ್ನಿ ನಯವಾಗಿಯೇ
ಸಹಾಯವನ್ನು ನಿರಾಕರಿಸಿದರು. ಬದಲಾಗಿ ಮಾಜಿ ಸಂಸದರ ಕುಟುಂಬಕ್ಕೆ ಸರ್ಕಾರದಿಂದ ಬರಬೇಕಿರುವ ಸೌಲಭ್ಯಗಳನ್ನು ಕೊಡಿಸಿದರೆ ಸಾಕು ಎಂದರು.

ದಂಡದ ಹಣ ಕಟ್ಟಲಾಗದೆ ಜೈಲಲ್ಲೇ ಇದ್ದ ದುಬೇ ಸ್ವಾತಂತ್ರ್ಯ ಪ್ರೇಮಿ ಗಿರಿಧರಲಾಲ್‌ ಹಾಗೂ ಭಾಗೋಬಾಯಿ ಕುಟುಂಬದ ಮೂಲ ಉತ್ತರ  ಪ್ರದೇಶದ ಉನ್ನಾವ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುಟ್ಟೂರು ತೊರೆದು ಭೂಗತರಾಗಿ ವಿಜಯ
ಪುರಕ್ಕೆ ಬಂದರು. ಸ್ವಾತಂತ್ರ್ಯದ ಹಾದಿಯಲ್ಲೇ ತಂದೆ ಇಹಲೋಕ ತ್ಯಜಿಸಿದಾಗ ಚಿಕ್ಕವರಾದ ರಾಜಾ ರಾಂ ಶಾಲೆಯಿಂದಲೇ ಓಡಿ ಹೋಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡ ಕಾರಣ ಹಲವು ಬಾರಿ
ವಿವಿಧ ಜೈಲುಗಳಲ್ಲಿ ಸೆರೆವಾಸ ಅನುಭವಿ ಸಿದರು. ಹಲವು ಸಂದರ್ಭಗಳಲ್ಲಿ ಕೇವಲ 100, 200 ರೂ.ದಂಡ ಪಾವತಿಸದ ಕಾರಣಕ್ಕೆ ವರ್ಷಗಟ್ಟಲೇ ಜೈಲು ಅನುಭವಿಸಿದ್ದೂ ಇದೆ. 1932ರಲ್ಲಿ ಧಾರವಾಡ, 1941ರಲ್ಲಿ ವಿಜಯಪುರ, ಯರವಾಡ, 1942ರಲ್ಲಿ ಬೆಂಗಳೂರು ಹಾಗೂ ಬೆಳಗಾವಿ… ಹೀಗೆ ಹಲವು ಜೈಲುಗಳಲ್ಲಿ ಸೆರೆವಾಸ ಅನುಭವಿಸಿದರು. ದುಬೇ ಕುಟುಂಬದ ದೂರ ಸಂಬಂ ಧಿಗಳಲ್ಲಿ ಹಲವರು ಬ್ರಿಟಿಷ್‌ ಸರ್ಕಾರದಲ್ಲಿ ಅಧಿ ಕಾರಿಗಳಾಗಿದ್ದರು. ಇವರ ಮೂಲಕ ಬ್ರಿಟಿಷ್‌ಅಧಿಕಾರಿಗಳು ತಪ್ಪೊಪ್ಪಿಕೊಂಡರೆ ಶಿಕ್ಷೆ ಕಡಿತ ಮಾಡುವುದಾಗಿ ಹೇಳಿದರು. ಆದರೆ, ಅವರ
ತಾಯಿ ಭಾಗೋ ದೇವಿ, ಕ್ಷಮಾಪಣೆ ಕೋರಬೇಡ ಮಗನೇ ಎಂದು ಕಟ್ಟಾಜ್ಞೆ ಮಾಡಿದ್ದರು.

ಹಾಲಿ-ಮಾಜಿ ಶಾಸಕರಿಗೆ ಬೆಂಗಳೂರಿನಲ್ಲಿ ನಿವೇಶನ ನೀಡುವುದಾಗಿ ಧರ್ಮಸಿಂಗ್‌ ಅವರು ಸಿಎಂ ಆಗಿದ್ದಾಗ ಭರವಸೆ ನೀಡಿದ್ದರು. ಆದರೆ ನಿವೇಶನ ಕೊಡಲಿಲ್ಲ. ಸಿದ್ದರಾಮಯ್ಯ ಸಿಎಂ ಆದಾಗ ಎರಡು ಬಾರಿ ಪತ್ರ ಬರೆದರೂ ಸ್ಪಂದಿಸಲಿಲ್ಲ.
ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಭರವಸೆ ನೀಡಿದ್ದರೂ ಈಡೇರಿಲ್ಲ. ಸರ್ಕಾರದ ಬರುವ ಸೌಲಭ್ಯ ಕೊಟ್ಟರೆ ಸಾಕು.

Advertisement

● ಮಿಥಿಲೇಶ್ವರಿ ಅನಿಲ ದುಬೇ, ರಾಜಾರಾಂ
ದುಬೇ ಸೊಸೆ

ರಾಜ್ಯ ಸರ್ಕಾರ ನೀಡುವ ಹಣದಲ್ಲೇ ಮೊಮ್ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದ್ದು, ಉತ್ತಮ ಹುದ್ದೆಯಲ್ಲಿರುವ ಅವರ ದುಡಿಮೆಯಲ್ಲೇ ನಮ್ಮ ಕುಟುಂಬ ನೆಮ್ಮದಿಯ ಜೀವನ ನಡೆಸುತ್ತಿದೆ. ಈ ಕಷ್ಟ-ಸುಖಕ್ಕೆಲ್ಲ ನಾವೇ ಹೊಣೆಗಾರರು, ಇದಕ್ಕೆ ನಾವು ಯಾರನ್ನೂ
ದೂರುವುದಿಲ್ಲ.
● ನಿರ್ಮಲಾ ರಾಜಾರಾಂ ದುಬೇ, -ಮಾಜಿ ಸಂಸದನ ಪತ್ನಿ.

Advertisement

Udayavani is now on Telegram. Click here to join our channel and stay updated with the latest news.

Next