Advertisement

ರಾಜರಾಜೇಶ್ವರಿನಗರ ಕ್ಷೇತ್ರ: 9,564 ಮತದಾರರಿಗೆ ಹೊಸ ಗುರುತಿನ ಚೀಟಿ

06:50 AM May 15, 2018 | |

ಬೆಂಗಳೂರು: “ಅಸಲಿ ಓಟರ್‌ ಐಡಿ ಪತ್ತೆ ಪ್ರಕರಣದ’ ಹಿನ್ನೆಲೆಯಲ್ಲಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ 9,564 ಮತದಾರರಿಗೆ ಹೊಸದಾಗಿ ಚುನಾವಣಾ ಗುರುತಿನ ಚೀಟಿ (ಎಪಿಕ್‌ ಕಾರ್ಡ್‌) ವಿತರಿಸಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌ ತಿಳಿಸಿದ್ದಾರೆ.

Advertisement

ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮೇ 21ರೊಳಗೆ ಎಲ್ಲ 9,564 ಮತದಾರರಿಗೆ ಎಪಿಕ್‌ ಕಾರ್ಡ್‌ಗಳನ್ನು ವಿತರಿಸುವಂತೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ. 

ಅದರಂತೆ ಬಿಬಿಎಂಪಿ ಆಯುಕ್ತ ಮಹೇಶ್ವರರಾವ್‌ ನೇತೃತ್ವದ ತಂಡ ಕಾರ್ಯಪ್ರವೃತ್ತವಾಗಿದೆ. ಎಪಿಕ್‌ ಕಾರ್ಡ್‌ 
ಹಂಚಲು 1,000 ಸಿಬಂದಿಯನ್ನು ನಿಯೋಜಿಸಲಾಗಿದೆ ಎಂದರು. ಚುನಾವಣಾ ಆಯೋಗದ ಪರಿಷ್ಕೃತ ದಿನಾಂಕದಂತೆ ಮೇ 28ಕ್ಕೆ ರಾಜರಾಜೇಶ್ವರಿ ನಗರದಲ್ಲಿ ಮತದಾನ ನಡೆಸಬೇಕಿದೆ. ಆದರೆ, ಜಾಲಹಳ್ಳಿಯ ಆಪಾರ್ಟ್‌ಮೆಂಟ್‌
ವೊಂದರಲ್ಲಿ ವಶಪಡಿಸಿಕೊಳ್ಳಲಾದ ಎಲ್ಲ 9,564 ಎಪಿಕ್‌ ಕಾರ್ಡ್‌ಗಳು ಪೊಲೀಸರ ವಶದಲ್ಲಿವೆ. ಕ್ರಿಮಿನಲ್‌ ಪ್ರಕರಣ ಆಗಿರುವುದರಿಂದ ಎಪಿಕ್‌ ಕಾರ್ಡ್‌ಗಳನ್ನು ಪೊಲೀಸರು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೆ ಅವುಗಳು ನಮಗೆ ಸಿಗುವುದಿಲ್ಲ. ಹಾಗಾಗಿ, ಮತದಾನಕ್ಕೆ ಅವಕಾಶ ನೀಡುವ ಉದ್ದೇಶದಿಂದ ಹೊಸ  ಕಾರ್ಡ್‌ಗಳನ್ನು ವಿತರಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next