Advertisement
ಮುಖ್ಯ ಅತಿಥಿಯಾಗಿ ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ ಹಾಗೂ ಮಂಗಳೂರು ಸಾರಸ್ವತಿ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಸತೀಶ್ ಚಂದ್ರ ಆಗಮಿಸಿದ್ದರು.ವೇದಿಕೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ಗುಂಡು ನಾಯಕ್ ಉಪಸ್ಥಿತ ರಿದ್ದರು.
Related Articles
ಕೊಡಬಹುದು, ಸಮಾಜದ ಮಕ್ಕಳ ಶಿಕ್ಷಣಕ್ಕೆ ಸಹಕಾರ ನಿಡುವ ಮೂಲಕ ನಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕೆ ಸಹಕರಿಸೋಣ, ಸಂಘದ ಸ್ವಂತ ಕಟ್ಟಡ ಬೇಗನೆ ಆಗುವಂತಹ ಕಾರ್ಯ ನಮ್ಮಿಂದಾಗಬೇಕು ಎಂದರು.
Advertisement
ಹೆಂಗಸರು ಮಕ್ಕಳು ಕೂಡಾ ಮನೆಯ ಜವಾಬ್ದಾರಿಯೊಂದಿಗೆ ಸಂಘಕ್ಕೆ ಕೂಡ ಮಹತ್ವವನ್ನು ನೀಡಬೇಕು ಎಂದರು. ಮುಂಬರುವ 25ನೇ ವರ್ಷದ ಅಚರಣೆಗೆ ಈಗಿಂದಲೇ ನಾವು ಕಾರ್ಯಯೋಜನೆಗಳನ್ನು ರೂಪಿಸಿ ತಯಾರಾಗೋಣ ನಮ್ಮ ಸಮಾಜ ಬಾಂಧವರ ಸದಸ್ಯ ನೋಂದಣಿ ಯನ್ನು ಇನ್ನೂ ಹೆಚ್ಚಿಸುವ ಯೋಜನೆ ಸಂಘಕ್ಕೆ ಇದೆ. ಮುಂದಿನ ದಿನಗಳಲ್ಲಿ ಸಂಘದ ಸೇವಾ ಕಾರ್ಯಗಳಲ್ಲಿ ನಾವೆಲ್ಲರೂ ಭಾಗಿಗಳಾಗಿ ಸಂಘವನ್ನು ಮಾದರಿ ಸಂಸ್ಥೆಯನ್ನಾಗಿ ಮಾಡೋಣ ಎಂದು ಕರೆ ನೀಡುತ್ತಾ, ಸಂಘದ ವತಿಯಿಂದ ಜರಗಿದ ಶಿಕ್ಷಣ, ಕ್ರೀಡಾ ಕಲಾ ಕಾರ್ಯಗಳಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಮುಖ್ಯ ಅತಿಥಿ ಸತೀಶ್ ಚಂದ್ರ ಅವರು ಮಾತನಾಡಿ, ಪುಣೆಯಂತಹ ನಗರದಲ್ಲಿ ಸಂಘವನ್ನು ಕಟ್ಟಿ ಬೆಳೆಸಿದ ಸಮಾಜದ ಗಣ್ಯರಿಗೆ ಅಭಿನಂದನೆಗಳು. ಪುಣೆಯಲ್ಲಿ ನೆಲೆಸಿರುವ ಸರ್ವ ರಾಜಾಪುರ ಸಾರಸ್ವತ ಸಮಾಜ ಬಾಂಧವರು ಜೊತೆಗೂಡಿ ಸಂಘದ ವಿವಿಧ ರೀತಿಯ ಸಮಾಜ ಸೇವಾ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಗಳಾಗಿ ಉತ್ತಮ ಸಂಘವನ್ನು ಕಟ್ಟಿದ್ದೀರಿ. ಇಂತಹ ಕಾರ್ಯಗಳು ನಮ್ಮ ಎಲ್ಲಾ ರಾಜಾಪುರ ಸಾರಸ್ವತ ಸಂಘಗಳು ಮಾಡಬೇಕು. ಸಂಘಟನೆಯಿಂದ ಸಂಘದ ಬೆಳವಣಿಗೆ ಸಾಧ್ಯ. ನಮ್ಮ ಸಂಘ ಎಂಬ ಅಭಿಮಾನ ಗೌರವ ನಮ್ಮಲ್ಲಿ ಮೂಡಿಬರಬೇಕು. ಸಮಾಜದ ಮಕ್ಕಳ ಶಿಕ್ಷಣಕ್ಕೆ ಸಹಕಾರ ಹಾಗೂ ಬೇರೆ ಬೇರೆ ಸಮಾಜ ಪರ ಕಾರ್ಯಗಳನ್ನು ಸಂಘವು ಬದ್ಧವಾಗಿ ಕಾರ್ಯಗತ ಗೊಳಿಸಬೇಕು ಎಂದು ಹೇಳಿದರು. ಸುನಿಲ್ ಬೋರ್ಕರ್ ಪುತ್ತೂರು ಅವರು ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ಸಂಘವು ಯಾವ ರೀತಿಯಲ್ಲಿ ಕಾರ್ಯ ವೆಸಗವಾಗಬೇಕು ಎಂಬ ಬಗ್ಗೆ ಸಭೆಗೆತಿಳಿಸಿದರು. ಅತಿಥಿ ಗಣ್ಯರನ್ನು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಮ್ಮಾನಿಸಿದರು.
ಮಹಿಳಾ ವಿಭಾಗದ ಪ್ರಮುಖ ರಾದ ಪ್ರತಿಮಾ ನಾಯಕ್ ,ಸಹನಾ ನಾಯಕ್ ಮತ್ತು ಉರ್ಮಿಳಾ ಪಾಟ್ಕರ್ ಮುಂದಾಳತ್ವದಲ್ಲಿ ಹಾಗೂ ಮಹಿಳಾ ವಿಭಾಗದವರ ಸಹಕಾರದೊಂದಿಗೆ ಅರಶಿನ ಕುಂಕುಮ ಕಾರ್ಯಕ್ರಮ ಜರಗಿತು. ಹೆಚ್ಚಿನ ಸಂಖ್ಯೆಯ ಸಮಾಜ ಬಾಂಧವರು ಮಹಿಳೆಯರು,ಮಕ್ಕಳು ಈ ಸಭೆಯಲ್ಲಿ ಪಾಲ್ಗೊಂಡರು.
ಕೆ .ಸಿ. ಪ್ರಭು ಅವರು ಧನ್ಯವಾದ ಗೈದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು. ಚಿತ್ರ-ವರದಿ: ಹರೀಶ್ ಮೂಡಬಿದ್ರಿ