Advertisement

ಕಾರವಾರದ ನೌಕಾ ನೆಲೆಗೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

04:38 PM Jun 24, 2021 | Team Udayavani |

ಕಾರವಾರ: ನೌಕಾನೆಲೆಯ ಪ್ರಾಜೆಕ್ಟ್ ಸೀಬರ್ಡ್ ಎರಡನೇ ಹಂತದ ಪ್ರಗತಿಯನ್ನು ಹಾಗೂ ಕದಂಬ ನೌಕಾನೆಲೆಯ ಮೂಲಸೌಕರ್ಯ ಅಭಿವೃದ್ಧಿಯನ್ನು ದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಮಧ್ಯಾಹ್ನ ವೀಕ್ಷಿಸಿದರು. ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಸಹ ರಕ್ಷಣಾ ಸಚಿವರ ಜೊತೆಗೆ ಇದ್ದರು.‌

Advertisement

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಐಎನ್‌ಎಸ್ ಕದಂಬ ಹೆಲಿ ಪ್ಯಾಡ್‌ಗೆ ಬರುವ ಮೊದಲು ಪ್ರಾಜೆಕ್ಟ್ ಏರಿಯಾ ಮತ್ತು ಸೈಟ್‌ಗಳ ವೈಮಾನಿಕ ಸಮೀಕ್ಷೆಯನ್ನು ಕೈಗೊಂಡರು. ಸಚಿವರನ್ನು ವೆಸ್ಟರ್ನ್ ನೇವಲ್ ಕಮಾಂಡ್ ಫ್ಲಾಗ್ ಆಫೀಸರ್ ಕಮಾಂಡಿಂಗ್ ವೈಸ್ ಅಡ್ಮಿರಲ್ ಆರ್ . ಹರಿಕುಮಾರ್ ಮತ್ತು ಕರ್ನಾಟಕ ನೌಕಾ ಪ್ರದೇಶದ ಫ್ಲಾಗ್ ಆಫೀಸರ್ ರಿಯಲ್ ಅಡ್ಮಿರಲ್ ಮಹೇಶ್ ಸಿಂಗ್ ಅವರು ಸ್ವಾಗತಿಸಿದರು.

ಇದನ್ನೂ ಓದಿ:ಟೆಸ್ಟ್ ಚಾಂಪಿಯನ್ ಶಿಪ್ ಗೆ ಮೂರು ಪಂದ್ಯಗಳ ಫೈನಲ್ ಬೇಕಿತ್ತು: ಸೋಲಿನ ಬಳಿಕ ವಿರಾಟ್

ನೌಕಾ ನೆಲೆಯ ಶಿಪ್ ಲಿಫ್ಟ್  ಟವರ್‌ನಲ್ಲಿ ಸಾಮರ್ಥ್ಯ ಪ್ರದರ್ಶನ ಸೇರಿದಂತೆ ಆನ್-ಸೈಟ್ ಬ್ರೀಫಿಂಗ್‌ಗಳನ್ನು ರಕ್ಷಣಾ ಸಚಿವರಿಗೆ ವಿವರಿಸಲಾಯಿತು‌ .  ಪ್ರಾಜೆಕ್ಟ್ ಸೀಬರ್ಡ್ ಎರಡನೇ ಹಂತದ ಭಾಗವಾಗಿ ಯುದ್ಧನೌಕಾ ಸಾಗರ ಕಾರ್ಯಗಳು ಹಾಗೂ ಮೂಲಸೌಕರ್ಯಗಳ ಮೌಲ್ಯಮಾಪನಕ್ಕಾಗಿ ನೌಕಾ ಬಂದರಿನ ಪ್ರವಾಸವನ್ನು ಸಹ ಮಾಡಲಾಯಿತು.

Advertisement

ಯುದ್ಧನೌಕಾ ಕಾರ್ಯಾಚರಣೆಯನ್ನೂ ಪ್ರದರ್ಶಿಸಲಾಯಿತು. ಹೊಸದಾಗಿ ನಿರ್ಮಿಸಿದ ನಾವಿಕರ ವಸತಿಗೃಹಕ್ಕೆ ರಕ್ಷಣಾ ಸಚಿವರು ಭೇಟಿ ನೀಡಿದರು. ನೀರಿನ ಸದ್ಬಳಕೆ , ತ್ಯಾಜ್ಯ ನಿರ್ವಹಣೆ, ಇಂಧನ ದಕ್ಷತೆ ಮತ್ತು ಪರಿಸರ ಸ್ನೇಹಿ ಮನೆಗಳನ್ನು ಒದಗಿಸುವ ಸುಧಾರಿತ ವೈಶಿಷ್ಟ್ಯಗಳನ್ನು ಸಚಿವರು ವೀಕ್ಷಿಸಿದರು.

ರಕ್ಷಣಾ‌ ಸಚಿವರು ಆರ್ .ಎಂ.‌ ಪ್ರಾಜೆಕ್ಟ್ ಸೀಬರ್ಡ್ ಸಂಪರ್ಕ ಅಧಿಕಾರಿಗಳು, ಎಂಜಿನಿಯರ್‌ಗಳು ಮತ್ತು ಅಧಿಕಾರಿಗಳು, ನಾವಿಕರು ಮತ್ತು ಕಾರವಾರದ ನೌಕಾ ನೆಲೆಯ ನಾಗರಿಕರೊಂದಿಗೆ ಮಾತುಕತೆ ನಡೆಸಿದರು. ಶಾಸಕಿ ರೂಪಾಲಿ ನಾಯ್ಕ‌, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next