Advertisement

ಮಾತಿನ ಭಾಗದ ಚಿತ್ರೀಕರಣ ಮುಗಿಸಿದ “ರಾಜಲಕ್ಷ್ಮೀ’

09:28 AM May 06, 2019 | Team Udayavani |

ಮೋಹನ್‌ ಕುಮಾರ್‌ ಎಸ್‌.ಕೆ ಅವರು ನಿರ್ಮಿಸುತ್ತಿರುವ “ರಾಜಲಕ್ಷ್ಮೀ’ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯವಾಗಿದೆ. ಮಂಡ್ಯ, ಮೈಸೂರು, ಬೆಂಗಳೂರು ಸುತ್ತಮುತ್ತ ಸುಮಾರು 25ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರದ ಮಾತಿನ ಭಾಗದ ಚಿತ್ರೀಕರಣ ನಡೆಸಲಾಗಿದ್ದು, ಸದ್ಯ ಬಾಕಿ ಇರುವ ಚಿತ್ರದ ಹಾಡುಗಳ ಚಿತ್ರೀಕರಣ ಶೀಘ್ರದಲ್ಲಿಯೇ ಆರಂಭಿಸಲು ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ.

Advertisement

ಶ್ರೀಕಾಂತ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ನಾಗರಾಜ ಮೂರ್ತಿ ಛಾಯಾಗ್ರಹಣ, ಕಿರಣ್‌-ಅರ್ಜುನ್‌ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಎ.ಟಿ.ರವೀಶ್‌ ಸಂಗೀತ ಸಂಯೋಜಿಸುತ್ತಿದ್ದು, ಕಾಂತರಾಜ್‌ ಹಾಡುಗಳಿಗೆ ಸಾಹಿತ್ಯ ಒದಗಸಿದ್ದಾರೆ.

ನವೀನ್‌ ಕನ್ನಡಿಗ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ಮಾಗಡಿ ಯತೀಶ್‌ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಹೊನ್ನವಳ್ಳಿ ಕೃಷ್ಣ, ಟೆನ್ನಿಸ್‌ ಕೃಷ್ಣ, ನವೀನ್‌ ತೀರ್ಥಹಳ್ಳಿ, ರಶ್ಮಿಗೌಡ, ಶಶಿ, ಸೀತಾರಾಂ, ಮುತ್ತುರಾಜ್‌, ಸದಾನಂದ್‌ ಮುಂತಾದವರು “ರಾಜಲಕ್ಷ್ಮೀ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ರಾಮರಾಜ್ಯದ ಥರಹ ಇದ್ದ ಊರೊಂದು ಕಾರಾಣಾಂತರದಿಂದ ರಾವಣ ರಾಜ್ಯವಾಗುತದೆ. ಮತ್ತೆ ಆ ಊರು ರಾಮರಾಜ್ಯ ಹೇಗೆ ಆಗುತ್ತದೆ ಎಂಬ ಕಥಾಹಂದರದ ಜೊತೆಗೆ ಈ ಚಿತ್ರದಲ್ಲಿ ಲವ್‌ ಸ್ಟೋರಿ ಕೂಡ ಇರಲಿದೆ ಎನ್ನುತ್ತಾರೆ “ರಾಜಲಕ್ಷ್ಮೀ’ ಚಿತ್ರದ ನಿರ್ದೇಶಕರು. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳು ಹಾಗೂ ನಾಲ್ಕು ಸಾಹಸ ಸನ್ನಿವೇಶಗಳಿದ್ದು, ಜೊತೆಗೆ ಕಾಮಿಡಿ, ಸೆಂಟಿಮೆಂಟ್‌ ಅಂಶಗಳೂ ಚಿತ್ರದಲ್ಲಿವೆ ಎನ್ನುತ್ತದೆ ಚಿತ್ರತಂಡ.

Advertisement

Udayavani is now on Telegram. Click here to join our channel and stay updated with the latest news.

Next