ಚನ್ನರಾಯಪಟ್ಟಣ: ಪಟ್ಟಣದ ಉದಯಗಿರಿ ಬಡಾವಣೆಯಲ್ಲಿ ಪ್ರಭಾವಿಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡು ತಮ್ಮ ನಿವೇಶನದೊಂದಿಗೆ ತಡೆ ಗೋಡೆ ನಿರ್ಮಾಣ ಮಾಡಿಕೊಂಡು ತೊಂದರೆನೀಡುತ್ತಿದ್ದಾರೆ ಎಂದು ನಿವೃತ್ತ ಎಂಜಿನಿಯರ್ ದೇವರಾಜು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಎರಡು ವರ್ಷದ ಹಿಂದೆ ಬಡಾವಣೆಗೆ ಒಳಚರಂಡಿ ಕಾಮಗಾರಿ ಮಾಡಿಸಲು ಸರ್ಕಾರ 5 ಕೋಟಿ ರೂ.ಅನುದಾನ ನೀಡಿದರೆ, ನಾಲ್ಕು ತಿಂಗಳ ಹಿಂದೆ ಕಾಮಗಾರಿ ಮಾಡಿಸಲು ಶಾಸಕರು, ಪುರಸಭಾಆಡಳಿತ ಮಂಡಳಿ ಪೂಜೆ ನೆರವೇರಿಸಿತು. ಆದರೆ,ಈಗ ಪ್ರಭಾವಿಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಾಮಗಾರಿ ಮಾಡಲು ಬಿಡದೇವಾರ್ಡ್ ನಿವಾಸಿಗಳಿಗೆ ಸಮಸ್ಯೆ ಮಾಡುತ್ತಿದ್ದಾರೆ ಎಂದು ದೂರಿದರು.
ಗ್ರಾಮದ ನಕಾಶೆ, ಬಡಾವಣೆ ಯೋಜನೆಯಲ್ಲಿರಾಜಕಾಲುವೆ ಇದೆ. ಆದರೆ, ಕೆಲ ಹಣವಂತರು,ರಾಜಕೀಯ ಮುಖಂಡರು ಒತ್ತುವರಿ ಮಾಡಿಕೊಂಡಿದ್ದಾರೆ. ಮಳೆನೀರು, ಕೊಳಚೆ ನೀರು ಮುಂದೆಹರಿಯದಂತಾಗಿದೆ. ಈ ಬಗ್ಗೆ ಪುರಸಭೆ, ಕಂದಾಯಇಲಾಖೆ ಗಮನಕ್ಕೆ ತಂದರೂ ತೆರವು ಮಾಡಿಸದೇ,ಮುಖ್ಯಾಧಿಕಾರಿಗಳು, ತಹಶೀಲ್ದಾರ್, ಶಾಸಕರುಮೌನಕ್ಕೆ ಶರಣಾಗಿದ್ದಾರೆ. ಇದರಿಂದ ಒಳಚರಂಡಿಕಾಮಗಾರಿ ಮಾಡುವ ಗುತ್ತಿಗೆದಾರ ಕೆಲಸ ನಿಲ್ಲಿಸಿದ್ದಾರೆ ಎಂದು ತಿಳಿಸಿದರು.
ನೋಟಿಸ್ ಮಾತ್ರ ಜಾರಿ: ಈಗಾಗಲೇ ಸರ್ಕಾರ 4.4 ಕೋಟಿ ರೂ. ಅನುದಾನ ನೀಡಿ ಟೆಂಡರ್ ಕರೆದು ಕಾಮಗಾರಿ ಮಾಡುವ ವೇಳೆ ಈ ರೀತಿ ಅಡ್ಡಿ ಮಾಡುತ್ತಿರುವುದು ಎಷ್ಟು ಸರಿ? ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ತಹ ಶೀಲ್ದಾರ್ ಜೆ.ಬಿ. ಮಾರುತಿ ಒತ್ತುವರಿದಾರರಿಗೆ ನೋಟಿಸ್ ನೀಡಿರುವುದು ಬಿಟ್ಟರೆ? ಮತ್ತೇನು ಮಾಡಿಲ್ಲ ಎಂದು ಅಪಾದಿಸಿದರು.
ಕ್ಷೇತ್ರದತ್ತ ಸುಳಿಯುತ್ತಿಲ್ಲ: ಶಾಸಕ ಬಾಲಕೃಷ್ಣ ಅವರ ಮನೆ ಬಾಗಿಲಿಗೆ ಬಡಾವಣೆ ನಿವಾಸಿಗಳೂ ಸಾಕಷ್ಟುಬಾರಿ ಅಲೆದರೂ ಅವರು ಓಟ್ ಬ್ಯಾಂಕ್ ರಾಜ ಕಾರಣ ಮಾಡುತ್ತಿದ್ದಾರೆ. ಇನ್ನು ಶಾಸಕರ ಬೆಂಬಲಿಗರೆನ್ನಲಾದ ಅನಿಲ್ ಪತ್ನಿ ರೇಖಾ ವಾರ್ಡ್‌ನಸದಸ್ಯೆ. ಈ ವರೆಗೂ ವಾರ್ಡ್‌ಗೆ ಭೇಟಿ ನೀಡಿ ಜನರಸಮಸ್ಯೆ ಕೇಳುತ್ತಿಲ್ಲ, ಪುರಸಭಾ ಅಧ್ಯಕ್ಷ ನವೀನ್‌ಕೂಡ ಇತ್ತ ಸುಳಿಯುತ್ತಿಲ್ಲ, ಇದನ್ನು ಗಮನಿಸಿದರೆಜನಪ್ರತಿನಿಧಿಗಳು ರಾಜಕಾಲುವೆ ಒತ್ತುವರಿ ಮಾಡಿರುವ ಪ್ರಭಾವಿಗಳ ಪರ ಇರುವುದು ಮೇಲ್ನೋ ಟಕ್ಕೆತಿಳಿಯುತ್ತಿದೆ ಎಂದು ಹೇಳಿದರು.
ಕೋರ್ಟ್ ಮೆಟ್ಟಿಲೇರಲು ಚಿಂತನೆ: ವಾರ್ಡ್‌ನಲ್ಲಿಸಮುದಾಯ ಭವನ ಇದ್ದು, ತಿಂಗಳಲ್ಲಿ ಹತ್ತಾರುವಿವಾಹಗಳು ನಡೆಯುತ್ತಿವೆ. ಅಲ್ಲಿನ ಕೊಳಚೆ ನೀರು ಮುಂದೆ ಹರಿಯುತ್ತಿಲ್ಲ. ಇದರಿಂದ ಸಾಕಷ್ಟು ತೊಂದರೆ ಆಗುತ್ತಿದೆ. 8 ವರ್ಷದಿಂದ ಸಮಸ್ಯೆ ಬಗೆಹರಿಸದೇ ಅಧಿಕಾರಿಗಳು ಹಣವಂತರ ಪರವಾಗಿ ನಿಲ್ಲುತ್ತಿದ್ದಾರೆ. ಇದೇ ರೀತಿಯಲ್ಲಿ ಮುಂದುವರಿದರೆ ಮಿನಿ ವಿಧಾನಸೌಧ, ಪುರಸಭೆ ಮುಂದೆ ಧರಣಿ ನಡೆಸಲಾಗುವುದು. ಇಲ್ಲವೆ, ಲೋಕಾಯುಕ್ತ ಕೋರ್ಟ್ ಮೆಟ್ಟಿಲು ಏರಲಾಗುವುದು ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಉದಯಗಿರಿಬಡಾವಣೆ ವಾಸಿ ಗಳಾದ ನಾಗರಾಜು, ಚೇತನ್, ಆನಂದ್, ಮಂಜು ಇತರರು ಉಪಸ್ಥಿತರಿದ್ದರು.