Advertisement

ಬಸ್‌ ನಿಲ್ದಾಣಕ್ಕೆ ರಾಜಾ ನಾಲ್ವಡಿ ವೆಂಕಟಪ್ಪ ಹೆಸರು

04:13 PM Feb 21, 2018 | |

ಸುರಪುರ: ಶೂರ ಸೇನಾನಿ ರಾಜಾ ನಾಲ್ವಡಿ ವೆಂಕಟಪ್ಪ ನಾಯಕರ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡವ
ಕನಸ್ಸು ನನ್ನದಾಗಿತ್ತು. ಅದು ಇವತ್ತು ಈಡೇರಿದ್ದು ಸಂತಸ ತಂದಿದೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ
ಹರ್ಷ ವ್ಯಕ್ತಪಡಿಸಿದರು.

Advertisement

ರಾಜ್ಯ ಸರಕಾರ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ನಗರದ ಬಸ್‌ ನಿಲ್ದಾಣಕ್ಕೆ ಬಲವಂತ
ಬಹರಿ ಬಹಾದ್ಧೂರ ರಾಜಾ ನಾಲ್ವಡಿ ವೆಂಕಟಪ ನಾಯಕ ನಾಮ ಫಲಕ ಅನಾವರಣಗೊಳಿಸಿದ ನಂತರ ಅವರು
ಮಾತನಾಡಿದರು. 

ಸುರಪುರ ಬಸ್‌ ನಿಲ್ದಾಣಕ್ಕೆ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಎಂದು ನಾಮಕರಣ ಮಾಡಿದ ಕೀರ್ತಿ ರಾಜ್ಯ
ಸರಕಾರಕ್ಕೆ ಸಲ್ಲುತ್ತದೆ. ಸಂಸ್ಥಾನಿಕರ ಹೆಸರು ಪಡೆದ ರಾಜ್ಯದ ಎರಡನೇ ಬಸ್‌ ನಿಲ್ದಾಣ ಎಂಬ ಹೆಗ್ಗಳಿಕೆ ಹೊಂದಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ನಾಮಕರಣಕ್ಕೆ ಸಹಕರಿಸಿದ ಸಚಿವರು, ಶಾಸಕರು, ಸಂಸದರು, ಸ್ಥಳೀಯ ಸಂಸ್ಥೆಗಳ ಪ್ರನಿಧಿಗಳು ಹಾಗೂ ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳನ್ನು ಅಭಿನಂದಿಸುವುದಾಗಿ ಹೇಳಿದರು. ನಾಮಫಲಕಕ್ಕೆ ಪೂಜೆ ಸಲ್ಲಿಸಿದ ನಂತರ ನೂರಾರು ಜನರ ಸಮ್ಮುಖದಲ್ಲಿ ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ಬಸ್‌ ನಿಲ್ದಾಣ ನಾಮಫಲಕವನ್ನು ಅನಾವರಣಗೊಳಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಕವಿತಾ ಎಲಿಗಾರ, ಉಪಾಧ್ಯಕ್ಷ ರಾಣಿ ಸರಿತಾ ನಾಯಕ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸೂಗುರೇಶ ವಾರದ, ನಗರಸಭೆ ಆಯುಕ್ತ ದೇವಿಂದ್ರಪ್ಪ ಹೆಗ್ಗಡೆ, ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಮುಖಂಡರಾದ ವಿಠ್ಠಲ ಯಾದವ, ಸೂಲಪ್ಪ ಕಮತಗಿ, ರಾಜಾ ರೂಪಕುಮಾರ ನಾಯಕ, ರಾಜಾ ವೇಣುಗೋಪಾಲ ನಾಯಕ, ರಾಜಾ ಸಂತೋಷ ನಾಯಕ, ರಾಜಾ ವಿಜಯ ಕುಮಾರ ನಾಯಕ, ಡಾ| ಆರ್‌.ವಿ. ನಾಯಕ, ನಗರಸಭೆ ಸದಸ್ಯ ವೇಣುಮಾಧವ ನಾಯಕ, ಪಾರಪ್ಪ ಗುತ್ತೇದಾರ, ರಾಜಾ ಜೈ ರಾಮ ನಾಯಕ,
ಎಕ್ಬಾಲ ವರ್ತಿ, ಮನೋಹರ ಕುಂಟೋಜಿ, ಶಿವುಕುಮಾರ ಹಳ್ಳದ, ಮಾನಪ್ಪ ಪ್ಯಾಪ್ಲಿ, ಮಾನಪ್ಪ ಚಳ್ಳಿಗಿಡ
ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next