Advertisement
ಇಲ್ಲಿಯ ನಗರಸಭೆಯ ಸಭಾಂಗಣದಲ್ಲಿ ಬುಧವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ಹಾಳಾದ ಪೈಪ್ಲೈನ್ಗಳನ್ನು ಶೀಘ್ರ ರಿಪೇರಿ ಮಾಡಿ ಕೆಟ್ಟು ಹೋಗಿರುವ ಕೊಳವೆ ಬಾವಿ ಮತ್ತು ಕೈ ಪಂಪ್‌ಗಳನ್ನು ದುರಸ್ತಿಗೊಳಿಸಬೇಕು. ಅಗತ್ಯವಿರುವ ವಾರ್ಡ್‌ಗಳಲ್ಲಿ ಬೋರವೆಲ್ ಕೊರೆಸಬೇಕು.
Related Articles
Advertisement
ಪೌರಾಯುಕ್ತ ದೇವಿಂದ್ರ ಹೆಗಡೆ ಮಾತನಾಡಿ, ನಗರಸಭೆಯು ನಗರದ ನೀರಿನ ಸಮಸ್ಯೆಗೆ ಆದ್ಯತೆ ನೀಡಿದೆ. ಪ್ರತಿಯೊಂದುವಾರ್ಡ್ಗಳಿಗೆ ಕ್ರಮಬದ್ಧವಾಗಿ ನೀರು ಸರಬರಾಜು ಮಾಡಲಾಗುತ್ತಿದೆ. ವಾರ್ಡ್‌ಗಳನ್ನು ಬಯಲು ಶೌಚಾಲಯ ಮುಕ್ತಗೊಳಿಸಲು ಪ್ರಾಮಾಣಿಕ ಪ್ರಯತ್ನ ಮುಂದುವರೆಸಲಾಗಿದೆ. ನಗರದಲ್ಲಿ 8,775 ಮನೆಗಳಿದ್ದು, ಆ ಪೈಕಿ 6,426 ಮನೆಗಳಲ್ಲಿ ಶೌಚಾಲಯವಿದೆ. 2,249 ಮನೆಗಳಲ್ಲಿ ಶೌಚಾಲಯಗಳಿಲ್ಲ. 9 ನೂರು ಶೌಚಾಲಯಗಳ ಅನುದಾನ ಲಭ್ಯವಿದೆ. ಶೀಘ್ರದಲ್ಲಿಯೇ ಎರಡನೆ ಹಂತದ ಹಣವನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತಿದೆ. ವಾರ್ಡ್ ನಂ.5,7,8,11,18,19,20,21 ವಾರ್ಡ್‌ಗಳು ಬಯಲು ಶೌಚಾಲಯ ಮುಕ್ತವಾಗಿವೆ. ಇನ್ನುಳಿದವುಗಳಿಗೆ ನಗರಸಭೆ ಸದಸ್ಯರ ಸಹಕಾರ ನೀಡಬೇಕು ಎಂದು ಇತರೆ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಆಡಳಿತ ಮತ್ತು ಪ್ರತಿ ಪಕ್ಷದ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ನಗರಸಭೆ ಅಧ್ಯಕ್ಷೆ ಕವಿತಾ ಎಲಿಗಾರ, ಉಪಾಧ್ಯಕ್ಷೆ ರಾಣಿ ಸರಿತಾನಾಯಕ ವೇದಿಕೆಯಲ್ಲಿದ್ದರು. ಸುರೇಶ ವಿಭೂತೆ ವರದಿ ವಾಚನೆ ಮಾಡಿದರು. ವ್ಯವಸ್ಥಾಪಕ ಯಲ್ಲಪ್ಪನಾಯಕ ಡೊಣ್ಣಿಗೇರಾ, ಎಇಇ ಪರಶುರಾ ಮ, ಎಇ ಸುನೀಲನಾಯಕ. ಆರ್‌ಐ ವೆಂಕಟೇಶ, ಸುರೇಂದ್ರ ಕರಕಳ್ಳಿ ಮತ್ತು ಜೆಸ್ಕಾಂ ಅಧಿಕಾರಿಗಳು ಇದ್ದರು. 36 ಸಾವಿರ ವೆಚ್ಚದಲ್ಲಿ ಮೊಬೈಲ್ ಖರೀದಿ
36 ಸಾವಿರ ವೆಚ್ಚದಲ್ಲಿ ಅಧ್ಯಕ್ಷರಿಗೆ ಮೊಬೈಲ್ ಎಂದು ಖರ್ಚಿನಲ್ಲಿ ತೋರಿಸಲಾಗಿದೆ. ಇದು ಯಾವ ಆಧಾರದಲ್ಲಿ ಕೊಡಿಸಿದ್ದೀರಿ. ಟ್ಯಾಂಕರ್ ನೀರಿನ ಸರಬರಾಜು ಸೇರಿದಂತೆ ಇತರೆ ಖರ್ಚು ವೆಚ್ಚದಲ್ಲಿ ಅನುಮಾನ ಕಂಡು ಬರುತ್ತಿದೆ ಎಂದು ವಿರೋಧ ಪಕ್ಷದ ಸದಸ್ಯರು ಆಕ್ಷೇಪಣೆ ಎತ್ತಿದರು. ಇದಕ್ಕೆ ಪಕ್ಷ ಭೇದ ಮರೆತು ಎಲ್ಲಾ ಸದಸ್ಯರು ಧ್ವನಿಗೂಡಿಸಿದರು. ಪೌರಾಯುಕ್ತರು ಸಮರ್ಪಕವಾಗಿ ಉತ್ತರಿಸಲು ತಡಬಡಾಯಿಸಿದರು. ಶಾಸಕರು ಮಧ್ಯ ಪ್ರವೇಶಿಸಿ ಈ ಬಗ್ಗೆ ನಂತರ ಪರಿಶೀಲಿಸೋಣ ಎಂದು ಹೇಳಿ ವಾತಾವರಣ ತಿಳಿಗೊಳಿಸಿದರು.