Advertisement

ಭಾರತೀಯ ರಾಜ್‌ ಶಾ ಚೊಚ್ಚಲ White House press briefing

12:09 PM Feb 09, 2018 | Team Udayavani |

ವಾಷಿಂಗ್ಟನ್‌ : ರಾಜ್‌ ಶಾ ಅವರು ಅಮೆರಿಕದ ಶ್ವೇತಭವನದಲ್ಲಿ ತಮ್ಮ ಚೊಚ್ಚಲ ದೈನಂದಿನ ಪತ್ರಿಕಾ ಗೋಷ್ಠಿ ನಡೆಸುವ ಮೂಲಕ ಈ  ಸಾಧನೆ ಮಾಡಿರುವ ಮೊತ್ತ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 

Advertisement

ಶ್ವೇತ ಭವನದ ಪ್ರಧಾನ ಉಪ ಮಾಧ್ಯಮ ಕಾರ್ಯದರ್ಶಿಯಾಗಿರುವ ಶಾ ಅವರು ಶ್ವೇತ ಭವನದ ಮಾಧ್ಯಮ ವಿಭಾಗದಲ್ಲಿ ಅತ್ಯುನ್ನತ ಹುದ್ದೆ ಹೊಂದಿರುವ ಪ್ರಪ್ರಥಮ ಭಾರತೀಯ ಅಮೆರಿಕನ್‌ ಎನಿಸಿದ್ದಾರೆ. 

 ಶಾ ಅವರು ತಮ್ಮ ಚೊಚ್ಚಲ press briefing ನಡೆಸುವ ಮುನ್ನ ಅವರ ಮುಖ್ಯಸ್ಥೆಯಾಗಿರುವ ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಸಾರಾ ಸ್ಯಾಂಡರ್‌ಸ್‌ ಅವರು ಶಾ ಅವರನ್ನು ಪರಿಚಯಿಸುತ್ತಾ, ಶಾ ಅವರು ಅಧ್ಯಕ್ಷ ಟ್ರಂಪ್‌ ಆಡಳಿತೆಯ ಅತ್ಯುತ್ಕೃಷ್ಟ ಮತ್ತು ಅತ್ಯುಜ್ವಲ ಪ್ರತಿಭೆಯಾಗಿದ್ದಾರೆ ಎಂದು ಪ್ರಶಂಸೆಯ ಮಾತುಗಳನ್ನಾಡಿದರು. 

33ರ ಹರೆಯದ ಶಾ ಅವರು ಈ  ಹುದ್ದೆಗೆ ಕಳೆದ ವರ್ಷ ಸೆಪ್ಟಂಬರ್‌ನಲಿ ನೇಮಕಗೊಂಡಿದ್ದರು. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next