Advertisement

‘ಶಿಲ್ಪಾ ಶೆಟ್ಟಿಗೆ ಮಾನನಷ್ಟವಾಗಲು ಕಾರಣವೇನು?: ನಟಿ ಪರ ವಕೀಲರಿಗೆ ಪ್ರಶ್ನೆಗಳ ಸುರಿಮಳೆ  

04:49 PM Jul 30, 2021 | Team Udayavani |

ಮುಂಬೈ :  ಮಾಧ್ಯಮಗಳ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಕೊಂಚ ಹಿನ್ನಡೆಯಾಗಿದ್ದು, ‘’ಶಿಲ್ಪಾ ಶೆಟ್ಟಿ ಅತ್ತಿದ್ದಾರೆ ಎಂದು ವರದಿ ಪ್ರಕಟ ಮಾಡಿದರೆ ಅದು ಮಾನ ಹಾನಿ ಹೇಗಾಗುತ್ತದೆ?’’ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ.

Advertisement

ನೀಲಿ ಸಿನಿಮಾ ನಿರ್ಮಾಣ ಪ್ರಕರಣದಡಿ ಶಿಲ್ಪಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಕುರಿತು ನಡೆದ ಬೆಳವಣೆಗೆಗಳ ಕುರಿತು ಮಾಧ್ಯಮಗಳು ವರದಿ ಮಾಡಿದ್ದವು. ಇದರಿಂದ ಕೆರಳಿದ ಶಿಲ್ಪಾ ಶೆಟ್ಟಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ಮಾಧ್ಯಮಗಳು ನನ್ನ ಹಾಗೂ ನನ್ನ ಕುಟುಂಬದ ಬಗ್ಗೆ ತಪ್ಪಾದ, ಅವಹೇಳನಕಾರಿ, ಸುಳ್ಳು ಮಾನಹಾನಿಕರ ಹೇಳಿಕೆಗಳನ್ನು ಪ್ರಕಟಿಸುತ್ತಿವೆ. ಈ ಮೂಲಕ ಖಾಸಗಿತನಕ್ಕೆ ಚ್ಯುತಿ ತರುತ್ತಿವೆ ಎಂದು ಮಾನನಷ್ಟ  ಹೂಡಿದ್ದ ಶಿಲ್ಪಾ, ಅಲ್ಲದೆ, ತಮಗೆ 25 ಕೋಟಿ ರೂ. ಮತ್ತು ಅದರೊಂದಿಗೆ ವರ್ಷಕ್ಕೆ ಶೇ 18 ಬಡ್ಡಿಯೊಂದಿಗೆ ಹಣ ಪಾವತಿಸಬೇಕು ಎಂದು ಕೋರಿದ್ದರು.

ಇಂದು (ಜು.30) ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಜಿಎಸ್​ ಪಟೇಲ್​ ಅವರು, ‘ಶಿಲ್ಪಾ ಶೆಟ್ಟಿಗೆ ಮಾನನಷ್ಟವಾಗಲು ಕಾರಣವೇನು? ಸಾರ್ವಜನಿಕ ಕ್ಷೇತ್ರದಲ್ಲಿರುವ ವ್ಯಕ್ತಿಯ ಬಗ್ಗೆ ನೀವು ಮಾತನಾಡುತ್ತಿದ್ದೀರಿ. ಇದು ಅವರ ಜೀವನದ ಒಂದು ಭಾಗ. ಈ ಹಿಂದೆ ಕೂಡ ಈ ವಿಚಾರಕ್ಕೆ ಸಂಬಂಧಿಸಿ ಹಲವು ತೀರ್ಪು ನೀಡಲಾಗಿತ್ತು. ಎಷ್ಟು ಬಾರಿ ಇದನ್ನೇ ಹೇಳಬೇಕು? ಪೊಲೀಸ್​ ಮೂಲಗಳು ಹೇಳಿವೆ ಎಂದು ವರದಿಯಾದರೆ ಅದು ಎಂದಿಗೂ ಮಾನಹಾನಿಯಾಗುವುದಿಲ್ಲ. ಶಿಲ್ಪಾ ಶೆಟ್ಟಿ ಅತ್ತಿದ್ದಾರೆ ಎಂದು ವರದಿ ಪ್ರಕಟ ಮಾಡಿದರೆ ಅದು ಮಾನ ಹಾನಿ ಹೇಗಾಗುತ್ತದೆ?’ ಎಂದು ಶಿಲ್ಪಾ ಶೆಟ್ಟಿ ಪರ ವಕೀಲರಿಗೆ ಪ್ರಶ್ನೆ ಮಾಡಿದ್ದಾರೆ.

ಇನ್ನು ‘ಓದುಗರನ್ನು ಸೆಳೆಯಲು ತಪ್ಪಾದ ಸುದ್ದಿ ಪ್ರಕಟ ಮಾಡಲಾಗಿದೆ’ ಎಂದು ಶಿಲ್ಪಾ ಶೆಟ್ಟಿ ಪರ ವಕೀಲರು ವಾದ ಮಂಡಿಸಿದರು. ಇದೆ ವೇಳೆ ಮಹತ್ವದ ಮಾತೊಂದು ಹೇಳಿರುವ ನ್ಯಾಯಮೂರ್ತಿಗಳು ಶಿಲ್ಪಾ ಶೆಟ್ಟಿಯವರ ಮನವಿ ಮಾಧ್ಯಮ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next