Advertisement

2000 ಕೋಟಿ ರೂ ಬಿಟ್‌ ಕಾಯಿನ್‌ ಹಗರಣ:EDಯಿಂದ ರಾಜ್‌ ಕುಂದ್ರಾ ವಿಚಾರಣೆ

03:09 PM Jun 05, 2018 | |

ಮುಂಬಯಿ: 2,000 ಕೋಟಿ ರೂಪಾಯಿಯ  ಬಿಟ್‌ ಕಾಯಿನ್‌ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಮಂಗಳವಾರ ಉದ್ಯಮಿ ರಾಜ್‌ ಕುಂದ್ರಾಗೆ ಸಮನ್ಸ್‌ ಜಾರಿ ಮಾಡಿ ವಿಚಾರಣೆ ನಡೆಸಿದೆ.

Advertisement

ಬಿಟ್‌ ಕಾಯಿನ್‌ ಹಗರಣದ ಪ್ರಮುಖ ಆರೋಪಿಗಳಲ್ಲೊಬ್ಬನಾದ ಅಮಿತ್‌  ಭಾರದ್ವಾಜ್‌ ವಿಚಾರಣೆ ವೇಳೆ ರಾಜ್‌ ಕುಂದ್ರಾ ಹೆಸರು ಹೇಳಿದ್ದ. 

ಐಟಿ ಕೂಡ ಹಗರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿದ್ದು , ಕೆಲ ದಿನಗಳ ಹಿಂದೆ ದಿನಂಪ್ರತಿ  1 ಕೋಟಿ ರೂಪಾಯಿಗೂ ಹೆಚ್ಚು  ಮೌಲ್ಯದ ಬಿಟ್‌ ಕಾಯಿನ್‌ ಬಳಕೆ ದಾರರಿಗೆ ನೊಟೀಸ್‌ ಜಾರಿ ಮಾಡಿತ್ತು. 

ರಾಜ್‌ ಕುಂದ್ರಾ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ಪತಿ.ಹಗರಣಕ್ಕೆ ಸಂಬಂಧಿಸಿ ಹಲವು ಬಾಲಿವುಡ್‌ ಮಂದಿಯನ್ನು ವಿಚಾರಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next